ವಿಶ್ವಕಪ್ : ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 1 ವಿಕೆಟ್‌ ಗೆಲುವು

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದವರು ಪಾಕಿಸ್ತಾನ ತಂಡದ ವಿರುದ್ಧ 1 ವಿಕೆಟ್‌ ರೋಚಕ ಗೆಲುವು ದಾಖಲಿಸಿದರು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ ಹಾಗೂ ಸತತ ನಾಲ್ಕು ಪಂದ್ಯ ಸೋಲು ಕಂಡ ಪಾಕಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸುವ ಹಾದಿಯಿಂದ ಬಹುತೇಕ ಹೊರಬಿದ್ದಂತಾಗಿದೆ.
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ದಕ್ಷಿಣ ಆಫ್ರಿಕಾ ತಂಡಕ್ಕೆ 271 ರನ್‌ಗಳ ಗುರಿ ನೀಡಿತು. ಬಾಬರ್ ಅಜಮ್ (50) ಮತ್ತು ಸೌದ್ ಶಕೀಲ್ (52) ಹಾಗೂ ಶದಾಬ್‌ ಖಾನ್‌ (43) ರನ್‌ಗಳ ನೆರವಿನಿಂದ ಪಾಕಿಸ್ತಾನವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್ ಗಳಿಸಿತು. ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ನಾಲ್ಕು ವಿಕೆಟ್ ಸಾಧನೆಯು ಪಾಕಿಸ್ತಾನವನ್ನು ನಿರ್ಬಂಧಿಸಲು ಸಹಾಯ ಮಾಡಿತು. ಪಾಕಿಸ್ತಾನವು 47 ನೇ ಓವರ್‌ನಲ್ಲಿ 270 ರನ್ನುಗಳಿಗೆ ಆಲೌಟ್‌ ಆಯಿತು. ದಕ್ಷಿಣ ಆಫ್ರಿಕಾ ಪರ ಸ್ಪಿನ್ನರ್‌ ತಬ್ರೇಜ್‌ ಶಂಸಿ 4 ವಿಕೆಟ್‌ ಉರುಳಿಸಿದರೆ, ಮಾರ್ಕೊ ಜಾನ್ಸೆನ್‌ 3 ವಿಕೆಟ್‌ ಪಡೆದರು. ಜೆರಾಲ್ಡ್‌ ಕೊಯೆಟ್ಜಿ ಎರಡು ಹಾಗೂ ಲುಂಗಿ ಎನ್‌ಗಿಡಿ ಒಂದು ವಿಕೆಟ್‌ ಕಿತ್ತರು.

ಪ್ರಮುಖ ಸುದ್ದಿ :-   ಮುಂಬೈ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ

ಈ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾವು ಆರಂಭಿಕ ಆಘಾತ ಅನುಭವಿಸಿತು. ಟೂರ್ನಿಯಲ್ಲಿ 3 ಶತಕ ಬಾರಿಸಿರುವ ಕ್ವಿಂಟನ್ ಡಿ ಕಾಕ್ ಕೇವಲ 24 ರನ್‌ ಗಳಿಸಿ ಔಟ್‌ ಆದರು. ಮತ್ತೋರ್ವ ಆರಂಭಿಕ ಆಟಗಾಋ ಹಾಗೂ ನಾಯಕ ತೆಂಬಾ ಬವುಮ ಆಟ 28 ರನ್‌ಗಳಿಗೆ ಔಟಾದರು. ದಕ್ಷಿಣ ಆಫ್ರಿಕಾದ ಪರ ಉತ್ತಮ ಬ್ಯಾಟಿಂಗ್‌ ಮಾಡಿದ ಐಡನ್ ಮಾರ್ಕರಂ ಅವರು 93 ಎಸೆತಗಳಲ್ಲಿ 91 ರನ್‌ ಗಳಿಸಿ ಶತಕದ ಸಮೀಪದಲ್ಲಿದ್ದಾಗ ಔಟಾದರು. ಒಂದು ಕಡೆ ವಿಕೆಟ್‌ ಬೀಳುತ್ತಿದ್ದರೆ, ಇನ್ನೊಂದು ಕಡೆ ಮಾರ್ಕರಂ ಕಚ್ಚಿ ನಿಂತರು. ಆದರೆ 7ನೇಯವರಾಗಿ ಪೆವಿಲಿಯನ್ ಸೇರಿದಾಗ ತಂಡವು ತೂಗುಯ್ಯಾಲೆ ಸ್ಥಿತಿಯಲ್ಲಿತ್ತು. ಉತ್ತಮ ಸ್ಥಿತಿಯಲ್ಲಿದ್ದ ತಂಡ ಕೇವಲ 25 ರನ್‌ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಕೇಶವ್ ಮಹಾರಾಜ್ ಒಂದು ಕಡೆ ಕಚ್ಚಿ ನಿಂತಿದ್ದರು. ಅಂತಿಮವಾಗಿ 9 ವಿಕೆಟ್‌ ಕಳೆದುಕೊಂಡು 271 ರನ್‌ ಗಳಿಸಿ ದಕ್ಷಿಣ ಆಫ್ರಿಕಾ ವಿಜಯಿಯಾಯಿತು. 47.2 ಓವರ್‌ಗಳಲ್ಲಿ ಈ ಗುರಿ ಮುಟ್ಟಿತು. ತಂಡಕ್ಕೆ ನಾಲ್ಕು ರನ್‌ ಬೇಕಾಗಿದ್ದಾಗ ಕೇಶವ ಮಹಾರಾಜ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ರೋಮಾಂಚನಕಾರಿ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಪಾಕಿಸ್ತಾನ ಪರ ಶಾಹಿನ್ ಶಾ ಅಫ್ರಿದಿ 3, ಹಾರಿಸ್‌ ರೌಫ್, ಮೊಹಮ್ಮದ್ ವಾಸಿಂ, ಉಸ್ಮಾನ್ ಮೀರ್ ತಲಾ 2 ವಿಕೆಟ್ ಹಂಚಿಕೊಂಡರು.
ದಕ್ಷಿಣ ಆಫ್ರಿಕಾ ಪರ ಸ್ಪಿನ್ನರ್‌ ತಬ್ರೇಜ್‌ ಶಂಸಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಒಂದು ವಾರ ಮುನ್ನ ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement