ನಮಗೆ ಸಂಬಂಧ ಉಲ್ಬಣಗೊಳ್ಳುವುದು ಬೇಕಿಲ್ಲ, ಭಾರತದ ಜೊತೆ ರಚನಾತ್ಮಕ ಸಂಬಂಧ ಮುಂದುವರಿಯಲಿದೆ : ನಿಜ್ಜರ್ ಹತ್ಯೆಯ ವಿವಾದದ ನಂತರ ಕೆನಡಾ ಪ್ರಧಾನಿ

ಟೊರೊಂಟೊ: ಕೆನಡಾವು ಭಾರತ ಜೊತೆ “ಅತ್ಯಂತ ಸವಾಲಿನ ಸಮಯವನ್ನು” ಎದುರಿಸುತ್ತಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಜಗಳದ ನಡುವೆಯೂ ಕೆನಡಾವು ನವದೆಹಲಿಯೊಂದಿಗೆ “ರಚನಾತ್ಮಕ ಸಂಬಂಧ” ವನ್ನು ಮುಂದುವರೆಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಟ್ರೂಡೊ, ಕೆನಡಾದಲ್ಲಿ ಭಾರತದಲ್ಲಿ ರಾಜತಾಂತ್ರಿಕರನ್ನು ಹೊಂದಿರುವುದು ಮುಖ್ಯವಾಗಿದೆ ಎಂದು ಟೊರೊಂಟೊ ಸನ್ ಪತ್ರಿಕೆ ವರದಿ ಮಾಡಿದೆ. ಭಾರತವು ಕೆನಡಾದ 62 ಕೆನಡಾದ ರಾಜತಾಂತ್ರಿಕರಲ್ಲಿ 41 ಜನರನ್ನು ವಾಪಸ್‌ ಕರೆಸಿಕೊಳ್ಳುವಂತೆ ಒಟ್ಟಾವಕ್ಕೆ ಸೂಚಿಸಿದೆ ಎಂಲಂಡನ್ ಮೂಲದ ಫೈನಾನ್ಷಿಯಲ್ ಟೈಮ್ಸ್ ವರದಿಯ ನಡುವೆ ಜಸ್ಟಿನ್‌ ಟ್ರುಡೊ ಅವರಿಂದ ಈ ಹೇಳಿಕೆ ಬಂದಿದೆ.
ನಿಸ್ಸಂಶಯವಾಗಿ, ನಾವು ಇದೀಗ ಭಾರತದೊಂದಿಗೆ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ” ಎಂದು ಟ್ರೂಡೊ ಹೇಳಿಕೆಯನ್ನು ಉಲ್ಲೇಖಿಸಿ ಕೆನಡಾದ ಪತ್ರಿಕೆ ಸನ್ ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ, 62 ರಾಜತಾಂತ್ರಿಕರಲ್ಲಿ 41 ಮಂದಿಯನ್ನು ದೇಶದಿಂದ ಹಿಂತೆಗೆದುಕೊಳ್ಳುವಂತೆ ಭಾರತವು ಕೆನಡಾವನ್ನು ಕೇಳಿದೆ ಎಂಬ ಫೈನಾನ್ಷಿಯಲ್ ಟೈಮ್ಸ್ ವರದಿಯನ್ನು ಅವರು ದೃಢಪಡಿಸಲಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಕೆನಡಾದಲ್ಲಿ ನೆಲೆಸಿರುವ ರಾಜತಾಂತ್ರಿಕರನ್ನು ತೆಗೆದುಹಾಕಲು ಭಾರತಕ್ಕೆ ಸೂಚಿಸುವ ಮೂಲಕ ಅವರ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳುತ್ತದೆಯೇ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರೂಡೊ ತಮ್ಮ ಸರ್ಕಾರವು ಭಾರತದ ಜೊತೆ ಕೆಲಸ ಮಾಡಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ. ನಾನು ಹೇಳಿದಂತೆ ನಾವು ಉಲ್ಬಣಗೊಳ್ಳುವುದನ್ನು ಬಯಸುವುದಿಲ್ಲ, ಈ ಅತ್ಯಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವ ನಿಟ್ಟಿನಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ” ಎಂದು ಟ್ರೂಡೊ ಹೇಳಿದ್ದಾರೆ ಎಂದು ಅವರನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ CBC ನ್ಯೂಸ್ ವರದಿ ಮಾಡಿದೆ.
ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಒಳಗೊಳ್ಳುವಿಕೆಯ ಬಗ್ಗೆ ಕೆನಡಾದ ಸಂಸತ್ತಿನಲ್ಲಿ ಟ್ರೂಡೊ ಆರೋಪಿಸಿದ ನಂತರ ಕಳೆದ ತಿಂಗಳು ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಉಂಟಾಯಿತು. ಭಾರತವು ಇದನ್ನು “ಅಸಂಬದ್ಧ” ಮತ್ತು “ಪ್ರಚೋದಿತ” ಆರೋಪಗಳು ಎಂದು ಸಾರಾ ಸಗಟಾಗಿ ತಿರಸ್ಕರಿಸಿತು.

ನಿಜ್ಜರ್‌ನನ್ನು ಇಬ್ಬರು ಮುಸುಕುಧಾರಿ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಭಾರತವು 2020 ರಲ್ಲಿ ನಿಜ್ಜರನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.
ಕಳೆದ ತಿಂಗಳು, ಭಾರತವು ಕೆನಡಾವನ್ನು ದೇಶದಲ್ಲಿ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆಗೊಳಿಸುವಂತೆ ಸೂಚಿಸಿತ್ತು, ಪರಸ್ಪರ ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಸಾಮರ್ಥ್ಯ ಮತ್ತು ಶ್ರೇಣಿಯಲ್ಲಿ ಸಮಾನತೆ ಇರಬೇಕು ಎಂದು ಪ್ರತಿಪಾದಿಸಿತ್ತು. ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯ ಗಾತ್ರವು ಕೆನಡಾದಲ್ಲಿ ಬಾರತದಲ್ಲಿ ಇರುವುದಕ್ಕಿಂತ ದೊಡ್ಡದಾಗಿದೆ.
ಭಾರತವು ಅದರ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಮತ್ತು ಭಾರತ ವಿರೋಧಿ ಅಂಶಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕೆನಡಾವನ್ನು ಕೇಳಿದೆ ಮತ್ತು ಕೆನಡಿಯನ್ನರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement