ಗೂಗಲ್ ಮ್ಯಾಪ್ ಬಳಸಿ ಕಾರು ಚಾಲನೆ : ಕಾರು ನದಿಗೆ ಬಿದ್ದು ಕೇರಳದ ಇಬ್ಬರು ವೈದ್ಯರು ಸಾವು

ಎರ್ನಾಕುಲಂ : ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಭಾನುವಾರ ಕಾರೊಂದು ಪೆರಿಯಾರ್ ನದಿಗೆ ಉರುಳಿದ ಪರಿಣಾಮ ಇಬ್ಬರು ವೈದ್ಯರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಡಾ.ಅದ್ವೈತ (29) ಮತ್ತು ಡಾ. ಅಜ್ಮಲ್ (29) ಎಂದು ಗುರುತಿಸಲಾಗಿದೆ. ಈ ಇಬ್ಬರು ವೈದ್ಯರು ಇತರ ಮೂವರು ಸ್ನೇಹಿತರ ಜೊತೆ ಜನ್ಮದಿನದ ಪಾರ್ಟಿಯಿಂದ ಹಿಂತಿರುಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಸಹ ಆರೋಗ್ಯ ಸಿಬ್ಬಂದಿ ಎಂದು ಹೇಳಲಾಗಿದೆ.
ರಾತ್ರಿ 12:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೃತ ಇಬ್ಬರು ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಜೋರಾಗಿ ಮಳೆ ಸುರಿಯುತ್ತಿತ್ತು ಮತ್ತು ಕಾರ್‌ ಚಾಲನೆ ಮಾಡುತ್ತಿದ್ದ ಡಾ. ಅದ್ವೈತ ಅವರು ಜಿಪಿಎಸ್ ಟ್ರ್ಯಾಕಿಂಗ್ ಅನ್ನು ಆನ್ ಮಾಡಿ ಗೂಗಲ್ ಮ್ಯಾಪ್‌ ಅನ್ನು ಅನುಸರಿಸುತ್ತಿದ್ದರು ಎಂದು ವರದಿಯಾಗಿದೆ. ಅದನ್ನು ಅನುರಿಸಿ ಅವರು ಹೆಚ್ಚು ಜಲಾವೃತ ಪ್ರದೇಶ ತಲುಪಿದರು, ಮಳೆಯಾಗಿದ್ದರಿಂದ ದಾರಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮತ್ತು ಗೂಗಲ್ ನಕ್ಷೆಗಳು ಸೂಚಿಸಿದಂತೆ ಮುಂದೆ ಹೋದಾಗ ಕಾರು ಪೆರಿಯಾರ್ ನದಿಗೆ ಬಿದ್ದಿತು ಎಂದು ಹೇಳಲಾಗಿದೆ. ಅದ್ವೈತ್ ಮತ್ತು ಅಜ್ಮಲ್ ನೀರಿನಲ್ಲಿ ಮುಳುಗಿದರೆ, ಇತರ ಮೂವರು ಪ್ರಯಾಣಿಕರಾದ ಖಾಸಿಕ್, ಜಿಸ್ಮನ್ ಮತ್ತು ತಮನ್ನಾ – ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಸಮುದ್ರದಲ್ಲಿ ಮುಳುಗಿ ನೀರಿನೊಳಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ...!

ಭಾನುವಾರ ಮಧ್ಯರಾತ್ರಿ 12:30ರ ಸುಮಾರಿಗೆ ಗೋತುರುತ್ ಬಳಿ ಈ ಘಟನೆ ನಡೆದಿದೆ. ಅವರು ಕೊಡಂಗಲ್ಲೂರಿಗೆ ಕಾರಿನಲ್ಲಿ ಹಿಂತಿರುಗುತ್ತಿದ್ದರು ಎಂದು ವಡಕ್ಕೇಕರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಆ ಸಮಯದಲ್ಲಿ ಗೋಚರತೆ ತುಂಬಾ ಕಡಿಮೆಯಾಗಿತ್ತು, ನದಿಯನ್ನು ಗುರುತಿಸುವ ಯಾವುದೇ ಬ್ಯಾರಿಕೇಡ್‌ಗಳು ಮತ್ತು ಸೈನ್‌ಬೋರ್ಡ್‌ಗಳು ಇರಲಿಲ್ಲ ಎಂದು ಅಧಿಕಾರಿ ಹೇಳಿದರು.
ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾಗಿದ್ದಾರೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮೂವರು ಪ್ರಯಾಣಿಕರನ್ನು ಜೀವಂತವಾಗಿ ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲ ಗೆಳೆಯರು ಅದ್ವೈತ ಅವರ ಜನ್ಮದಿನ ಆಚರಿಸಿ ಹಿಂತಿರುಗುತ್ತಿದ್ದರು.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವೈದ್ಯರು ಕೊಡಂಗಲ್ಲೂರಿನ ಎ.ಆರ್. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಅಪಘಾತದ ನಂತರ, ನದಿಯ ದಡದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸದ ಪಿಡಬ್ಲ್ಯೂಡಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಸ್ನೇಕ್ ಬೋಟ್ ರೇಸ್ ನಿಯಮಿತವಾಗಿ ನಡೆಯುತ್ತಿದ್ದುರಿಂದ ಸ್ಥಳೀಯರ ಆಕ್ಷೇಪದಿಂದ ಬ್ಯಾರಿಕೇಡ್‌ಗಳನ್ನು ಹಾಕಲಾಗಿರಲಿಲ್ಲ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಜಯಲಲಿತಾ ಜನ್ಮದಿನವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಿದ ಎಐಎಡಿಎಂಕೆ : ಅವರ ಎಐ ರಚಿತ ಧ್ವನಿ ಕ್ಲಿಪ್ ಬಿಡುಗಡೆ | ಆಲಿಸಿ

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement