ಸತ್ತೈನಾಥರ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಸಿಎಂ ಪುತ್ರಿ-ಉದಯನಿಧಿ ಸ್ಟಾಲಿನ್‌ ಸಹೋದರಿ | ವೀಡಿಯೊ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಪುತ್ರಿ ಹಾಗೂ ಉದಯನಿಧಿ ಸ್ಟಾಲಿನ್‌ ಅವರ ಸಹೋದರಿ ಸೆಂತಾಮರೈ ಸ್ಟಾಲಿನ್ (Senthamarai Stalin) ಅವರು ಮೈಲಾಡುತುರೈ ಜಿಲ್ಲೆಯ ಸಿರ್ಕಾಜಿಯಲ್ಲಿರುವ ಸತ್ತೈನಾಥರ್ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ್ದಾರೆ ಹಾಗೂ ಪ್ರಾರ್ಥನೆ ಸಲ್ಲಿಸಿ ವಿಶೇಷ ದರ್ಶನ ಪಡೆದಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ ಪುತ್ರಿ ದೇವಾಲಯಕ್ಕೆ ಆಗಮಿಸಿದ ವೇಳೆ ಆಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿದೆ. ಸೆಂತಾಮರೈ ಸ್ಟಾಲಿನ್ ಅವರು ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇಗುಲಗಳಿಗೂ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸತ್ತೈನಾಥರ್ ದೇವಾಲಯವು ಬೆಟ್ಟದ ಮೇಲಿರುವ ದೇವಾಲಯವಾಗಿದೆ. ಹಾಗೂ ಮೂರು ಹಂತಗಳಲ್ಲಿ ಭಗವಾನ್ ಶಿವನಿಂದ ಸ್ತೋತ್ರಗಳನ್ನು ಪಡೆದಿದೆ ಎಂಬ ಪ್ರತೀತಿ ಇದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸೆಪ್ಟೆಂಬರ್ 2 ರಂದು ಸನಾತನ ನಿರ್ಮೂಲನಾ ಸಮಾವೇಶ’ ದಲ್ಲಿ ಮಾತನಾಡಿ, ಸನಾತನ ಧರ್ಮ ಒಂದು ಕಾಯಿಲೆ ಇದ್ದಂತೆ ಎಂದು ಹೇಳಿದ್ದರು. ಆಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಇದನ್ನು ನಿರ್ಮೂಲನೆ ಮಾಡಬೇಕು, ಹಾಗೆಯೇ ಸನಾತನ ಧರ್ಮವನ್ನು ವಿರೋಧಿಸಲು ಸಾಧ್ಯವಿಲ್ಲ.  ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದು. ಇದು  ಭಾರೀ ಚರ್ಚೆಗೆ ಗ್ರಾಸವಾಗಿತ್ತು

ಇದಾದ ಕೆಲವೇ ದಿನಗಳ ನಂತರ ಅವರ ಸಹೋದರಿ ಸೆಂತಾಮರೈ ಸ್ಟಾಲಿನ್ ಅವರು ಸಿರ್ಕಾಜಿಯಲ್ಲಿರುವ ಸತ್ತೈನಾಥರ್ ದೇವಸ್ಥಾನಕ್ಕೆ  ಹಾಗೂ ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement