ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ: ದಲಿತರು-ಹಿಂದುಳಿದ ವರ್ಗಗಳು ಯಾರು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ..? ಮೋದಿಯೊ..? ರಾಹುಲ್‌ ಗಾಂಧಿಯೊ..? ಮತ್ತೊಬ್ಬರೊ..?

ನವದೆಹಲಿ: ಬಹುಪಾಲು ಇತರೆ ಹಿಂದುಳಿದ ವರ್ಗಗಳು (OBC) ಮತ್ತು ದಲಿತ ಮತದಾರರು ಲೋಕಸಭೆ ಚುನಾವಣೆ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಬೇಕು ಎಂದು ಬಯಸುತ್ತಾರೆ, ಆದರೆ ಅವರ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೂರದ ಎರಡನೇ ಆಯ್ಕೆಯಾಗಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷಾ ವರದಿ ತಿಳಿಸಿದೆ. .
ದೇಶದ ಶೇಕಡಾ 64 ರಷ್ಟು ಹಿಂದುಳಿದ ವರ್ಗಗಳ ಮತದಾರರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗಬೇಕು ಎಂದು ಶೇಕಡಾ 15 ರಷ್ಟು ಜನ ಬಯಸಿದ್ದು, ಅವರು ದೂರದ ಎರಡನೇ ಸ್ಥಾನದಲ್ಲಿದ್ದಾರೆ. ಇತರ ಆಯ್ಕೆಗಳ ಪೈಕಿ, ಶೇಕಡಾ 5 ರಷ್ಟು ಹಿಂದುಳಿದ ವರ್ಗಗಳ ಮತದಾರರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಅವರನ್ನು ಮುಂದಿನ ಪ್ರಧಾನಿಯಾಗಿ ನೋಡಲು ಬಯಸುತ್ತಾರೆ, ಆದರೆ ಕೇವಲ 3 ಪ್ರತಿಶತದಷ್ಟು ಜನರು ನಿತೀಶಕುಮಾರ ಅವರು ಪ್ರಧಾನಿಯಾಗುವುದನ್ನು ಬಯಸುತ್ತಾರೆ ಎಂದು ಒಪಿನಿಯನ್‌ ಪೋಲ್‌ ಹೇಳಿದೆ.
ಸಮೀಕ್ಷೆಯ ಪ್ರಕಾರ, ದಲಿತ ಸಮುದಾಯದವರಲ್ಲಿ 58%ರಷ್ಟು ಜನರು ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬುದು ತಮ್ಮ ಆದ್ಯತೆ ಎಂದು ಹೇಳಿದ್ದಾರೆ. ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬಹುದು ಎಂದು 20%ರಷ್ಟು ಜನ ಹೇಳಿದ್ದಾರೆ. ಮೂರನೇ ಸ್ಥಾನದಲ್ಲಿ ಮಾಯಾವತಿ ಇದ್ದಾರೆ. 10%ರಷ್ಟು ದಲಿತ ಸಮುದಾಯದ ಜನರು ಅವರು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಶೇಕಡಾ 2 ರಷ್ಟು ಜನರು ಮಾತ್ರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಗೆ ಆದ್ಯತೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡ್ನವೀಸ್‌, ಡಿಸೆಂಗಳಾಗಿ ಏಕನಾಥ ಶಿಂಧೆ, ಅಜಿತ ಪವಾರ್ ಪ್ರಮಾಣ ವಚನ

ನಾಯಕ                                                   OBCs                                  ಪರಿಶಿಷ್ಟರು
ನರೇಂದ್ರ ಮೋದಿ                                       64%                                    58%
ರಾಹುಲ್ ಗಾಂಧಿ                                       15%                                    20%
ನಿತೀಶ್ ಕುಮಾರ್                                      03%                                     –
ಅಖಿಲೇಶ್ ಯಾದವ್                                 05%                                     –
ಮಾಯಾವತಿ                                              –                                        10%
ಮಲ್ಲಿಕಾರ್ಜುನ ಖರ್ಗೆ                                 –                                         02%

ಒಟ್ಟಾರೆಯಾಗಿ ಶೇ.61ರಷ್ಟು ಮತದಾರರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಉಳಿದಂತೆ ಶೇಕಡಾ 21 ರಷ್ಟು ಜನರು ರಾಹುಲ್ ಗಾಂಧಿಯನ್ನು ಬಯಸುತ್ತಾರೆ, 3 ಪ್ರತಿಶತದಷ್ಟು ಜನರು ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರನ್ನು ಬಯಸುತ್ತಾರೆ, ಅವರಲ್ಲಿ ಶೇಕಡಾ 2 ರಷ್ಟು ಜನರು ನಿತೀಶ ಕುಮಾರ ಮತ್ತು ಮಾಯಾವತಿಯನ್ನು ಬಯಸುತ್ತಾರೆ ಮತ್ತು ಶೇಕಡಾ 6 ರಷ್ಟು ಜನರು ಉಳಿದವರು ಯಾರಾದರೂ ಮುಂದಿನ ಪ್ರಧಾನಿಯಾಗಲು ಬಯಸುತ್ತಾರೆ.
ಬಿಹಾರದ ಜಾತಿ ಗಣತಿ ದತ್ತಾಂಶ ಬಿಡುಗಡೆಯಾದ ನಂತರ ದೇಶದ 12 ರಾಜ್ಯಗಳಾದ್ಯಂತ 48 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ನಡೆಸಿತು.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ 4-5 ದಿನ ಮಳೆ ; ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement