ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ 2023 : ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಸಮೀಕ್ಷೆ, ಸದ್ಯ ಕಾಂಗ್ರೆಸ್‌ಗಿಂತ ಮುಂದಿರುವ ಬಿಜೆಪಿ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂಡಿಯಾ ಟಿವಿ-ಸಿಎನ್‌ಎಕ್ಸ್‌ (India TV-CNX) ಚುನಾವಣಾ ಪೂರ್ವ ಸಮೀಕ್ಷೆಯು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಮಧ್ಯಪ್ರದೇಶದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಹೇಳಿದೆ.
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಮಾಹಿತಿಯ ಪ್ರಕಾರ, ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ 2023 ರಲ್ಲಿ 230 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 116 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.
ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು (ಶುಕ್ರವಾರ) ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಮೂಲಕ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು (ಭಾನುವಾರ) ಮತ ಎಣಿಕೆ ನಡೆಯಲಿದೆ.
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಫಲಿತಾಂಶಗಳನ್ನು ಗುರುವಾರ (ಅಕ್ಟೋಬರ್ 19) ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ.

ಪ್ರದೇಶವಾರು ಚುನಾವಣಾ ಪ್ರಕ್ಷೇಪಣ ಇಲ್ಲಿದೆ:
ಬಾಘೇಲ್‌ಖಂಡ-51 ಸ್ಥಾನಗಳು
ಬಿಜೆಪಿ-31ರಲ್ಲಿ ಗೆಲ್ಲಬಹುದು
ಕಾಂಗ್ರೆಸ್-19 ಗೆಲ್ಲಬಹುದು
ಇತರರು ಒಂದು ಸ್ಥಾನ ಗೆಲ್ಲಬಹುದು ಎಂದು ಕಂಡುಬಂದಿದೆ
ಭೋಪಾಲ್‌ -24 ಸ್ಥಾನಗಳು
ಬಿಜೆಪಿ 16 ಸ್ಥಾನ ಗೆಲ್ಲಬಹುದು
ಉಳಿದ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಬಹುದು
ಚಂಬಲ್‌-34 ಸ್ಥಾನಗಳು
ಕಾಂಗ್ರೆಸ್ 22 ಸ್ಥಾನ ಗೆಲ್ಲಬಹುದು
ಬಿಜೆಪಿ 12 ಸ್ಥಾನ ಗೆಲ್ಲಬಹುದು

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

ಮಹಾಕೌಶಲ್‌-47 ಸ್ಥಾನಗಳು
ಕಾಂಗ್ರೆಸ್ 26 ಸ್ಥಾನ ಗೆಲ್ಲಬಹುದು
ಬಿಜೆಪಿ 19 ಸ್ಥಾನ ಗೆಲ್ಲಬಹುದು
ಇತರರು ಎರಡು ಸ್ಥಾನಗಳನ್ನು ಗೆಲ್ಲಬಹುದು
ಮಾಲ್ವಾ-46 ಸ್ಥಾನಗಳು
ಬಿಜೆಪಿ 25 ಸ್ಥಾನ ಗೆಲ್ಲಬಹುದು
ಕಾಂಗ್ರೆಸ್ 20 ಸ್ಥಾನ ಗೆಲ್ಲಬಹುದು
ಉಳಿದ ಒಂದು ಸ್ಥಾನ ಬೇರೆಯವರ ಪಾಲಾಗಬಹುದು
ನಿಮಾರ್‌-28 ಸ್ಥಾನಗಳು
ಕಾಂಗ್ರೆಸ್ 15 ಸ್ಥಾನ ಗೆಲ್ಲಬಹುದು
ಬಿಜೆಪಿ 12 ಸ್ಥಾನ ಗೆಲ್ಲಬಹುದು
ಉಳಿದ ಒಂದು ಸ್ಥಾನಬೇರೆಯವರ ಪಾಲಾಗಬಹುದು

ಮತ ಹಂಚಿಕೆಯ ಸಾಧ್ಯತೆಗಳು…
ಬಿಜೆಪಿ ಶೇ.44.38, ಕಾಂಗ್ರೆಸ್ ಶೇ.42.51 ಮತ್ತು ‘ಇತರರು’ ಶೇ.13.11 ಗಳಿಸಬಹುದು ಎಂದು ಮತ ಹಂಚಿಕೆ ಪ್ರಕ್ಷೇಪಗಳು ತೋರಿಸುತ್ತವೆ.
ಮಧ್ಯಪ್ರದೇಶದಲ್ಲಿ 2018 ರ ಮತದಾನದ ಶೇಕಡಾವಾರು:
2018ರ ಚುನಾವಣೆಯಲ್ಲಿ ಬಿಜೆಪಿ ಶೇ.41.02, ಕಾಂಗ್ರೆಸ್ ಶೇ.40.89 ಮತ್ತು ‘ಇತರರು’ ಶೇ.18.09 ಮತಗಳನ್ನು ಪಡೆದಿದ್ದರು.
230 ಸದಸ್ಯ ಬಲದ ಅಸೆಂಬ್ಲಿಯಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ 109 ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ 115 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯ ಪ್ರಕ್ಷೇಪಗಳು ತೋರಿಸುತ್ತವೆ. ಐದು ವರ್ಷಗಳ ಹಿಂದೆ ಗೆದ್ದಿದ್ದ 114 ಸ್ಥಾನಗಳಿಗೆ ಹೋಲಿಸಿದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ಬಾರಿ 110 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಸ್ವತಂತ್ರರು ಸೇರಿದಂತೆ ‘ಇತರರು’ ಗೆಲುವು ಸೋಲಿನ ಕೀಲಿಯನ್ನು ಹೊಂದಿದ್ದಾರೆ ಮತ್ತು ಅವರು ಐದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿದಂತೆ ಸ್ವತಂತ್ರ ಮತ್ತು ಇತರ ಪಕ್ಷಗಳು ಏಳು ಸ್ಥಾನಗಳನ್ನು ಗೆದ್ದಿದ್ದವು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement