ಗಾಜಾ ಆಸ್ಪತ್ರೆ ಮೇಲಿನ ದಾಳಿಗೂ, ನಮಗೂ ಸಂಬಂಧವಿಲ್ಲ: ಸಾಕ್ಷ್ಯ ಬಿಡುಗಡೆ ಮಾಡಿದ ಇಸ್ರೇಲ್

500 ಸಾವಿಗೆ ಕಾರಣವಾದ ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ದಾಳಿಯ ಬಗ್ಗೆ ಹಮಾಸ್-ಇಸ್ರೇಲ್‌ ಪರಸ್ಪರ ಆರೋಪ-ಪ್ರತಯಾರೋ ಮಾಡುತ್ತಿರುವ ಬೆನ್ನಲ್ಲೇ, ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಾವು ಹೇಳಿರುವುದಕ್ಕೆ ಇಸ್ರೇಲ್‌ ಸಾಕ್ಷ್ಯ ತೋರಿಸಿದೆ.
ಆಸ್ಪತ್ರೆಯಲ್ಲಿ ವೈಮಾನಿಕ ದಾಳಿಯಿಂದ ಸ್ಫೋಟ ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಇಸ್ರೇಲ್, ಇಸ್ಲಾಮಿ ಜಿಹಾದ್‌ ಗುಂಪು ರಾಕೆಟ್‌ ಮಿಸ್‌ ಆದ ಬಗ್ಗೆ ಹಮಾಸ್ ಇಸ್ಲಾಮಿಕ್ ಜಿಹಾದ್ ನಾಯಕನೊಂದಿಗೆ ಚರ್ಚಿಸುತ್ತಿರುವ ಆಡಿಯೋ ರೆಕಾರ್ಡಿಂಗ್ ಅನ್ನು ಈಗ ಬಿಡುಗಡೆ ಮಾಡಿದೆ.
ಇಸ್ರೇಲ್‌ನತ್ತ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿಗಳು ಉಡಾವಣೆ ಮಾಡಿದ ರಾಕೆಟ್ ಮಿಸ್‌ ಫೈರ್‌ ಆಗಿ ಆಸ್ಪತ್ರೆಗೆ ಅಪ್ಪಳಿಸಿತು ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ತಿಳಿಸಿದ್ದಾರೆ. ʻಇಸ್ಲಾಮಿಕ್ ಜಿಹಾದ್ʼ ಗುಂಪು ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಸಂಘಟನೆಯಾಗಿದೆ. ಹಮಾಸ್‌ ತನ್ನ ವಿರುದ್ಧ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಆರೋಪ ಮಾಡಿದ ಬಳಿಕ ಗಾಜಾದಲ್ಲಿ ಉಡಾವಣೆ ಮಾಡಲಾದ ರಾಕೆಟ್‌ ನಿಂದಲೇ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದೇ ಎಂಬ ತನ್ನ ಹೇಳಿಕೆಗೆ ಪುರಾವೆಯಾಗಿ ಈ ಆಡಿಯೋ ಸಾಕ್ಷಿಯನ್ನು ತೋರಿಸಿತು.

ಬುಧವಾರ ಯುದ್ಧಪೀಡಿತ ಇಸ್ರೇಲ್‌ಗೆ ಬಂದಿಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಗಾಜಾ ಆಸ್ಪತ್ರೆಯ ಸ್ಫೋಟವು ಗಾಜಾದಲ್ಲಿ ಭಯೋತ್ಪಾದಕ ಗುಂಪು ಹಾರಿಸಿದ ರಾಕೆಟ್‌ನ ಮಿಸ್‌ ಫೈರ್‌ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. ಬೈಡನ್‌ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಬಾಂಬ್ ದಾಳಿಗೆ ಇಸ್ರೇಲ್ ಹೊಣೆಯಲ್ಲ ಎಂದು ಅಮೆರಿಕ ನಿರ್ಣಯಿಸಿದೆ.
ಹೇಳಿಕೆಯೊಂದರಲ್ಲಿ, ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್, “ಗಾಜಾ ಪಟ್ಟಿಯಲ್ಲಿರುವ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಿನ್ನೆ ನೂರಾರು ನಾಗರಿಕರನ್ನು ಕೊಂದ ಸ್ಫೋಟಕ್ಕೆ ಇಸ್ರೇಲ್ ಜವಾಬ್ದಾರನಲ್ಲ ಎಂದು ಅಮೆರಿಕ ಸರ್ಕಾರ ನಿರ್ಣಯಿಸಿದೆ. ನಮ್ಮ ಮೌಲ್ಯಮಾಪನವು ಗುಪ್ತಚರ, ಕ್ಷಿಪಣಿ ಚಟುವಟಿಕೆ, ಓವರ್‌ಹೆಡ್ ಚಿತ್ರಣ ಮತ್ತು ಓಪನ್ ಸೋರ್ಸ್ ವೀಡಿಯೊ ಮತ್ತು ಘಟನೆಯ ಚಿತ್ರಗಳು ಸೇರಿದಂತೆ ಲಭ್ಯವಿರುವ ವರದಿಯನ್ನು ಆಧರಿಸಿದೆ ಎಂದು ಅದು ಹೇಳಿದೆ.

ಮಂಗಳವಾರ ರಾತ್ರಿ ನಡೆದ ಸ್ಫೋಟದ ಹಿಂದೆ ಯಾರೆಂಬುದರ ಬಗ್ಗೆ ಸಂಘರ್ಷದ ಇನ್ನೂ ಅನೇಕ ಆರೋಪ-ಪ್ರತ್ಯಾರೋಪಗಳಿವೆ, ಆದರೆ ಇಸ್ರೇಲ್ ಹೊಣೆಗಾರ ಎಂದು ಅನೇಕ ಅರಬ್ ನಾಯಕರು ಹೇಳಿದ್ದರಿಂದ ಈ ಪ್ರದೇಶದಲ್ಲಿ ಪ್ರತಿಭಟನೆಗಳು ತ್ವರಿತವಾಗಿ ಭುಗಿಲೆದ್ದವು. ಗಾಜಾದಲ್ಲಿನ ಹಮಾಸ್ ಅಧಿಕಾರಿಗಳು ಇಸ್ರೇಲಿ ವೈಮಾನಿಕ ದಾಳಿ ಕಾರಣ ಎಂದು ಘಟನೆ ನಡೆದ ತಕ್ಷಣವೇ ದೂಷಿಸಿತು ಹಾಗೂ ಘಟೆಯಲ್ಲಿ ನೂರಾರು ಜನರು ಕೊಲ್ಲಲ್ಪಟ್ಟರು ಎಂದು ಹೇಳಿತು. ಇಸ್ರೇಲ್ ತಾನು ಭಾಗಿಯಾಗಿಲ್ಲ ಎಂದು ನಿರಾಕರಿಸಿತು ಮತ್ತು ವೀಡಿಯೋ, ಆಡಿಯೋ ಮತ್ತು ಇತರ ಸಾಕ್ಷ್ಯವನ್ನು ಬಿಡುಗಡೆ ಮಾಡಿತು ಮತ್ತು ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟವು ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಭಯೋತ್ಪಾದಕ ಗುಂಪು ಇಸ್ಲಾಮಿಕ್ ಜಿಹಾದ್‌ ಉಡಾಯಿಸಿದ ರಾಕೆಟ್ ಮಿಸ್‌ಫೈರ್‌ನಿಂದ ಸಂಭವಿಸಿದೆ ಎಂದು ಅದು ತೋರಿಸಿದೆ. ಇಸ್ಲಾಮಿಕ್ ಜಿಹಾದ್ ಆ ಹೇಳಿಕೆಯನ್ನು ತಳ್ಳಿಹಾಕಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement