ಶಿರಸಿ : ರಾಷ್ಟ್ರಧ್ವಜ ವಿರೂಪಗೊಳಿಸಿದ ಆರೋಪ, ವ್ಯಕ್ತಿಯ ಬಂಧನ

ಶಿರಸಿ : ರಾಷ್ಟ್ರದ್ವಜಕ್ಕೆ  ವಿರೂಪಗಳಿಸಿ ಅಪಮಾನ ಪ್ರಕರಣದಲ್ಲಿ ಶಿರಸಿ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಮನಬೈಲಿನ ಉಮರ್ ಫಾರೂಕ್ ಶೇಕ್ (38 )ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಈದ್ ಮಿಲಾದ್ ಹಬ್ಬದಂದು ರಾಷ್ಟ್ರದ್ವಜದಲ್ಲಿದ್ದ ಆಶೋಕ ಚಕ್ರ ಇರುವ ಜಾಗದಲ್ಲಿ ಗುಮ್ಮಟದ ಚಿತ್ರ ಅಳವಡಿಸಿ ಧರ್ಮದ ಘೋಷಣೆಯ ಅಕ್ಷರ ಅಳವಡಿಸಿ ಮನೆಯ ಮೇಲೆ ಸಾರ್ವಜನಿಕರಿಗೆ ಕಾಣುವಂತೆ ಹಾರಿಸಿದ್ದ ಎಂದು ಆರೋಪಿಸಲಾಗಿದೆ.
ಇದನ್ನು ಗಮನಿಸಿದ್ದ ನಗರ ಠಾಣೆಯ ಬೀಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ ಹಾಗೂ ಉಮರ್ ಫಾರೂಕ್ ವಿರುದ್ಧ ಐಪಿಸಿ ಸೆಕ್ಷನ್ 2 , ರಾಷ್ಟ್ರಧ್ವಜಕ್ಕೆ ಅವಮಾನ ತಡೆಗಟ್ಟುವ ಕಾಯ್ದೆ ಅಡಿಯಲ್ಲಿ ಪ್ರಕರದ ದಾಖಲಿಸಿದ್ದಾರೆ.

5 / 5. 4

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ 400 ಪಶುವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಜೂನ್‌ 24 ಕೊನೆಯ ದಿನ

ನಿಮ್ಮ ಕಾಮೆಂಟ್ ಬರೆಯಿರಿ

advertisement