ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆ ಮೇಲೆ ಐಟಿ ದಾಳಿ: 40 ಕೋಟಿ ರೂ. ಗಳಿಗೂ ಅಧಿಕ ಹಣ ಪತ್ತೆ

ಬೆಂಗಳೂರು : ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆತ್ಮಾನಂದ ಕಾಲೋನಿಯ ಮನೆಯೊಂದರ ಕೊಠಡಿಯಲ್ಲಿ ಮಂಚದಡಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಆರ್​​.ಟಿ.ನಗರದ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ​​ ಅವರ ಫ್ಯ್ಲಾಟ್​​​​​​ ಮೇಲೆ ದಾಳಿ ಮಾಡಿದ ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ವೇಳೆ ಬೆಡ್​​ ರೂಮಿ​ನ ಮಂಚದ ಕೆಳಗೆ 23 ಬಾಕ್ಸ್​​ನಲ್ಲಿ ಅಂದಾಜು 40 ಕೋಟಿ ರೂಗಳಿಗೂ ಅಧಿಕ ಹಣ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಐಟಿ ಅಧಿಕಾರಿಗಳು ಪ್ರದೀಪ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಐಟಿ ಅಧಿಕಾರಿಗಳು ಗುರುವಾರ ತಡರಾತ್ರಿ ಏಕಾಏಕಿ ಅಶ್ವತ್ಥಮ್ಮ ಅವರ ಗಂಡ, ಗುತ್ತಿಗೆದಾರ ಅಂಬಿಕಾಪತಿ ಮನೆ, ಆರ್​​ಟಿ ನಗರದ ವೈಟ್​ ಗೌಸ್​ನಲ್ಲಿರುವ ಅವರ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್​ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಅಶ್ವಥಮ್ಮ ಅವರು ವಾರ್ಡ್ ನಂಬರ್ 95ರಲ್ಲಿ ಕಾರ್ಪೋರೇಟರ್ ಆಗಿದ್ದರು.

ಪ್ರಮುಖ ಸುದ್ದಿ :-   ‘ಸಂಪಾದಿತಲೇ ಪರಾಕ್...’: ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದ ಗೊರವಯ್ಯ; ಇದರ ಅರ್ಥವೇನು..?

ಅಂಬಿಕಾಪತಿ ಮನೆ ಹಾಗೂ ಅಂಬಿಕಾಪತಿ ತಮ್ಮ ಪ್ರದೀಪ ವಾಸವಿರುವ ಮನೆ ಮೇಲೆ ದಾಳಿ ನಡೆದಿದೆ. ಆಶ್ವತ್ಥಮ್ಮ ಹೆಸರಲ್ಲಿರುವ ಆತ್ಮಾನಂದ ಕಾಲೋನಿಯಲ್ಲಿರುವ ಈ ಫ್ಲಾಟ್ ನಲ್ಲಿ ಅಂಬಿಕಾಪತಿ ಪತ್ನಿಯ ಸಹೋದರ ಪ್ರದೀಪ ವಾಸ ಮಾಡುತ್ತಿದ್ದು, ಮನೆಯಲ್ಲೇ ಸುಮಾರು 23 ಬಾಕ್ಸ್‍ಗಳಲ್ಲಿ 42 ಕೋಟಿ ರೂಪಾಯಿ ಸಿಕ್ಕಿದೆ ಎಂದು ವರದಿಯಾಗಿದೆ.
ದಾಳಿ ವೇಳೆ ಮನೆಯ ಬೆಡ್‍ರೂಂನಲ್ಲಿ 42 ಕೋಟಿ ಹಣ ಸಿಕ್ಕಿದೆ. ಬಾಕ್ಸ್ ಗಳಲ್ಲಿ 500 ರೂಪಾಯಿ ನೋಟಿನ ಕಂತೆಗಳು ಪತ್ತೆಯಾಗಿದೆ. 23 ಬಾಕ್ಸ್ ನಲ್ಲಿ ಒಂದೊಂದು ಬಾಕ್ಸ್ ಅಲ್ಲೂ 1ಕೋಟಿ 65 ಲಕ್ಷ ಹಣ ಕೂಡಿಡಲಾಗಿತ್ತು ಎಂದು ವರದಿಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement