ಭೋಪಾಲ್ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1.11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಭಾನುವಾರ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿರುವ ದಿಗಿಜಯ ಸಿಂಗ್ ರಾಜಧಾನಿ ಭೋಪಾಲ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸಿಂಗ್, “ನಾನು ಸನಾತನ ಧರ್ಮವನ್ನು ಅನುಸರಿಸುತ್ತೇನೆ ಮತ್ತು ನಾನು ಒಳ್ಳೆಯ ಹಿಂದೂ … ಆದರೆ, ಚುನಾವಣೆಯಲ್ಲಿ ಧರ್ಮವನ್ನು ಬಳಸುವುದನ್ನು ಒಪ್ಪುವುದಿಲ್ಲ” ಎಂದು ಅವರು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಶಿವರಾಜ್ ಸಿಂಗ್ ಚೌಹಾಣ್ 1 ಲಕ್ಷ ರೂ. ನೀಡಿದರೆ, ನಾನು 1.11 ಲಕ್ಷ ರೂ.ಗಳನ್ನು ಟ್ರಸ್ಟ್‌ಗೆ ಸಲ್ಲಿಸಲು ಆ ಚೆಕ್ ಅನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಿದೆ. ಅದನ್ನು ವಾಪಸ್ ಕಳುಹಿಸಿ ನಾನೇ ಸಲ್ಲಿಸುವಂತೆ ಅವರು ಹೇಳಿದರು. ನಂತರ ನಾನು ಅದನ್ನು ಟ್ರಸ್ಟ್‌ಗೆ ಸಲ್ಲಿಸಿದ್ದೇನೆ” ಎಂದು ಸಿಂಗ್ ಹೇಳಿದ್ದಾರೆ.
ನವರಾತ್ರಿಯ ಕೊನೆಯ ದಿನದಂದು ತಮ್ಮ ನಿವಾಸದಲ್ಲಿ ‘ಕನ್ಯಾ ಪೂಜೆ’ ಮಾಡುವ ಕುರಿತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ವಾಗ್ಯುದ್ಧದಲ್ಲಿ ತೊಡಗಿಕೊಂಡ ಒಂದು ವಾರದ ನಂತರ ಸಿಂಗ್ ಅವರ ಈ ಹೇಳಿಕೆ ಬಂದಿದೆ.
ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು , ಅವರನ್ನು ‘ಡ್ರಾಮೇಬಾಜ್’ (ರಂಗಭೂಮಿಯಲ್ಲಿ ತೊಡಗಿರುವ ವ್ಯಕ್ತಿ) ಎಂದು ಕರೆದಿದ್ದರು. ”ಮುಖ್ಯಮಂತ್ರಿ ಬಗ್ಗೆ ಮಾತನಾಡಬೇಡಿ. ಇಂತಹ ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ಅವರಂತೆ ನಾಟಕ ಮಾಡುವ ವ್ಯಕ್ತಿಯನ್ನೂ ನಾನು ನೋಡಿಲ್ಲ. ಈಗ ಪ್ರಧಾನಿ ಮೋದಿ ಕೂಡ ಅವರಿಗೆ ಹೆದರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು.
ಕಾಂಗ್ರೆಸ್ ನಾಯಕನಿಗೆ ತಿರುಗೇಟು ನೀಡಿದ ಚೌಹಾಣ್, “ನಿನ್ನೆ ಇಡೀ ರಾಷ್ಟ್ರವೇ ‘ಕನ್ಯಾ ಪೂಜೆ’ ಮಾಡುತ್ತಿದ್ದಾಗ ದಿಗ್ವಿಜಯ ಸಿಂಗ್ ಇದನ್ನು ‘ನಾಟಕ ಎಂದು ಕರೆದರು, ಮಹಿಳೆಯರಿಗೆ ನೀಡುವ ಗೌರವವನ್ನು ನಿಮ್ಮಂತಹವರು ಸಹಿಸುವುದಿಲ್ಲ. ಹೆಣ್ಣು ಮಕ್ಕಳನ್ನು ಪೂಜಿಸುವುದು ನಾಟಕವೇ ಎಂದು ನಾನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರನ್ನು ಕೇಳ ಬಯಸುತ್ತೇನೆ. ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದರು.
ನವೆಂಬರ್ 17 ರಂದು ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮತಗಳ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.2020 ರಲ್ಲಿ ಕಾಂಗ್ರೆಸ್ ಸರ್ಕಾರ ಪತನದ ನಂತರ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ