ಚಹಾ ಮಾರುವ ಸೂಪರ್‌ ಸ್ಟಾರ್‌ ರಜನಿಕಾಂತ : ದಂಗಾದ ಅಭಿಮಾನಿಗಳು ; ನಿಜವಾದ ವಿಷ್ಯ ಏನಂದ್ರೆ… | ವೀಡಿಯೊ ವೀಕ್ಷಿಸಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್‌ ಆಗಿತ್ತು. ಎಲ್ಲಿಯವರೆಗೆ ಅಂದರೆ ಅನೇಕರು ಇದು ರಜನಿಕಾಂತ್ ಅವರ ಚಿತ್ರೀಕರಣದ ವೇಳೆಗಿನ ವೀಡಿಯೊ ಎಂದುಕೊಂಡಿದ್ದರು. ಮುಖ, ಕೂದಲು, ನೋಟ, ಹಾವಭಾವ ಎಲ್ಲವೂ ರಜಿನಿಕಾಂತ ರಂತೆಯೇ ಇತ್ತು. ಹಾಗಾಗಿ ಇದು ರಜನಿಕಾಂತ್‌ ಎಂದೇ ಬಹುತೇಕರು ಭಾವಿಸಿದ್ದರು. ನಂತರ ಅವರು ಕೇರಳದ ಕೊಚ್ಚಿನ್‌ನಲ್ಲಿರುವ ವೆಂಕಟೇಶ್ವರ ಹೋಟೆಲ್‌ ಮಾಲೀಕ ಸುಧಾಕರ ಪ್ರಭು ಎಂದು ಗೊತ್ತಾಗಿದೆ.
ವೀಡಿಯೊ ವೈರಲ್‌ ಆದ ನಂತರ ಕೇರಳದ ಕೊಚ್ಚಿನ್ ನಲ್ಲಿರುವ ವೆಂಕಟೇಶ್ವರ ಹೋಟೆಲ್ ಮಾಲೀಕ ಸುಧಾಕರ ಪ್ರಭು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಥೇಟ್‌ ಸೂಪರ್‌ಸ್ಟಾರ್ ರಜನಿಕಾಂತ ಅವರನ್ನು ಹೋಲುವ ಸುಧಾಕರ ಪ್ರಭು ಅವರನ್ನು ಕಂಡು ಸಾಕಷ್ಟು ಜನ ಆಶ್ಚರ್ಯಚಕಿತರಾಗಿದ್ದಾರೆ.

ಕೇರಳದ ಸ್ಟಾಲ್‌ನಲ್ಲಿ ಚಹಾ ಮಾರುತ್ತಿದ್ದಾಗ, ಸುಧಾಕರ ಅವರು ಸಹಜವಾಗಿಯೇ ದಿಗ್ಗಜ ನಟನ ಶೈಲಿ ಮತ್ತು ಲುಕ್‌ ಅನ್ನು ಅಳವಡಿಸಿಕೊಂಡಿದ್ದಾರೆ. ಅವರ ವೀಡಿಯೊ ಈಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇರಳದ ಕೊಚ್ಚಿಯ ಸ್ಟಾಲ್‌ನಲ್ಲಿ ಟೀ ಅಂಗಡಿ ಹೊಂದಿರುವ ಸುಧಾಕರ ಪ್ರಭು ಅವರು ಟೀ ಮಾರುತ್ತ ಗ್ರಾಹಕರಿಗೆ ನಗುನಗುತ್ತಾ ಸೇವೆ ನೀಡುತ್ತಾರೆ. ರಜನಿಕಾಂತ್ ಅವರ ಹೋಲಿಕೆ ಇರುವ ಈ ವ್ಯಕ್ತಿಯ ಬಗ್ಗೆ ಕೊಚ್ಚಿನ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡದ ಗಮನ ಸೆಳೆಯಿತು. ಟೀ ಮಾರುತ್ತಿದ್ದ ರಜನಿಕಾಂತ ಅವರಂತೆ ಕಾಣುತ್ತಿರುವ ವ್ಯಕ್ತಿಯನ್ನು ನೋಡಿ ಚಿತ್ರೀಕರಣದ ಸಿಬ್ಬಂದಿ ಬೆರಗಾದರು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

ನಾದಿರ್ಶಾ ಎಂಬ ಮಲಯಾಳಂ ನಿರ್ದೇಶಕರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಂತರ ಅವರ ವೀಡಿಯೊಗಳು ವೈರಲ್ ಆಗಿವೆ. ಅಂದಿನಿಂದ, ಅವರು ಜನಪ್ರಿಯತೆಯನ್ನು ಗಳಿಸಿದ್ದಾರೆ ಮತ್ತು ಕೇರಳದ ವಿವಿಧ ಕಾರ್ಯಕ್ರಮಗಳಿಗೆ ಸಹ ಆಹ್ವಾನಿಸಲ್ಪಟ್ಟಿದ್ದಾರೆ.

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement