ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ ಕಠಿಣ ಸಂದೇಶ : ಹಜ್ ಯಾತ್ರಿಕರ ಸೋಗಿನಲ್ಲಿ ನಿಮ್ಮ ಭಿಕ್ಷುಕರು, ಜೇಬುಗಳ್ಳರನ್ನು ಕಳುಹಿಸಬೇಡಿ…!

ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಮುಜುಗರದ ಸನ್ನಿವೇಶದಲ್ಲಿ, ಸೌದಿ ಅರೇಬಿಯಾವು ಅದಕ್ಕೆ ಖಡಕ್‌ ಸಂದೇಶ ನೀಡಿದೆ. ಹಜ್ ಯಾತ್ರಿಕರ ಸೋಗಿನಲ್ಲಿ ನಿಮ್ಮ ಭಿಕ್ಷುಕರು, ಜೇಬುಗಳ್ಳರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಯಾಕೆಂದರೆ ಸೌದಿ ಅರೇಬಿಯಾಕ್ಕೆ ಹೋಗುವ ಹೆಚ್ಚಿನ ಪಾಕಿಸ್ತಾನಿಗಳು ಭಿಕ್ಷಾಟನೆ ಅಥವಾ ಜೇಬುಗಳ್ಳತನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಸಾಗರೋತ್ತರ ಪಾಕಿಸ್ತಾನಿಗಳ-ಕಾರ್ಯದರ್ಶಿ ಝೀಶನ್ ಖಾನ್ಜಾಡಾ ಅವರು ದೃಢೀಕರಿಸಿದ್ದಾರೆ. ಅವರು ಬುಧವಾರ ಸಾಗರೋತ್ತರ ಪಾಕಿಸ್ತಾನಿಗಳಿಗೆ ಸೆನೆಟ್ಟಿನ ಸ್ಥಾಯಿ ಸಮಿತಿಯ ಸಭೆಯಲ್ಲಿ, ಹೆಚ್ಚಿನ ಪಾಕಿಸ್ತಾನಿಗಳು ವಿದೇಶ ಪ್ರವಾಸದ ವೇಳೆ ಉದ್ದೇಶಪೂರ್ವಕವಾಗಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಪ್ರತಿಪಾದಿಸಿದರು ಎಂದು ಪಾಕಿಸ್ತಾನ ಇಂಗ್ಲಿಷ್ ವೆಬ್‌ಸೈಟ್ ದಿ ನ್ಯೂಸ್ ವರದಿ ಮಾಡಿದೆ.

90% ಪಾಕಿಸ್ತಾನಿಗಳು ಸೌದಿಯಲ್ಲಿ ಜೇಬುಗಳ್ಳತನದಲ್ಲಿ ತೊಡಗಿದ್ದಾರೆ….
ಆಘಾತಕಾರಿ ಹೇಳಿಕೆಯಲ್ಲಿ, ಅಧ್ಯಕ್ಷತೆ ವಹಿಸಿದ್ದ ರಾಣಾ ಮಹಮೂದುಲ್ ಹಸನ್ ಕಾಕರ್ ಅವರು, ಸುಮಾರು 90 ಪ್ರತಿಶತದಷ್ಟು ಪಾಕಿಸ್ತಾನಿ ನಾಗರಿಕರು “ತೀರ್ಥಯಾತ್ರೆ” ನೆಪದಲ್ಲಿ ಮಧ್ಯಪ್ರಾಚ್ಯ ದೇಶಕ್ಕೆ ಪ್ರಯಾಣಿಸುತ್ತಾರೆ. ಅಲ್ಲದೆ, ಮಕ್ಕಾದ ದೊಡ್ಡ ಮಸೀದಿಯೊಳಗೆ ಬಂಧಿಸಲಾದ ಹೆಚ್ಚಿನ ಪಿಕ್‌ಪಾಕೆಟ್‌ ಮಾಡುವವರು ಪಾಕಿಸ್ತಾನಿ ಪ್ರಜೆಗಳು ಎಂದು ಸೌದಿ ಅರೇಬಿಯಾವು ಪಾಕಿಸ್ತಾನದ ಅಧಿಕಾರಿಗಳಿಗೆ ತಿಳಿಸಿದೆ ಎಂದು ಸಮಿತಿಗೆ ತಿಳಿಸಿದ್ದಾರೆ.
“ಇರಾಕ್ ಮತ್ತು ಸೌದಿ ಅರೇಬಿಯಾದ ರಾಯಭಾರಿಗಳು ತಮ್ಮ ದೇಶದ ಜೈಲುಗಳು [ಅನಧಿಕೃತ ಚಾನಲ್‌ಗಳ ಮೂಲಕ ದೇಶಕ್ಕೆ ಪ್ರವೇಶಿಸುವ ಪಾಕಿಸ್ತಾನಿ ಭಿಕ್ಷುಕರಿಂದಾಗಿ] ಎಂದು ತುಂಬಿವೆ ನಮಗೆ ದೂರಿದ್ದಾರೆ. ಈ ಸಮಸ್ಯೆಯು ಈಗ ಮಾನವ ಕಳ್ಳಸಾಗಣೆಯ ವರ್ಗಕ್ಕೆ ಸೇರಿದೆ” ಎಂದು ಅವರು ಹೇಳಿರುವುದಾಗಿ ಮಾಧ್ಯಮವು ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ಪ್ರತಿವರ್ಷ ಜೂನ್ 25ರಂದು ʼಸಂವಿಧಾನ ಹತ್ಯಾ ದಿವಸʼ ಆಚರಣೆ; ಅಮಿತ್ ಶಾ ಘೋಷಣೆ

ನೇಪಾಳ ಕೂಡ ಪಾಕಿಸ್ತಾನಕ್ಕಿಂತ ಹೆಚ್ಚು ನುರಿತವರನ್ನು ಹೊಂದಿದೆ…
ಇದಲ್ಲದೆ, ಅಧ್ಯಕ್ಷ ಕಾಕರ್ ಅವರು ಆಘಾತಕಾರಿ ಹೇಳಿಕೆಯಲ್ಲಿ, ಜಪಾನ್‌ ದೇಶವು 3,40,000 ನುರಿತ ಜನರ ಅವಶ್ಯಕತೆ ಬಗ್ಗೆ ಹೇಳಿದ ನಂತರ ಕೇವಲ 200 ಪಾಕಿಸ್ತಾನಿಗಳು ಜಪಾನ್‌ಗೆ ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಮತ್ತೊಂದೆಡೆ, 1,50,000 ಭಾರತೀಯರು ಮತ್ತು ನೇಪಾಳದಿಂದ 91,000 ಜನರು ಜಪಾನ್‌ಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ನಾವು 50,000 ನಿರುದ್ಯೋಗಿ ಇಂಜಿನಿಯರ್‌ಗಳನ್ನು ಹೊಂದಿದ್ದೇವೆ… ಆದರೆ ನೇಪಾಳವು ಒಟ್ಟು 3 ಕೋಟಿ ಜನಸಂಖ್ಯೆಯನ್ನು ಹೊಂದಿದ್ದರೂ ತಮ್ಮ ಜನರಿಗೆ ಜಪಾನೀಸ್ ಭಾಷೆಯಲ್ಲಿ ತರಬೇತಿ ನೀಡಲು [ಮತ್ತು ಅವರನ್ನು ಕಳುಹಿಸಲು] ಯಶಸ್ವಿಯಾಗಿದೆ” ಎಂದು ಅವರು ಹೇಳಿದರು.
ಇದಲ್ಲದೆ, ಸೌದಿ ಸರ್ಕಾರಕ್ಕೆ ನ್ಯೂಟೆಕ್‌ನ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮಾಡಿದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ ಕಾಕರ್, ಇಸ್ಲಾಮಾಬಾದ್ ಕಳುಹಿಸಿದ ಆರಂಭಿಕ ಪ್ರಸ್ತಾವನೆಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಮದ್ಯ ನೀತಿ ಪ್ರಕರಣ : ಅರವಿಂದ ಕೇಜ್ರಿವಾಲಗೆ ದೊಡ್ಡ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement