ವೀಡಿಯೊ…| ಶಿರಸಿ : ಮನೆಯಂಗಳಕ್ಕೆ ಬಂದಿದ್ದ ಬೃಹತ್‌ ಕಾಳಿಂಗ ಸರ್ಪ ಸೆರೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆ ಶಿರಸಿ‌ ತಾಲೂಕಿನ ಮರ್ಲಮನೆ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಸೆರೆ ಹಿಡಿಯಲಾಗಿದೆ.
ಗ್ರಾಮದ ಗಣಪತಿ ಆರ್. ಹೆಗಡೆ ಎಂಬವರ ತೋಟದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪ ಅಲ್ಲಿಯೇ ಬೀಡುಬಿಟ್ಟಿತ್ತು.

ಸುಮಾರು 10 ಅಡಿ ಉದ್ದದ ಭಾರೀ ಗಾತ್ರದ ಕಾಳಿಂಗ ಸರ್ಪ ತೋಟದಲ್ಲಿ ಓಡಾಡುತ್ತಿತ್ತು. ಎರಡು ಮೂರು ದಿನಗಳಿಂದ ಮನೆ ಸಮೀಪದಲ್ಲಿಯೇ ಇದ್ದ ಅಡಕೆ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಹಾವು ಗುರುವಾರ ಮನೆಯಂಗಳಕ್ಕೇ ಬಂದಿತ್ತು.

ಈ ಬಗ್ಗೆ ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರಿಗೆ ಗುರುವಾಋ ಮಧ್ಯಾಹ್ನ ಮಾಹಿತಿ ನೀಡಲಾಯಿತು. ಅವರು ಆಗಮಿಸಿ ಕಾರ್ಯಾಚರಣೆ ನಡೆಸಿ ಅದನ್ನು ಸೆರೆ ಹಿಡಿದಿದ್ದಾರೆ. ನಂತ ಸುಮಾರು ಒಂದು ತಾಸು ಪ್ರಯತ್ನಪಟ್ಟು ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement