ವೀಡಿಯೊ : ಮೊಬೈಲ್‌ ವೀಡಿಯೊ ಕಾಲ್‌ನಲ್ಲಿ ಮಾತನಾಡುತ್ತ ಬ್ಯಾಗ್‌ ಅನ್ನು ಥ್ರೊಟಲ್‌ ಮೇಲೆ ಇರಿಸಿದ ಸಿಬ್ಬಂದಿ ; ಹಳಿತಪ್ಪಿದ ರೈಲು | ವೀಕ್ಷಿಸಿ

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಮಂಗಳವಾರ ನಿಂತಿದ್ದ ರೈಲೊಂದು ಪ್ಲಾಟ್‌ಫಾರ್ಮ್‌ ಏರಿದ ವಿಲಕ್ಷಣ ಘಟನೆ ನಡೆದ ನಂತರ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಮಂಗಳವಾರ ತಡರಾತ್ರಿ ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲು ಹಳಿಗಳನ್ನು ಬಿಟ್ಟು ಪ್ಲಾಟ್‌ಫಾರ್ಮ್‌ಗೆ ಹತ್ತಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅಪಘಾತ ನಡೆದ ಕ್ಷಣವು ರೈಲಿನಲ್ಲಿದ್ದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದ ನಂತರ ರೈಲ್ವೆಯ ಉದ್ಯೋಗಿ ಎಂಜಿನ್ ಕ್ಯಾಬಿನ್‌ಗೆ ಪ್ರವೇಶಿಸುವುದನ್ನು ವೀಡಿಯೊ ತೋರಿಸುತ್ತದೆ.

ಉದ್ಯೋಗಿ ಯಾರೊಂದಿಗೋ ವೀಡಿಯೊ ಕಾಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತದೆ. ನಂತರ ಆತ ತನ್ನ ಬ್ಯಾಗ್ ಅನ್ನು ಎಂಜಿನ್‌ನ ಥ್ರೊಟಲ್‌ನಲ್ಲಿ ಇರಿಸುತ್ತಾನೆ ಮತ್ತು ಮತ್ತೆ ತನ್ನ ಫೋನ್‌ನಲ್ಲಿ ನಿರತನಾಗುತ್ತಾನೆ. ಬ್ಯಾಗ್‌ನ ಒತ್ತಡದಿಂದಾಗಿ ಥ್ರೊಟಲ್ ಮುಂದಕ್ಕೆ ಚಲಿಸುತ್ತದೆ ಮತ್ತು ರೈಲನ್ನು ಪ್ಲಾಟ್‌ಫಾರ್ಮ್‌ಗೆ ತಳ್ಳುತ್ತದೆ.
ರೈಲು ನಂತರ ಚಲಿಸಲು ಪ್ರಾರಂಭಿಸುತ್ತದೆ, ಡೆಡ್ ಎಂಡ್ ಅನ್ನು ಒಡೆಯುತ್ತದೆ ಮತ್ತು ಅದರ ಅರ್ಧದಷ್ಟು ಭಾಗವು ಪ್ಲಾಟ್‌ಫಾರ್ಮ್‌ಗೆ ಏರುತ್ತದೆ, ಇದನ್ನು ವೀಡಿಯೊ ತೋರಿಸುತ್ತದೆ.

ನಿರ್ಲಕ್ಷ್ಯದ ಕಾರಣಕ್ಕೆ ವೀಡಿಯೊದಲ್ಲಿ ಮಾತನಾಡುತ್ತಿದ್ದ ಉದ್ಯೋಗಿ ಸಚಿನ್ ಸೇರಿದಂತೆ ಐವರನ್ನು ಅಮಾನತುಗೊಳಿಸಲಾಗಿದೆ ಮತ್ತು ಘಟನೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತೇಜ್ ಪ್ರಕಾಶ ಅಗರವಾಲ ಹೇಳಿದ್ದಾರೆ.
ಸಚಿನ್ ಆ ಸಮಯದಲ್ಲಿ ಪಾನಮತ್ತನಾಗಿದ್ದನೇ ಎಂಬುದರ ಬಗ್ಗೆಯೂ ಸಹ ತನಿಖೆ ನಡೆಯುತ್ತಿದೆ. ಸಚಿನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಮದ್ಯ ಸೇವನೆಯ ನಿಖರವಾದ ಮಟ್ಟವನ್ನು ಕಂಡುಹಿಡಿಯಲು ಅವರ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ,” ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement