ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸುವಂತೆ ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸರ್ಕಾರಿ ನೌಕರರ ಬೃಹತ್‌ ಸಮಾವೇಶ

ನವದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ನ್ಯಾಷನಲ್ ಮೂವ್‌ಮೆಂಟ್ ಫಾರ್ ಓಲ್ಡ್ ಪೆನ್ಶನ್ ಸ್ಕೀಮ್ (ಎನ್‌ಎಂಒಪಿಎಸ್) ಅಕ್ಟೋಬರ್ 1 ರಂದು ಆಯೋಜಿಸಿದ್ದ ‘ಪಿಂಚಣಿ ಶಂಖನಾದ ರ್ಯಾಲಿ’ಗೆ ಪ್ರತಿಭಟನಾಕಾರರ ಸಾಗರವೇ ನೆರೆದಿತ್ತು. ಎನ್‌ಎಂಒಪಿಎಸ್ ನಾಯಕ ವಿಜಯ್ ಕುಮಾರ್ ಬಂಧು ಅವರು , “ಕೇಂದ್ರ ಸರ್ಕಾರ ಒಪಿಎಸ್ ಅನುಮೋದಿಸಿದರೆ, ಅದರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿರುವುದಿಲ್ಲ ಎಂದು ನಮ್ಮ ತಂಡ ನಂಬಿದೆ. ಅದಕ್ಕಾಗಿಯೇ ನಾವು ದೆಹಲಿಯ ರಾಮಲೀಲಾ ಮೈದಾನಕ್ಕೆ (ಪ್ರತಿಭಟಿಸಲು) ಬಂದಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸದಿದ್ದರೆ, ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅದನ್ನು ಪುನಃಸ್ಥಾಪಿಸಲು ಒತ್ತಾಯಿಸಲು “OPS ಫಾರ್ ಓಪಿಎಸ್” ಎಂಬ ಶೀರ್ಷಿಕೆಯ ಅಭಿಯಾನವನ್ನು ಆಯೋಜಿಸುವುದಾಗಿ NMOPS ಹೇಳಿಕೆಯಲ್ಲಿ ತಿಳಿಸಿದೆ.
ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳು ಈಗಾಗಲೇ NPS ನಿಂದ OPS ಗೆ ಮರಳುವುದಾಗಿ ಘೋಷಿಸಿವೆ.

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗಳು ಜೋರಾಗುತ್ತಿದ್ದಂತೆಯೇ, ಹಳೆಯ ಪೆನ್ಶನ್‌ ನೀತಿಯನ್ನು ಮರುಸ್ಥಾಪಿಸುವಂತೆ ಮೋದಿ ಸರ್ಕಾರವನ್ನು ಕಾಂಗ್ರೆಸ್‌ ಒತ್ತಾಯಿಸಿದೆ.
ಈ ಬಗ್ಗೆ X ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಪಕ್ಷವು”ಹಳೆಯ ಪಿಂಚಣಿ ಯೋಜನೆಯು ನೌಕರರ ಹಕ್ಕು. ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿಯನ್ನು ಮರುಸ್ಥಾಪಿಸಿವೆ. ಈ ಬಗ್ಗೆ ನಮ್ಮ ನೀತಿ ಸ್ಪಷ್ಟವಾಗಿದೆ – ನೌಕರರು ತಮ್ಮ ಹಕ್ಕುಗಳನ್ನು ಪಡೆಯಬೇಕು, ”ಎಂದು ಪೋಸ್ಟ್‌ನಲ್ಲಿ ಬರೆದಿದೆ.”ಮೋದಿ ಸರ್ಕಾರವು ಹಳೆಯ ಪಿಂಚಣಿಯನ್ನು ಮರುಸ್ಥಾಪಿಸಬೇಕು, ದೇಶಕ್ಕಾಗಿ ಸೇವೆ ಸಲ್ಲಿಸುವ ಕಾರ್ಮಿಕರನ್ನು ಗೌರವಿಸಬೇಕು” ಎಂದು ಪೋಸ್ಟ್ ಹೇಳಿದೆ.

ಪ್ರಮುಖ ಸುದ್ದಿ :-   ಈತ ವಿಶ್ವದ ಶ್ರೀಮಂತ ಭಿಕ್ಷುಕ ; ಮುಂಬೈನಲ್ಲಿ 2 ಬಿಎಚ್​ಕೆ ಮನೆ ಇರುವ ಮಿಲಿಯನೇರ್ : ಈತನ ಒಟ್ಟು ಆಸ್ತಿ ಎಷ್ಟು ಗೊತ್ತೆ..?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಚಳುವಳಿಗೆ ತಮ್ಮ ಬೆಂಬಲ ನೀಡಿದರು. ಹಳೆಯ ಪೆನ್ಶನ್‌ ಯೋಜನೆ (ಒಪಿಎಸ್)ಯನ್ನು ಮರಳಿ ಸ್ಥಾಪಿಸಬೇಕೆಂಬ ಸರ್ಕಾರಿ ನೌಕರರ ಬೇಡಿಕೆಯನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಎನ್‌ಪಿಎಸ್ ನೌಕರರಿಗೆ ಅನ್ಯಾಯವಾಗಿದೆ. ನಾವು ಪಂಜಾಬ್‌ನಲ್ಲಿ OPS ಅನ್ನು ಜಾರಿಗೊಳಿಸಿದ್ದೇವೆ ಮತ್ತು ದೆಹಲಿ ಸರ್ಕಾರಿ ನೌಕರರಿಗೆ ಇದನ್ನು ಜಾರಿಗೆ ತರಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಅವರು ಎಕ್ಸ್‌ ಪೋಸ್ಟ್ ನಲ್ಲಿ ಬರೆದಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement