ವೀಡಿಯೊ..: ಚಲಿಸುತ್ತಿದ್ದ ಬೈಕ್‌ ಸವಾರನಿಗೆ ಹಾವು ಕಡಿದು ಸ್ಥಳದಲ್ಲೇ ಸಾವು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ದ್ವಿಚಕ್ರವಾಹನದಲ್ಲಿದ್ದ ವ್ಯಕ್ತಿಯೊಬ್ಬನಿಗೆ ನಾಗರ ಹಾವು ಕಚ್ಚಿ ಆತ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಹಾವು ಕಚ್ಚಿದ ಅವರು ಕೆಲವೇ ಕ್ಷಣಗಳಲ್ಲಿ ಅವರು ನಿಧನರಾಗಿದ್ದಾರೆ.
ಇಂದೋರ್‌ನ ಮೊವ್ ಪೊಲೀಸ್ ಠಾಣೆ ವ್ಯಾಪ್ತಿಯ ತೇಲಿ ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮನೀಶ ಎಂದು ಗುರುತಿಸಲಾಗಿದ್ದು, ಅವರು ಹಾವು ಹಿಡಿಯುವುದರಲ್ಲಿ ಪರಿಣಿತರು ಎನ್ನಲಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ತನ್ನ ಸ್ನೇಹಿತನೊಂದಿಗೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ಸ್ಥಳದಲ್ಲೇ ಸಾವು
ಬೈಕ್‌ ಮೇಲೆ ಮನೀಶ ತನ್ನ ಎರಡೂ ಕೈಗಳಲ್ಲಿ ಹಾವನ್ನು ಹಿಡಿದು ಕುಳಿತುಕೊಂಡಿದ್ದರು. ಬೈಕ್‌ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಹಾವು ಅವರಿಗೆ ಕಚ್ಚಿದೆ. ಅವರು ತನ್ನ ಸ್ನೇಹಿತನಿಗೆ ಬೈಕ್ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಆತ ಬೈಕ್‌ ನಿಲ್ಲಿಸುವಾಗಲೇ ಅವರು ಬೈಕ್‌ನಿಂದ ಕೆಳಗೆ ಬೀಳುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ತೇಲಿ ಖೇಡಾ ಗ್ರಾಮದ ದನದ ಕೊಟ್ಟಿಗೆಗೆ ಹಾವು ನುಗ್ಗಿರುವ ಬಗ್ಗೆ ಮನೀಶ್‌ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಪಡೆದ ಹಾವು ಹಿಡಿಯುವ ಮನೀಶ ತನ್ನ ಸ್ನೇಹಿತರೊಬ್ಬರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಕೆಲವೇ ನಿಮಿಷಗಳಲ್ಲಿ ದನದ ಕೊಟ್ಟಿಗೆಯಲ್ಲಿದ್ದ ದೊಡ್ಡ ಹಾವನ್ನು ಹಿಡಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಮನೀಶ ಹಾವನ್ನು ಕಾಡಿಗೆ ಬಿಡಲು ತನ್ನ ಸ್ನೇಹಿತನ ಬೈಕ್‌ನಲ್ಲಿ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಬೈಕ್‌ನಲ್ಲಿ ಸ್ವಲ್ಪ ದೂರ ಪ್ರಯಾಣಿಸಿದ ನಂತರ ಮನೀಶ ತನ್ನ ಸ್ನೇಹಿತನಿಗೆ ಬೈಕ್ ನಿಲ್ಲಿಸಲು ಹೇಳಿದ್ದಾರೆ.
ಸ್ನೇಹಿತ ಒಂದು ಬದಿಗೆ ನಿಲ್ಲಿಸುವಾಗಲೇ ಮನೀಶ ಬೈಕಿನಿಂದ ಕೆಳಗೆ ಬಿದ್ದಿದ್ದಾರೆ. ಬೈಕ್‌ನಿಂದ ಬಿದ್ದ ಯುವಕ ಒಮ್ಮೆಲೇ ಮೇಲೇಳಲು ಯತ್ನಿಸಿದರಾದರೂ ತಕ್ಷಣವೇ ಮತ್ತೆ ಕೆಳಗೆ ಬಿದ್ದಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದವರಿಗೂ ಏನಾಯಿತು ಎಂದು ಅರ್ಥವಾಗಲಿಲ್ಲ. ಸ್ವಲ್ಪ ಸಮಯದ ನಂತರ ಅಕ್ಕಪಕ್ಕದವರು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಇಲ್ಲಿ ಪ್ರಾಥಮಿಕ ಪರೀಕ್ಷೆಯ ನಂತರ ಮನೀಶ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಘಟನೆ ನಡೆದ ಕೆಲ ಸಮಯದ ನಂತರ ತೆಲಿಖೇಡ ನಿವಾಸಿಗಳು ಸರ್ಪ ಮಿತ್ರಕ್ಕೆ ಕರೆ ಮಾಡಿದ್ದಾರೆ. ಸರ್ಪಮಿತ್ರದವರು ಹಾವನ್ನು ಹಿಡಿದು ಪ್ರದೇಶದಿಂದ ದೂರದಲ್ಲಿರುವ ಇಂದೋರ್ ಅರಣ್ಯದಲ್ಲಿ ಬಿಟ್ಟಿದ್ದಾರೆ. ಸರ್ಪಮಿತ್ರನ ಪ್ರಕಾರ ಹಾವು ನಾಗರ ಹಾವಾಗಿತ್ತು.
ಘಟನೆಯ ವಿಡಿಯೋ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಮನೀಶ ಹಾವು ಹಿಡಿಯುವುದರಲ್ಲಿ ನಿಪುಣರಾಗಿದ್ದರು ಎನ್ನಲಾಗಿದೆ.
ಮನೀಶಗೆ ಎರಡು ಬಾರಿ ಹಾವು ಕಚ್ಚಿದ ಪರಿಣಾಮ ಮನೀಶ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದೋರ್ ಸುತ್ತಮುತ್ತಲಿನ ಅರಣ್ಯಗಳಲ್ಲಿ ನಾಗರಹಾವು ಮತ್ತು ಇತರ ವಿಷಕಾರಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement