ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು : ಪಾಕಿಸ್ತಾನದ ಆಟಗಾರರಿಗೆ ʼ8 ಕೆಜಿ ಮಟನ್ʼ ಟೀಕೆ ಮಾಡಿದ ವಾಸಿಂ ಅಕ್ರಂ | ವೀಕ್ಷಿಸಿ

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಾಕಿಸ್ತಾನ ಕ್ರಿಕೆಟ್ ತಂಡವು ಅವರ ಕಳಪೆ ಪ್ರದರ್ಶನ ನೀಡಿ ಹೀನಾಯವಾಗಿ ಸೋತ ನಂತರ ತನ್ನ ತವರಿನಲ್ಲಿ ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ. ಪಾಕಿಸ್ತಾನ ತಂಡದ ಆಟಗಾರರ ಫಿಟ್‌ನೆಸ್ ಮಟ್ಟಗಳಿಗಾಗಿ ಐಕಾನಿಕ್ ವೇಗಿ ವಾಸಿಂ ಅಕ್ರಂ ತಮ್ಮ ದೇಶದ ಆಟಗಾರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.
ಪಾಕಿಸ್ತಾನ ಮೂಲದ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನಡೆದ ಪಂದ್ಯದ ನಂತರದ ಕಾರ್ಯಕ್ರಮವೊಂದರಲ್ಲಿ ವಾಸಿಂ ಅಕ್ರಂ ಮಾತನಾಡುತ್ತಿದ್ದರು. ಮಿಸ್‌ಫೀಲ್ಡ್‌ಗಳು ಮತ್ತು ಕೈಬಿಟ್ಟ ಕ್ಯಾಚ್‌ಗಳು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ವಿಶ್ಲೇಷಿಸಿದ ಅವರು ಅಫಘಾನಿಸ್ತಾನದ ವಿರುದ್ಧದ ಐತಿಹಾಸಿಕ ಸೋಲಿಗೆ ಮಿಸ್‌ಫೀಲ್ಡಿಂಗ್ ಎಂಬುದು ಸಾಮಾನ್ಯ ವಿಷಯವಾಗಿದ್ದರೂ, ಆಕ್ರಮಣಶೀಲತೆಯ ಕೊರತೆಯು ತಂಡದ ಅವನತಿಗೆ ಕಾರಣವಾದ ಮತ್ತೊಂದು ಅಂಶವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸೋಲಿನ ನಂತರ ಅಕ್ರಂ ಸೋಳಿನ ಬಗ್ಗೆ ವಿಶ್ಲೇಷಣೆ ಮಾಡಿದರು ಮತ್ತು ತಂಡದಲ್ಲಿನ ಫಿಟ್‌ನೆಸ್ ಕೊರತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. “ಇದು ಸೋಲು ಮುಜುಗರದ ಸಂಗತಿಯಾಗಿದೆ. ಅವರು [ಅಫ್ಘಾನಿಸ್ತಾನ] 8 ವಿಕೆಟ್‌ ಇರವಾಗಲೇ 280-290 ಅನ್ನು ಬೆನ್ನಟ್ಟಿದರು. ನಮ್ಮ ಆಟಗಾರರ ಫಿಟ್ನೆಸ್ ಮಟ್ಟವನ್ನು ನೋಡಿ ಎಂದು ಹೇಳಿದರು.
“ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದ ಆಟಗಾರರು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಿಲ್ಲ ಎಂದು ನಾವು ಕಳೆದ ಮೂರು ವಾರಗಳಿಂದ ಇಲ್ಲಿ ಕಿರುಚುತ್ತಿದ್ದೇವೆ. ಈಗ ನಾನು ಅವರನ್ನು ಪ್ರತ್ಯೇಕವಾಗಿ ಹೆಸರಿಸಬೇಕೇ, ಲಗ್ತಾ ಹೈ ರೋಜ್ 8 ಕಿಲೋ ನಿಹಾರಿ ಖತೇ ಹೈಂ (ಹಾಗೆ ತೋರುತ್ತಿದೆ ಅವರು ಪ್ರತಿದಿನ 8 ಕಿಲೋ ಮಾಂಸ ತಿನ್ನುತ್ತಿದ್ದಾರೆ) ಕೆಲವು ಪರೀಕ್ಷೆಗಳು ನಡೆಯಬೇಕು, ನಿಮ್ಮ ದೇಶಕ್ಕಾಗಿ ಆಡಿದ್ದಕ್ಕಾಗಿ ನಿಮಗೆ ಹಣ ನೀಡಲಾಗುತ್ತಿದೆ ಮತ್ತು ಆಯ್ಕೆಗೆ ನಿರ್ದಿಷ್ಟ ಮಾನದಂಡಗಳಿರಬೇಕು ಎಂದು ಅಕ್ರಂ ಹೇಳಿದರು.

ಎ ಸ್ಪೋರ್ಟ್ಸ್ ಪಾಕಿಸ್ತಾನದ ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮೊಯಿನ್ ಖಾನ್, ಪಿಸಿಬಿ ಯೋಜಿಸಿದಂತೆ ಪಾಕಿಸ್ತಾನ ತಂಡದ ಪ್ರವಾಸದ ವೇಳಾಪಟ್ಟಿ ಬಗ್ಗೆ ಪ್ರಶ್ನಿಸಿದರು.
“ವಿಶ್ವಕಪ್‌ಗಾಗಿ ಸಂಪೂರ್ಣ ಯೋಜನೆಯ ಕೊರತೆಯಿದೆ. ನಾವು ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಮತ್ತು ನಂತರ ಏಷ್ಯಾ ಕಪ್ ಸೇರಿದಂತೆ 3 ತಿಂಗಳು ಈ ಹೀಟ್‌ನಲ್ಲಿ ಆಡಿದ್ದೇವೆ. ಆಟಗಾರರು ಮೈದಾನದಲ್ಲಿ ಸಂಪೂರ್ಣವಾಗಿ ಆಲಸ್ಯದಿಂದ ಕಾಣುತ್ತಾರೆ. ಮಂಡಳಿಗೆ ಯಾರು ಸಲಹೆ ನೀಡುತ್ತಿದ್ದಾರೆ, ನನಗೆ ಗೊತ್ತಿಲ್ಲ. ಅವರು ನಿಸ್ಸಂಶಯವಾಗಿ ಮೊದಲು ಕ್ರಿಕೆಟ್ ಆಡಿಲ್ಲ ಎಂದು ಮೊಯಿನ್ ಖಾನ್ ಹೇಳಿದರು.

ಸೋಮವಾರ, ಅಫ್ಘಾನಿಸ್ತಾನವು ವಿಶ್ವಕಪ್‌ನಲ್ಲಿ ತಮ್ಮ ಎರಡನೇ ಅಚ್ಚರಿಯ ವಿಜಯವನ್ನು ದಾಖಲಿಸಿದ ನಂತರ ಮತ್ತು 50-ಓವರ್‌ಗಳ ಸ್ವರೂಪದಲ್ಲಿ ಪಾಕಿಸ್ತಾನದ ವಿರುದ್ಧ ಅವರ ಮೊದಲ ಜಯವನ್ನು ದಾಖಲಿಸಿದ ನಂತರ ಪಾಕಿಸ್ತಾನದಲ್ಲಿ ಬಾಬರ್‌ ಆಜಂ ತಂಡದ ವಿರುದ್ಧ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಮೈದಾನದಲ್ಲಿ ಬೆರಗುಗೊಳಿಸುವ ಆಲ್‌ರೌಂಡ್ ಪ್ರದರ್ಶನದಲ್ಲಿ ಪಾಕಿಸ್ತಾನವನ್ನು 282 ರನ್‌ಗಳಿಗೆ ನಿಯಂತ್ರಿಸಿದ ಅಪಘಾನಿಸ್ತಾನವು ನುಗಿದತ ಗುರಿಯನ್ನು ಕೈಯಲ್ಲಿ ಎಂಟು ವಿಕೆಟ್‌ಗಳಿರುವಾಗಲೇ ತಲುಪಿತು.
ಆರಂಭಿಕ ಜೋಡಿ ರಹಮಾನುಲ್ಲಾ ಗುರ್ಬಾಜ್ (65), ಮತ್ತು ಇಬ್ರಾಹಿಂ ಜದ್ರಾನ್ (87) ಉತ್ತಮ ಆರಂಭ ನೀಡಿದರೆ ನಂತರ ರಹಮತ್ ಷಾ (77)* ರಹಮತ್ ಶಾ (48) ಅಜೇಯ ಜೊತೆಯಾಟದಲ್ಲಿ ನಿಗದಿತ ಗುರಿಯನ್ನು ತಲುಪಿದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement