ಕ್ರಿಕೆಟ್ ವಿಶ್ವಕಪ್ 2023 : ಕೊಹ್ಲಿ ಭರ್ಜರಿ ಬ್ಯಾಟಿಂಗ್‌, ಶಮಿ ಮಾರಕ ಬೌಲಿಂಗ್‌ನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ನಿರ್ಣಾಯಕ ಗೆಲುವು

ಧರ್ಮಶಾಲಾ : ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನದಿಂದಾಗಿ ಭಾರತವು ಭಾನುವಾರ ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಡ್ಯಾರಿಲ್ ಮಿಚೆಲ್ ಅವರ 130 ಮತ್ತು ರಚಿನ್ ರವೀಂದ್ರ ಅವರ 75 ರನ್‌ಗಳ ಹೊರತಾಗಿಯೂ ಮೊಹಮ್ಮದ್ ಶಮಿ ಅವರ ಐದು ವಿಕೆಟ್ (54ಕ್ಕೆ 5) ಭಾರತಕ್ಕೆ ನ್ಯೂಜಿಲೆಂಡ್ ಅನ್ನು 273 ಕ್ಕೆ ನಿರ್ಬಂಧಿಸಲು ಸಹಾಯ ಮಾಡಿತು.
ಭಾನುವಾರ ಧರ್ಮಶಾಲಾದ ಎಚ್‌ಪಿಸಿಎ (HPCA) ಸ್ಟೇಡಿಯಂನಲ್ಲಿ ನಡೆದ ಪ್ರಮುಖ ವಿಶ್ವಕಪ್ ಪಂದ್ಯದಲ್ಲಿ 48 ಓವರ್‌ಗಳಲ್ಲಿ 6 ವಿಕೆಟ್‌ಗೆ 274 ರನ್ ಗಳಿಸುವ ಮೂಲಕ ಭಾರತ ತಂಡವು ನಾಲ್ಕು ವಿಕೆಟ್‌ಗಳ ಗೆಲುವಿನೊಂದಿಗೆ ಗೆಲುವಿನ ಗುರಿ ತಲುಪಿತು.
ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಭಾರತ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತು. ರೋಹಿತ್ (46) ಅವರು ಲಾಕಿ ಫರ್ಗುಸನ್ ಅವರಿಗೆ ಔಟಾಗುವ ಮೊದಲು ನಾಯಕನ ಆಟ ಆಡಿದ್ದರು.
ಇದಾದ ನಂತರ ಶುಭಮನ್‌ ಗಿಲ್ ಸಹ ಲಾಕಿ ಫರ್ಗುಸನ್ ಅವರಿಗೆ ಔಟಾದರು. ಗಿಲ್‌ ಹೊಡೆತವು ಕಾಯುತ್ತಿದ್ದ ಥರ್ಡ್-ಮ್ಯಾನ್ ಫೀಲ್ಡರ್ ಅವರ ಕೈಗೆ ಹೋಯಿತು. ನಂತರ ಮೋಡಗ ಹಾಗೂ ಮಂಜಿನಿಂದಾಗಿ ಆಟ ಕೆಲಕಾಲ ಸ್ಥಗಿತಗೊಂಡಿತು. ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಆಟವಾಡುತ್ತಿದ್ದಾಗ ಗೋಚರತೆ ಕಡಿಮೆಯಾಗಿ ಕೆಲಕಾಲ ಆಟ ಸ್ಥಗಿತಗೊಳಿಸಲಾಯಿತು.
ಆಟ ಪುನಣ ಆರಂಭಗೊಂಡ ನಂತರ ಶ್ರೇಯಸ್ ಅಯ್ಯರ್‌ (33) ಬೌಲ್ಟ್ಗೆ ಔಟಾದರು. ಕೊಹ್ಲಿ ಹಾಗೂ ಕೆ.ಎಲ್. ರಾಹುಲ್‌ ಆಟ ಮುಂದುವರಿಸಿದರು. ರಚಿನ್ ರವೀಂದ್ರ ಕೊಹ್ಲಿಯ ಬ್ಯಾಟಿನ ಬಿಸಿಯನ್ನು ಅನುಭವಿಸಿಬೇಕಾಯಿತು. ಜೊತೆಯಾಟ ಚೆನ್ನಾಗಿ ಮೂಡಿ ಬರುತ್ತಿರುವಾಗಲೇ ಮಿಚೆಲ್ ಸ್ಯಾಂಟ್ನರ್ ಅವರು ಕೆ.ಎಲ್‌ ರಾಹುಲ್ (27) ಅವರನ್ನು ಔಟ್‌ ಮಾಡಿದರು. ನಂತರ ಬಂದ ಸೂರ್ಯಕುಮಾರಯಾದವ್ ರನ್ ಔಟ್ ಆಗಿ ನಿರಾಸೆ ಮೂಡಿಸಿದರು. ಭಾರತ ಐದು ವಿಕೆಟ್‌ಗೆ 191 ರನ್‌ಗಳಿಸಿದ್ದಾಗ ಪಂದ್ಯ ಯಾರ ಕಡೆಯೂ ವಾಲು ಸ್ಥಿತಿಯಿತ್ತು. ಆದರೆ ಎಚ್ಚರಿಕೆಯ ಆಟವಾಡಿದ ಕೊಹ್ಲಿ ಮತ್ತು ರವೀಂದ್ರ ಜಡೇಜಾ ರನ್‌ಗಳನ್ನು ಪೇರಿಸುತ್ತ ಹೋದರು. ಆದರೆ ಶತಕಕ್ಕೆ ಸಮೀಪದಲ್ಲಿದ್ದಾಗ ಕೊಹ್ಲಿ ಔಟಾದರು. ಅವರು ಔಟಾಗುವ ಮೊದಲು 104 ಬಾಲ್‌ಗಳಿಗೆ 95 ರನ್‌ ಗಳಿಸಿದ್ದರು. ಭಾರತ 48ನೇ ಓವರ್‌ನಲ್ಲಿ ಗೆಲುವಿನ ನಗೆ ಬೀರಿತು. ರವೀಂದ್ರ ಜಡೇಜಾ ಔಟಾಗದೆ 39 ರನ್‌ ಗಳಿಸಿದರು.
ರೋಹಿತ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ ಯಾದವ್‌ ತಂಡದಲ್ಲಿ ಸ್ಥಾನ ಪಡೆದಿದ್ದರು.
ಡೆವೊನ್ ಕಾನ್ವೇ ಅವರು ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಫ್ಲಿಕ್ ಮಾಡಲು ಹೋಗಿ ಶ್ರೇಯಸ್‌ ಅಯ್ಯರ್‌ ಅವರು ಹಿಡಿದ ಅದ್ಭುತ ಕ್ಯಾಚಿಗೆ ಶೂನ್ಯಕ್ಕೆ ಔಟಾದರು. ಶಮಿಯ ಮೊದಲ ಎಸೆತದಲ್ಲಿ ವಿಲ್ ಯಂಗ್ ಅವರು ಬೌಲ್ಟ್‌ ಔಟಾದರು. ಪರಿಸ್ಥಿತಿ ಇನ್ನಷ್ಟು ಹದಗೆಡಬಹುದಿತ್ತು, ಆದರೆ ರವೀಂದ್ರ ಜಡೇಜಾ ಅವರು ರಚಿನ್‌ ರವೀಂದ್ರ ಅವರನ್ನು ಕ್ಯಾಚ್‌ ಕೈಚೆಲ್ಲಿದರು. ಆಗ ರಚಿನ್ ಕೇವಲ 12 ರನ್ ಮಾಡಿದ್ದರು. ನಂತರ ರಚಿನ್‌ ರವೀಂದ್ರ ಮತ್ತು ಡೇರಿಲ್ ಮಿಚೆಲ್ ಉತ್ತಮ ಜೊತೆಯಾಟ ಬಂತು. ಕುಲದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್‌ಗಳು ಬಂದವು. ಮಿಚೆಲ್ ಅವರು 69 ರನ್ ಗಳಿಸಿದ್ದಾಗ ಬುಮ್ರಾ ಬೌಲಿಂಗ್‌ನಲ್ಲಿ ಕುಲದೀಪ್‌ ಯಾದವ ಕ್ಯಾಚ್‌ ಕೈಚೆಲ್ಲಿದರು. ಇದೇ ವೇಳೆ ಶಮಿಯಲ್ಲಿ ಬೌಲಿಂಗ್‌ನಲ್ಲಿ ರಚಿನ್ (75) ಅವರ ಕ್ಯಾಚನ್ನು ಶುಭಮನ್‌ ಗಿಲ್‌ ತೆಗೆದುಕೊಂಡರು. ಅಲ್ಲಿಗೆ 159 ರನ್‌ಗಳ ಮೂರನೇ ವಿಕೆಟ್ ಜೊತೆಯಾಟ ಮುಕ್ತಾಯವಾಯಿತು. ನಂತರ ಕುಲದೀಪ್ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು.
ಮಿಚೆಲ್‌ ಭರ್ಜರಿ ಶತಗಳಿಸಿದರು. ಅಂತಿಮವಾಗಿ ಮಿಚೆಲ್ (130, 127b, 9×4, 5×6) ಶಮಿಯ ಐದನೇ ಬಲಿಯಾದರು. ಶಮಿ (54ಕ್ಕೆ ಐದು) ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದರು. ನ್ಯೂಜಿಲ್ಯಾಂಡ್‌ ಅಂತಿಮವಾಗಿ 273 ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement