ಇಟಲಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ನಟಿ ಗಾಯತ್ರಿ ಜೋಶಿ-ಪತಿ ವಿಕಾಸ ಪಾರು, ಇಬ್ಬರು ಸಾವು | ವೀಡಿಯೊ

ಮುಂಬೈ: ಶಾರುಖ್ ಖಾನ್ ಅಭಿನಯದ ‘ಸ್ವದೇಸ್’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಗಾಯತ್ರಿ ಜೋಶಿ ಅವರು ತಮ್ಮ ಪತಿ ವಿಕಾಸ್ ಒಬೆರಾಯ್ ಅವರೊಂದಿಗೆ ಇಟಲಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ನಂತರ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸ್ವಿಟ್ಜರ್ಲೆಂಡ್‌ ದಂಪತಿ ಮೃತಪಟ್ಟಿದ್ದಾರೆ.
ಗಾಯತ್ರಿ ಮತ್ತು ಅವರ ಪತಿ ಸಾರ್ಡಿನಿಯಾದಲ್ಲಿ ವಿಹಾರಕ್ಕೆ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯತ್ರಿ ಮತ್ತು ವಿಕಾಸ್ ಅವರ ಕಾರು ಹಲವಾರು ಕಾರುಗಳು ಮತ್ತು ಕ್ಯಾಂಪರ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ವಿಕಾಸ್ ಒಬೆರಾಯ್ ಅವರ ಮ್ಯಾನೇಜರ್ ಪ್ರಕಾರ ದಂಪತಿ ಆರೊಗ್ಯವಾಗಿದ್ದಾರೆ.
ಸಾರ್ಡಿನಿಯಾ ಸೂಪರ್‌ಕಾರ್ ಪ್ರವಾಸದ ಸಮಯದಲ್ಲಿ ಈ ಘಟನೆ ಸಂಭವಿಸಿದೆ, ಇದು ಟೆಯುಲಾಡಾದಿಂದ ಓಲ್ಬಿಯಾಕ್ಕೆ ಐಷಾರಾಮಿ ಕಾರ್ ಮೆರವಣಿಗೆಯನ್ನು ಒಳಗೊಂಡಿದೆ. ಗಾಯತ್ರಿ ಮತ್ತು ಅವರ ಪತಿ ಲಂಬೋರ್ಗಿನಿ ಚಾಲನೆ ಮಾಡುತ್ತಿದ್ದಾಗ ಅವರ ಐಷಾರಾಮಿ ಕಾರು ಫೆರಾರಿ ಮತ್ತು ಕ್ಯಾಂಪರ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.

ವರದಿಯ ಪ್ರಕಾರ ಇದು ಸಾರ್ಡಿನಿಯಾದ ಗ್ರಾಮೀಣ ರಸ್ತೆಯಲ್ಲಿ ಪಲ್ಟಿಯಾಗಿದೆ ಮತ್ತು ಹಲವಾರು ವಾಹನಗಳು ಅಪಘಾತಕ್ಕೀಡಾಗಿವೆ. ಮಾಧ್ಯಮ ವರದಿಗಳ ಪ್ರಕಾರ ಫೆರಾರಿಗೆ ಬೆಂಕಿ ತಗುಲಿ ಪ್ರಯಾಣಿಕರು ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಮೆಲಿಸ್ಸಾ ಕ್ರೌಟ್ಲಿ, 63, ಮತ್ತು ಮಾರ್ಕಸ್ ಕ್ರೌಟ್ಲಿ, 67 ದಂಪತಿ ಮೃತಪಟ್ಟಿದ್ದು, ಅವರು ಮೂಲತಃ ಸ್ವಿಟ್ಜರ್ಲೆಂಡ್‌ನವರಾಗಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಗಾಯತ್ರಿ ಜೋಶಿ ಅವರು ತಮ್ಮ ವೃತ್ತಿಜೀವನವನ್ನು ವೀಡಿಯೊ ಜಾಕಿಯಾಗಿ ಪ್ರಾರಂಭಿಸಿದರು. ಫೆಮಿನಾ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವರು ನಗರವನ್ನು ತೊರೆದರು. ಅವರು 2000 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದ ನಂತರ ಮಿಸ್ ಇಂಟರ್ನ್ಯಾಷನಲ್ 2000 ದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರು ಅಶುತೋಷ್ ಗೋವಾರಿಕರ್ ಅವರ ನಿರ್ದೇಶನದ 2004 ರ ಚಲನಚಿತ್ರ ‘ಸ್ವದೇಸ್’ ಸಿನೆಮಾದಲ್ಲಿ ನಟಿಸಿದರು, ಇದು ಅವರ ಭಾರತೀಯ ಮೂಲದ ಎನ್‌ಆರ್‌ಐ (NRI) ನಾಸಾ (NASA) ಇಂಜಿನಿಯರ್ ಬಗ್ಗೆ ಇರುವ ಕಥೆಯುಳ್ಳ ಸಿನೆಮಾ ಆಗಿದೆ. ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಾಯತ್ರಿ ಜೋಶಿ ಅವರ “ಪ್ರಬುದ್ಧ” ಚಿತ್ರಣಕ್ಕಾಗಿ ಪ್ರಶಂಸಿಸಲಾಯಿತು.
2005 ರಲ್ಲಿ, ಅವರು ಉದ್ಯಮಿ ವಿಕಾಸ್ ಒಬೆರಾಯ್ ಅವರನ್ನು ಮದುವೆಯಾದರು. ಅವರು ಜಾಹೀರಾತು ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ ಮತ್ತು ಹನ್ಸ್ ರಾಜ್ ಹನ್ಸ್ ಅವರ ‘ಝಂಜರಿಯಾ ಮತ್ತು ಜಗಜಿತ್ ಸಿಂಗ್ ಅವರ ‘ಕಘಜ್ ಕಿ ಕಶ್ತಿ’ ಸೇರಿದಂತೆ ಹಲವಾರು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಒಲ್ಲೆ ಎಂದಿದ್ದಕ್ಕೆ ಸೇಡು : ತನ್ನ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿದ ಮಹಿಳಾ ಉದ್ಯಮಿ...!

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement