ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ವೀಡಿಯೊ….: ಕಾಡೆಮ್ಮೆ Vs ಸಿಂಹಗಳ ಭೀಕರ ಕಾಳಗದಲ್ಲಿ ಗೆದ್ದವರು ಯಾರು | ವೀಕ್ಷಿಸಿ

ಕಾಡೆಮ್ಮೆಯೊಂದು ತನ್ನ ಮೇಲೆ ದಾಳಿ ಮಾಡಿದ ಎರಡು ಸಿಂಹಗಳ ಜೊತೆ ಹೋರಾಡುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕಾಡೆಮ್ಮೆ ತನ್ನ ಮುಖ ಹಾಗೂ ಕಾಲನ್ನು ಬಲವಾಗಿ ಹಿಡಿದುಕೊಂಡು ಅದನ್ನು ಕೆಳಕ್ಕೆ ಕಡಹಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಬರುತ್ತದೆ. ಆದರೆ ಕಾಡೆಮ್ಮೆಯೂ ಸಿಂಹಗಳನ್ನು ಹೊಡೆದು ಹೊಡೆದುರುಳಿಸಲು ಯತ್ನಿಸುತ್ತಿರುವುದು ಕಂಡುಬರುತ್ತದೆ.
ನೈಸರ್ಗಿಕ ಆವಾಸಸ್ಥಾನದಲ್ಲಿ ಅಭಯಾರಣ್ಯದಲ್ಲಿ ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಈ ಘಟನೆಯನ್ನು ಸೆರೆಹಿಡಿದಿದ್ದಾರೆ.
X ಪ್ಲಾಟ್‌ಫಾರ್ಮ್‌ನಲ್ಲಿ ಅನಿಮಲ್ ವರ್ಲ್ಡ್ ಹಂಚಿಕೊಂಡ ಕ್ಲಿಪ್‌ನಲ್ಲಿ (ಹಿಂದೆ ಟ್ವಿಟರ್), ಒಂದು ಸಿಂಹವು ಕಾಡೆಮ್ಮೆಯ ಕುತ್ತಿಗೆ ಮತ್ತು ಇನ್ನೊಂದು ಸಿಂಹವು ಬಾಲ ಹಾಗೂ ಕಾಲನ್ನು ಹಿಡಿದುಕೊಂಡಿದ್ದು ಕಾಡೆಮ್ಮೆ ಸಾವು-ಬದುಕಿನ ಹೋರಾಡುವುದು ಕಾಣುತ್ತದೆ

. ಸಿಂಹಗಳ ಬಲವಾದ ಹಿಡಿತಗಳಿಂದ ಬಿಡಿಸಿಕೊಳ್ಳಲು ಕಾಡೆಮ್ಮೆ ಎರಡೂ ಸಿಂಹಗಳನ್ನು ಸುತ್ತು ಹೊಡೆಸುತ್ತದೆ. ಆದರೂ ಸಿಂಹಗಳು ಅದನ್ನು ಬಲವಾಗಿ ಕಚ್ಚಿ ಹಿಡಿದಿದ್ದನ್ನು ಸಡಿಲಗೊಳಿಸುವುದಿಲ್ಲ. ಆದರೂ ಎಮ್ಮೆ ತನ್ನ ಹೋರಾಟ ನಿಲ್ಲಿಸಲಿಲ್ಲ. ಬಹಳ ಹೊತ್ತಿನ ಹೋರಾಟದ ನಂತರ ಕಾಡೆಮ್ಮೆ ತನ್ನ ಪ್ರಯತ್ನದಲ್ಲಿ ಸಪಳವಾಯಿತು. ಅದು ಸಿಂಹಗಳನ್ನು ಬಲವಾಗಿ ಒದೆಯುತ್ತದೆ. ಸಿಂಹಗಳಲ್ಲಿ ಒಂದನ್ನು ಓಡಿಸಲು ತನ್ನ ಶಕ್ತಿಯುತ ಕೊಂಬುಗಳಿಂದ ತಿವಿಯಲು ಮುಂದಾಗುತ್ತದೆ. ಸಿಂಹಗಳು ಅಲ್ಲಿಂದ ಓಡುತ್ತವೆ.
ನಂತರ ಕಾಡೆಮ್ಮೆ ನಂತರ ಸಫಾರಿ ವಾಹನದ ಕಡೆಗೆ ತನ್ನ ಗಮನವನ್ನು ತಿರುಗಿಸುತ್ತದೆ, ಅದರ ಕಡೆಗೆ ದಾಳಿ ಮಾಡುತ್ತದೆ ಮತ್ತು ಶಕ್ತಿಯುತ ಕುಂಬುಗಳಿಂದ ವಾಹನಕ್ಕೆ ಗುದ್ದುತ್ತದೆ. ಆಶ್ಚರ್ಯಕರ ಟ್ವಿಸ್ಟ್‌ನಲ್ಲಿ, ಕಾಡೆಮ್ಮೆ ನಂತರ ಸಿಂಹಗಳನ್ನು ಅಲ್ಲಿಂದ ಕಾಲ್ಕೀಳುವಂತೆ ಮಾಡುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಪ್ರತೀಕಾರವಾಗಿ ಇರಾನ್​ನಿಂದ ಇಸ್ರೇಲ್​ ಮೇಲೆ 200 ಡ್ರೋನ್-ಕ್ಷಿಪಣಿಗಳಿಂದ ದಾಳಿ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

ಅಲ್ಲಿಂದ ಓಡುವ ಮೊದಲು ಕಾಮ್ಮೆ ಮತ್ತೊಮ್ಮೆ ತನ್ನ ಕೊಂಬುಗಳಿಂದ ಸಫಾರಿ ವಾಹನವನ್ನು ಮತ್ತೆ ಗುದ್ದುತ್ತದೆ.
ಅದು ಹತ್ತಿರದ ಕೊಳದಲ್ಲಿ ಆಶ್ರಯ ಪಡೆಯುತ್ತದೆ. ಸಿಂಹ ಅಲ್ಲಿಗೂ ಹಿಂಬಾಲಿಸಿ ಹೋದಾಗ ಕಾಡೆಮ್ಮೆ ತಿರುಗಿ ನಿಲ್ಲುತ್ತದೆ. ಸಿಂಹ ಅಲ್ಲಿಂದ ಓಡುತ್ತದೆ. ಕಾಡೆಮ್ಮೆ ಕೊಳದಲ್ಲಿ ಮುಂದೆ ಸಾಗುವಲ್ಲಿಗೆ ವೀಡಿಯೊ ಮುಕ್ತಾಯಗೊಳ್ಳುತ್ತದೆ.
ಕಾಡಿನ ಹೋರಾಟ ಯಾವಾಗಲೂ ಉಗ್ರ ಮತ್ತು ತೀವ್ರವಾಗಿರುತ್ತದೆ; ಕೆಲವೊಮ್ಮೆ, ಅವರು ಪ್ರಕೃತಿಯಲ್ಲಿನ ಅಚ್ಚರಿಯ ಘಟನೆಗೆ ಕಾರಣವಾಗುತ್ತಾರೆ. ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಯಾರು ಸಾಯುತ್ತಾರೆ ಎಂದು ಊಹಿಸುವುದು ಕಷ್ಟ. ಸಣ್ಣ ಅವಕಾಶ ಸಿಕ್ಕರೂ ಸಂಘರ್ಷದ ದಿಕ್ಕೇ ಬದಲಾಗುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement