ʼ ನಾವು ಗೌತಮಿ ಪರವಾಗಿ ಇದ್ದೇವೆ ‘: ನಟಿಯ ರಾಜೀನಾಮೆ ನಂತರ ತಮಿಳುನಾಡು ಬಿಜೆಪಿ ಮುಖ್ಯಸ್ಥರ ಹೇಳಿಕೆ

ಚೆನ್ನೈ: ʼಬೆಂಬಲದ ಕೊರತೆʼಯನ್ನು ಉಲ್ಲೇಖಿಸಿ ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ತಪ್ಪು ತಿಳುವಳಿಕೆಯಿಂದಾಗಿ ಹೀಗಾಗಿದೆ ಮತ್ತು ಪಕ್ಷವು ನಿಜವಾಗಿ ನಟಿ ಗೌತಮಿ ಅವರ ಪರವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ, ಗೌತಮಿ ಅವರು ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ ತಮ್ಮ ಸಂಬಂಧವನ್ನು ಕೊನೆಗೊಳಿಸಿದರು, “ಬೆಂಬಲದ ಕೊರತೆ” ಮತ್ತು ಕೆಲವು ಪಕ್ಷದ ಸದಸ್ಯರು ತಮ್ಮನ್ನು ವಂಚಿಸಿದ ವ್ಯಕ್ತಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರು, ”ಗೌತಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.. ಎಫ್‌ಐಆರ್ ದಾಖಲಿಸಲು ನಾವು ಅವರಿಗೆ ಬೆಂಬಲ ನೀಡಿದ್ದೆವು, ಆದರೆ ಈಗ ಕೆಲವು ಬಿಜೆಪಿ ಕಾರ್ಯಕರ್ತರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಭಾವಿಸಿದ್ದಾರೆ. . ಯಾರೂ ಆತನನ್ನು (ಆರೋಪಿಯನ್ನು) ರಕ್ಷಿಸಲು ಪ್ರಯತ್ನಿಸುತ್ತಿಲ್ಲ. ನಾನು ಗೌತಮಿಯೊಂದಿಗೆ ಇಂದು ಸಹ ಮಾತನಾಡಿದ್ದೇನೆ. ಈ ಬಗ್ಗೆ ಅವರಿಗೆ ತಪ್ಪು ತಿಳುವಳಿಕೆ ಉಂಟಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಿಂದ್ರನ್‌ವಾಲೆ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವು : ಈತ ಯಾಕೆ ಭಾರತದಿಂದ ಓಡಿಹೋಗಿದ್ದ..?

“ಪೊಲೀಸರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು, ಬಿಜೆಪಿಯಲ್ಲಿ ಯಾರೂ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ ಮತ್ತು ಆರೋಪಿ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿಲ್ಲ … ಆರೋಪಿ 25 ವರ್ಷಗಳಿಂದ ಗೌತಮಿ ಅವರ ಸ್ನೇಹಿತರಾಗಿದ್ದರು ಮತ್ತು ಆತ ಮೋಸ ಮಾಡಿದ್ದಾನೆ. ಅವರಿಬ್ಬರಿಗೆ ಸಂಬಂಧಿಸಿದ ಒಂದು ಪ್ರಕರಣ. ನಾವು (ಬಿಜೆಪಿ) ಇಲ್ಲಿ ಗೌತಮಿ ಪರವಾಗಿ ಇದ್ದೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ತುಂಬಾ ಭಾರವಾದ ಹೃದಯ ಮತ್ತು ತೀವ್ರ ಭ್ರಮನಿರಸನ” ದಿಂದ ಪಕ್ಷವನ್ನು ತೊರೆಯುವ ನಿರ್ಧಾರ ಪ್ರಕಟಿಸುವಾಗ ನಾನು ನನ್ನ ಜೀವನದಲ್ಲಿ “ಊಹಿಸಲಾಗದ ಬಿಕ್ಕಟ್ಟಿನ ಹಂತದಲ್ಲಿ” ನಿಂತಿದ್ದೇನೆ ಎಂದು ಗೌತಮಿ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಸಿ.ಅಳಗಪ್ಪನ್ ಎಂಬ ವ್ಯಕ್ತಿ 20 ವರ್ಷಗಳ ಹಿಂದೆ ತನ್ನ “ನನ್ನೊಂದಿಗೆ ಸ್ನೇಹ ಬೆಳೆಸಿದ್ದ ಎಂದು ಗೌತಮಿ ಆರೋಪಿಸಿದ್ದಾರೆ.  ಗೌತಮಿ ಅವರು, ನಂತರ ತಮ್ಮ ಆಸ್ತಿ ನಿರ್ವಹಣೆಯನ್ನು ಅಳಗಪ್ಪನ್‌ಗೆ ವಹಿಸಿರುವುದಾಗಿ ಹೇಳಿದ್ದಾರೆ. “ನನ್ನ ಜಮೀನುಗಳ ಮಾರಾಟವನ್ನು ನಾನು ಆತನಿಗೆ ವಹಿಸಿದ್ದೆ ಮತ್ತು ಅವನು ನನಗೆ ವಂಚನೆ ಮಾಡಿದ್ದಾನೆಂದು ನಾನು ಕಂಡುಕೊಂಡೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ನಾನು ನನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥೆ ಮಾತ್ರವಲ್ಲದೆ, ಒಂಟಿ ತಾಯಿಯೂ ಆಗಿದ್ದೇನೆ” ಎಂದು ಗೌತಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರವೂ ಕಳೆದ 40 ದಿನಗಳಿಂದ ಬಿಜೆಪಿಯ ಹಲವಾರು ಹಿರಿಯ ಸದಸ್ಯರು ಅಳಗಪ್ಪನ್‌ಗೆ ನ್ಯಾಯದಿಂದ ತಪ್ಪಿಸಿಕೊಳ್ಳಲು ಮತ್ತು ತಲೆಮರೆಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆ” ಎಂದು ಗೌತಮಿ ಆರೋಪಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯು ತನಗೆ ನ್ಯಾಯ ದೊರಕಿಸಲು ಸಹಾಯ ಮಾಡುತ್ತದೆ ಎಂದು ನಾನು ಇನ್ನೂ ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತದಲ್ಲಿ ಹೃದಯಾಘಾತ-ಹಠಾತ್‌ ಸಾವುಗಳ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ : ಸರ್ಕಾರಿ ಮಾಹಿತಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement