ಮಥುರಾ: ಯಮುನಾ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 10 ಸಾವು

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಭೀಕರ ದೋಣಿ ದುರಂತವೊಂದು ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಯಮುನಾ ನದಿಯಲ್ಲಿ ಪ್ರವಾಸಿಗರಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಹತ್ತು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಪಂಜಾಬ್‌ ಲುಧಿಯಾನ ಮೂಲದವರು ಎಂದು ಗುರುತಿಸಲಾಗಿದ್ದು, ಇವರಲ್ಲಿ ಏಳು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ. ಪಂಜಾಬ್‌ನಿಂದ ವೃಂದಾವನದ ದರ್ಶನಕ್ಕೆಂದು ಬಂದಿದ್ದ ಸುಮಾರು 30 ಪ್ರವಾಸಿಗರ … Continued

ವೀಡಿಯೊ..| ಕಚ್ಚಿದ ಹಾವನ್ನು ತೋರಿಸಲು ಜೀವಂತ ನಾಗರಹಾವನ್ನು ಜೇಬಿನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಇ-ರಿಕ್ಷಾ ಚಾಲಕ..!

 ಮಥುರಾ : ಉತ್ತರ ಪ್ರದೇಶದ ಮಥುರಾದ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ  ಮಂಗಳವಾರ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮಥುರಾ ಬೈಪಾಸ್ ನಿವಾಸಿ, ಇ-ರಿಕ್ಷಾ ಚಾಲಕ ದೀಪಕ ರಜಪೂತ್ ಎಂಬವರು ತಮ್ಮ ಜೇಬಿನಲ್ಲಿ ಜೀವಂತ ನಾಗರಹಾವನ್ನು ಇಟ್ಟುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ತಮ್ಮ ಕೈಯಲ್ಲಿದ್ದ ಹಾವನ್ನು ವೈದ್ಯರಿಗೆ ತೋರಿಸುತ್ತಾ, “ಡಾಕ್ಟರೇ, ದಯವಿಟ್ಟು ನನಗೆ … Continued

ಸಂತರ ತೀವ್ರ ವಿರೋಧಕ್ಕೆ ಮಣಿದ ಆಯೋಜಕರು ; ಮಥುರಾದಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು

ಲಕ್ನೋ: ಹೊಸ ವರ್ಷದ ಅಂಗವಾಗಿ ಮಥುರಾದಲ್ಲಿ ಆಯೋಜಿಸಲಾಗಿದ್ದ ನಟಿ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ಸ್ಥಳೀಯ ಸಂತರು ಮತ್ತು ಧಾರ್ಮಿಕ ಮುಖಂಡರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಬ್ರಜ್ ಭೂಮಿಯ ಧಾರ್ಮಿಕ ಸಂಪ್ರದಾಯಗಳಿಗೆ ವಿರುದ್ಧವಾಗಿವೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಅವರು ಅಸಮಾಧಾನವ್ಯಕ್ತಪಡಿಸಿದ್ದಾರೆ. ಕೋಟಿಗಟ್ಟಲೆ ಭಕ್ತರಿಗೆ ಆಧ್ಯಾತ್ಮಿಕ ಕೇಂದ್ರವಾಗಿರುವ ಪವಿತ್ರ ಮಥುರಾದಲ್ಲಿ … Continued

ವೀಡಿಯೊ | ಮಥುರಾ ದೇಗುಲದ ಬಳಿ ಗ್ರಾಹಕರಿಗಾಗಿ ಲಸ್ಸಿ ಮಾರಾಟಗಾರರ ನಡುವೆ ಮಣ್ಣಿನ ಕುಡಿಕೆಗಳಲ್ಲಿ ಹೊಡೆದಾಟ ; ಒಬ್ಬರಿಗೆ ಗಾಯ

ಮಥುರಾ (ಉತ್ತರ ಪ್ರದೇಶ): 2021 ರಲ್ಲಿ ಚಾಟ್ ಗಾಗಿ ನಡೆದ ಬಾಗ್‌ಪತ್ ಕದನ ನಡೆಯಿತು. ಮತ್ತು ಜುಲೈ 2025 ರಲ್ಲಿ ನಡೆದ ಮಥುರಾ ಕದನವು ಲಸ್ಸಿಗಾಗಿ ನಡೆಯಿತು. ದೇವಾಲಯ ಪಟ್ಟಣವಾದ ಮಥುರಾದಲ್ಲಿ ಗ್ರಾಹಕರನ್ನು ತಮ್ಮ ಅಂಗಡಿಗಳಿಗೆ ಸೆಳೆಯುವ ಬಗ್ಗೆ ನಡೆದ ಮಾತಿನ ಚಕಮಕಿ ಲಸ್ಸಿ ಅಂಗಡಿ ಮಾಲೀಕರ ಎರಡು ಗುಂಪುಗಳ ನಡುವೆ ಕಲ್ಲು-ದೊಣ್ಣೆಗಳಿಂದ ಹೊಡೆದಾಟಕ್ಕೆ ಕಾರಣವಾಯಿತು. … Continued

ಮಥುರಾದಲ್ಲಿ ಭವ್ಯ ಕೃಷ್ಣ ದೇವಾಲಯ ನಿರ್ಮಾಣ ಆಗುವವರೆಗೆ ದಿನಕ್ಕೆ ಒಂದೇ ಊಟ ಮಾಡುವ ಪ್ರತಿಜ್ಞೆ ಮಾಡಿದ ರಾಜಸ್ಥಾನದ ಸಚಿವ…!

ನವದೆಹಲಿ : ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಭವ್ಯ ಮಂದಿರ ನಿರ್ಮಾಣ ಆಗುವವರೆಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವುದಾಗಿ ರಾಜಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರ್ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ. “ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸದಿದ್ದರೆ, ಇಂದಿನಿಂದ ನಾನು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತೇನೆ” ಎಂದು ದಿಲಾವರ್ ಕೋಟಾದ ತಮ್ಮ … Continued

“ಹೈಕೋರ್ಟ್ ಆದೇಶಕ್ಕೆ ತಡೆ ನೀಡುವುದಿಲ್ಲ”: ಮಥುರಾದ ಕೃಷ್ಣ ಜನ್ಮಭೂಮಿ ಭೂ ವಿವಾದದ ಕುರಿತು ಸುಪ್ರೀಂ ಕೋರ್ಟ್

ನವದೆಹಲಿ : ಮಥುರಾದ ಕೃಷ್ಣ ಜನ್ಮಭೂಮಿ ಭೂ ವಿವಾದದಲ್ಲಿ ವಿವಾದಿತ ಭೂಮಿಯಲ್ಲಿನ ಶಾಹಿ ಈದ್ಗಾ ಸರ್ವೆ ನಡೆಸಲು ಅನುಮತಿ ನೀಡಿದ ಆದೇಶ ತಡೆಹಿಡಿಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೃಷ್ಣನ ಜನ್ಮಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಹೇಳಿಕೊಂಡಿವೆ ಮತ್ತು ಸಮೀಕ್ಷೆಗೆ ಒತ್ತಾಯಿಸಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸ್ಥಳೀಯ ನ್ಯಾಯಾಲಯವು ಮನವಿಯನ್ನು ಅಂಗೀಕರಿಸಿತು. ಆದರೆ ಮುಸ್ಲಿಂ … Continued

ವೀಡಿಯೊ : ಮೊಬೈಲ್‌ ವೀಡಿಯೊ ಕಾಲ್‌ನಲ್ಲಿ ಮಾತನಾಡುತ್ತ ಬ್ಯಾಗ್‌ ಅನ್ನು ಥ್ರೊಟಲ್‌ ಮೇಲೆ ಇರಿಸಿದ ಸಿಬ್ಬಂದಿ ; ಹಳಿತಪ್ಪಿದ ರೈಲು | ವೀಕ್ಷಿಸಿ

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಮಂಗಳವಾರ ನಿಂತಿದ್ದ ರೈಲೊಂದು ಪ್ಲಾಟ್‌ಫಾರ್ಮ್‌ ಏರಿದ ವಿಲಕ್ಷಣ ಘಟನೆ ನಡೆದ ನಂತರ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮಂಗಳವಾರ ತಡರಾತ್ರಿ ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲು ಹಳಿಗಳನ್ನು ಬಿಟ್ಟು ಪ್ಲಾಟ್‌ಫಾರ್ಮ್‌ಗೆ ಹತ್ತಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅಪಘಾತ ನಡೆದ ಕ್ಷಣವು ರೈಲಿನಲ್ಲಿದ್ದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಎಲ್ಲಾ ಪ್ರಯಾಣಿಕರು … Continued

ರೈಲು ನಿಲ್ದಾಣದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಕದ್ದು ಕಳ್ಳ ಪರಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೋ: ಮಥುರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪರಾಧ ಸೆರೆಯಾಗಿದೆ. ಈ ಘಟನೆಯ ವೀಡಿಯೋ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಎಸ್ಕೇಪ್ ಆಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ … Continued

ಮಥುರಾ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ಜನದಟ್ಟಣೆಯಿಂದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಸಾವು

ಮಥುರಾ: ಉತ್ತರ ಪ್ರದೇಶದ ಮಥುರಾದ ದೇವಸ್ಥಾನವೊಂದರಲ್ಲಿ ಜನ್ಮಾಷ್ಟಮಿ ಆಚರಣೆ ವೇಳೆ ಜನದಟ್ಟಣೆಯಿಂದಾಗಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಇಂದು, ಶನಿವಾರ ತಿಳಿಸಿದ್ದಾರೆ. ಬಂಕೆ ಬಿಹಾರಿ ದೇವಸ್ಥಾನದಲ್ಲಿ ಮಧ್ಯರಾತ್ರಿ ಕೃಷ್ಣಾಷ್ಟಮಿ ಆಚರಣೆ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ಭಕ್ತರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಿತು. ಆರತಿ … Continued

ಅಯೋಧ್ಯೆ, ಮಥುರಾ ದೇವಾಲಯಗಳ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶದ ಸರ್ಕಾರ

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆ ಮತ್ತು ಮಥುರಾದಲ್ಲಿನ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ಮತ್ತು ಮಥುರಾದ ಕೃಷ್ಣ ಜನ್ಮಭೂಮಿಯ ಸಮೀಪವಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಅಯೋಧ್ಯೆಯಲ್ಲಿ ಮದ್ಯದಂಗಡಿ ಮಾಲೀಕರ ಪರವಾನಗಿಯನ್ನೂ ಸರ್ಕಾರ ರದ್ದುಗೊಳಿಸಿದೆ. ಈ … Continued