ಏಷ್ಯನ್ ಗೇಮ್ಸ್ 2023 : ಶೂಟಿಂಗ್-ಮಹಿಳೆಯರ 25 ಮೀ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

ಹ್ಯಾಂಗ್‌ಝೌ : ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಭಾರತದ ಮನು ಭಾಕರ್, ಎಸ್.ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಭಾರತವು ಒಟ್ಟು 1759 ಅಂಕಗಳನ್ನು ಗಳಿಸಿತು, 1756 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗಳಿಸಿದ ಚೀನಾವನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದುಕೊಂಡಿತು. ಕೊರಿಯಾ ಗಣರಾಜ್ಯವು 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಅರ್ಹತಾ ಸುತ್ತಿನಲ್ಲಿ 590 ಅಂಕಗಳೊಂದಿಗೆ, ಮನು ಅಗ್ರಸ್ಥಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
ಇಶಾ ಕೂಡ 586 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಗಳಿಸಿ, ಶ್ಲಾಘನೀಯವಾಗಿ ಪ್ರದರ್ಶನ ನೀಡಿದರು. 583 ಅಂಕಗಳ ಹೊರತಾಗಿಯೂ ರಿದಮ್ ಅವರು, ಪ್ರತಿ ದೇಶಕ್ಕೆ ಕೇವಲ ಇಬ್ಬರು ಶೂಟರ್‌ಗಳಿಗೆ ಅವಕಾಶ ನೀಡುವ ನಿಯಮದಿಂದಾಗಿ ಫೈನಲ್‌ ಪ್ರವೇಶ ಪಡೆಯುವುದರಿಂದ ವಂಚಿತರಾದರು. ಮನು ಮೊದಲು ಅರ್ಹತೆ ಪಡೆದರೆ, ಇಶಾ ಐದನೇ ಮತ್ತು ರಿದಮ್ ಸಾಂಗ್ವಾನ್ ಏಳನೇ ಅರ್ಹತೆ ಪಡೆದರು.
ಇದಕ್ಕೂ ಮುನ್ನ ನಡೆದ 50 ಮೀಟರ್ ರೈಫಲ್ 3 ಪೊಸಿಷನ್ಸ್ ಮಹಿಳಾ ತಂಡ ವಿಭಾಗದಲ್ಲಿ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಬೆಳ್ಳಿ ಪದಕ ಗೆದ್ದುಕೊಂಡರು. ನಡೆಯುತ್ತಿರುವ ಏಷ್ಯಾಡ್‌ನಲ್ಲಿ ಭಾರತವು ನಾಲ್ಕು ಚಿನ್ನ, ಐದು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು 16 ಪದಕಗಳನ್ನು ಈವರೆಗೆ ಪಡೆದಿದೆ.

ಪ್ರಮುಖ ಸುದ್ದಿ :-   ದೆಹಲಿ ಅಬಕಾರಿ ನೀತಿ ಪ್ರಕರಣ: ಸಿಬಿಐ ಪ್ರಕರಣದಲ್ಲೂ ಕೇಜ್ರಿವಾಲಗೆ ಸುಪ್ರೀಂ ಕೋರ್ಟ್‌ ಜಾಮೀನು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement