ವಿಶ್ವಕಪ್ 2023 : ಪಾಕಿಸ್ತಾನದ ಆಟಗಾರರಿಗೆ 5 ತಿಂಗಳಿಂದ ಸಂಬಳವನ್ನೇ ಕೊಟ್ಟಿಲ್ಲ ; ಪಾಕ್‌ ಮಾಜಿ ಆಟಗಾರನ ಹೊಸ ಬಾಂಬ್‌…!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅವರು ಪಾಕಿಸ್ತಾನದ ಪುರುಷರ ಕ್ರಿಕೆಟ್‌ ತಂಡದ ಆಟಗಾರರಿಗೆ ಕಳೆದ ಐದು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ನಲ್ಲಿ ಕಳಪೆ ಪ್ರದರ್ಶನದ ನಂತರ ಪಾಕಿಸ್ತಾನ ತಂಡದ ಸೆಮಿಫೈನಲ್‌ ಪ್ರವೇಶ ಬಹುತೇಕ ಅಸಾಧ್ಯ ಎಂಬ ಸ್ಥಿತಿಯಲ್ಲಿರುವಾಗ ಲತೀಫ್ ಅವರ ಹೇಳಿಕೆ ಬಂದಿದೆ.
ಲತೀಫ್ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಟಗಾರರು ಸಹಿ ಮಾಡಿದ ಕೇಂದ್ರ ಒಪ್ಪಂದಗಳನ್ನು ಈಗ ಮರುಪರಿಶೀಲಿಸಲಾಗುತ್ತಿದೆ ಎಂದು ಆಟಗಾರರಿಗೆ ಮಾಹಿತಿ ನೀಡಿದೆ.
ಪರಿಸ್ಥಿತಿಯ ಬಗ್ಗೆ ಕೆಲವು ಸ್ಪಷ್ಟೀಕರಣವನ್ನು ಪಡೆಯಲು ಪ್ರಯತ್ನಿಸಿದಾಗ ಪಾಕಿಸ್ತಾನದ ತಂಡದ ನಾಯಕ ಬಾಬರ್ ಅವರನ್ನು ಪಿಸಿಬಿಯ ಉನ್ನತ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಲತೀಫ್ ಹೇಳಿದರು. ಬಹುಶಃ ಅವರ ನಾಯಕತ್ವದ ಅಂತ್ಯ ಬಂದಿವೆ ಅನಿಸುತ್ತದೆ ಎಂದು ಅವರು ಶನಿವಾರ ಹೇಳಿದ್ದಾರೆ.

ಪಿಟಿವಿ ಸ್ಪೋರ್ಟ್ಸ್ ಚಾನೆಲ್‌’ನಲ್ಲಿ ಮಾತನಾಡಿದ ರಶೀದ್ ಲತೀಫ್, “ಪಾಕಿಸ್ತಾನದ ಮಾಧ್ಯಮಗಳಲ್ಲಿ, ಅನೇಕ ವಿಷಯಗಳು ಬರುತ್ತಿವೆ, ಬಹುಶಃ ಅವು ಸುಳ್ಳು ಸುದ್ದಿಗಳು. ನಾನು ನಿಮಗೆ ನಿಜವಾದ ಸುದ್ದಿಯನ್ನು ನೀಡುತ್ತೇನೆ, ಐದು ತಿಂಗಳಿಂದ ಅನೇಕ ಆಟಗಾರರಿಗೆ ಸಂಬಳ ನೀಡಿಲ್ಲ. ಕಳೆದ ಎರಡು ದಿನಗಳಿಂದ ಬಾಬರ್ ಆಜಂ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಧ್ಯಕ್ಷರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ, ಅವರು ಅವರು ಸಲ್ಮಾನ್ ನಸೀರ್ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಅವರಿಗೆ ಸಂದೇಶ ಕಳುಹಿಸುತ್ತಿದ್ದಾರೆ ಮತ್ತು ಅವರು ಉಸ್ಮಾನ್ ವಾಲ್ಹಾ (ಅಂತರರಾಷ್ಟ್ರೀಯ ಕ್ರಿಕೆಟ್ ನಿರ್ದೇಶಕ) ಅವರಿಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಲತೀಫ್ ಹೇಳಿದರು.”ಆಟಗಾರರಿಗೆ ಐದು ತಿಂಗಳಿನಿಂದ ಸಂಬಳ ನೀಡದಿದ್ದರೆ, ಅವರು ಆಡುತ್ತಾರೆ ಎಂದು ನೀವು ಭಾವಿಸುತ್ತೀರಾ?” ಎಂದು ಅವರು ಪ್ರಶ್ನಿಸಿದರು.

ಪಿಸಿಬಿಯಲ್ಲಿನ ಇಂತಹ ವ್ಯವಹಾರಗಳ ಬಗ್ಗೆ ನನಗೆ ಸಾಕಷ್ಟು ಮಾಹಿತಿ ಇದೆ ಎಂದು ಹೇಳಿದ ಪಾಕಿಸ್ತಾನದ ಮಾಜಿ ವಿಕೆಟ್‌ ಕೀಪರ್ ರಶೀದ್‌ ಲತೀಫ್‌ ಅವರು ಹೇಳಲು ಹೊರಟರೆ ಎರಡು ಗಂಟೆಗಳ ಪ್ರದರ್ಶನವೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ಬಿರುಕು ಇಲ್ಲ ಎಂದು ಪಿಸಿಬಿ ಹೇಳಿಕೆಯನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಲತೀಫ್ ಈ ಹೇಳಿಕೆಗಳನ್ನು ನೀಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement