ತೆಲಂಗಾಣ ಚುನಾವಣೆ : ಪ್ರಚಾರದ ವೇಳೆ ಮೇದಕ್ ಸಂಸದರಿಗೆ ಚಾಕು ಇರಿತ | ವೀಡಿಯೊ

ಹೈದರಾಬಾದ್: ತೆಲಂಗಾಣ ಸಿದ್ದಿಪೇಟ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಇಂದು ಸೋಮವಾರ ಬಿಆರ್‌ಎಸ್‌ ಸಂಸದ ಕೋಥಾ ಪ್ರಭಾಕರ ರೆಡ್ಡಿ ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ಸಂಸದರು ಪಾದ್ರಿಯೊಬ್ಬರ ಮನೆಗೆ ತೆರಳುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆದಿದೆ.
ಒಬ್ಬ ಅಪರಿಚಿತ ವ್ಯಕ್ತಿ ಸಂಸದರ ಬಳಿಗೆ ಬಳಿಗೆ ಹೋದ ಮತ್ತು ಸಂಸದರೊಂದಿಗೆ ಕೈಕುಲುಕಲು ಬಯಸಿದ್ದಾನೆ, ಆದರೆ ಆತ ಇದ್ದಕ್ಕಿದ್ದಂತೆ ಚಾಕುವನ್ನು ಹೊರತೆಗೆದು ಸಂಸದರ ಹೊಟ್ಟೆಗೆ ಇರಿದಿದ್ದಾನೆ. ರ್ಯಾಲಿಯಲ್ಲಿದ್ದ ಬಿಆರ್‌ಎಸ್ ಕಾರ್ಯಕರ್ತರು ದಾಳಿಕೋರನನ್ನು ಹಿಡಿದು ಥಳಿಸಿದ್ದಾರೆ.
ದಾಳಿಕೋರನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಎನ್.ಶ್ವೇತಾ ತಿಳಿಸಿದ್ದಾರೆ.

ಘಟನೆಯ ನಂತರ, ಬಿಆರ್‌ಎಸ್ ಸಂಸದರನ್ನು ಗಜ್ವೇಲ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಿಕಂದರಾಬಾದ್‌ನ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೋಥಾ ಪ್ರಭಾಕರ ರೆಡ್ಡಿ ಅವರು ತೆಲಂಗಾಣದ ಮೇದಕ್ ಕ್ಷೇತ್ರದ ಸಂಸದರಾಗಿದ್ದಾರೆ.

ಪ್ರಮುಖ ಸುದ್ದಿ :-   ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : ಡಬ್ಲ್ಯೂ ಎಫ್‌ ಐ ಮಾಜಿ ಮುಖ್ಯಸ್ಥನ ವಿರುದ್ಧ ದೋಷಾರೋಪಣೆ ರೂಪಿಸಲು ಕೋರ್ಟ್‌ ಆದೇಶ

ನವೆಂಬರ್ 30 ರ ವಿಧಾನಸಭಾ ಚುನಾವಣೆಗೆ ದುಬ್ಬಾಕ್‌ನಿಂದ ಬಿಆರ್‌ಎಸ್‌ನಿಂದ ಕಣಕ್ಕಿಳಿದಿರುವ ಪ್ರಭಾಕರ ರೆಡ್ಡಿ ಪ್ರಚಾರ ನಡೆಸುತ್ತಿದ್ದಾಗ ದೌಲ್ತಾಬಾದ್ ಮಂಡಲದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಭಾಕರ್ ರೆಡ್ಡಿ ವಾಹನದಲ್ಲಿ ಕುಳಿತಿದ್ದಾಗ ತನ್ನ ಹೊಟ್ಟೆಯ ಮೇಲೆ ಇರಿತದ ಸ್ಥಳವನ್ನು ಒತ್ತಿ ಹಿಡಿದಿರುವುದನ್ನು (ರಕ್ತಸ್ರಾವವನ್ನು ನಿಲ್ಲಿಸಲು) ಟಿವಿ ದೃಶ್ಯಾವಳಿಗಳು ತೋರಿಸಿವೆ.

ನವೆಂಬರ್ 30 ರಂದು ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕ ರಘುನಂದನ್ ಅವರ ವಿರುದ್ಧ ಕೋಠಾ ಪ್ರಭಾಕರ ರೆಡ್ಡಿ ಅವರನ್ನು ಇತ್ತೀಚೆಗೆ ದುಬ್ಬಾಕದಿಂದ ಬಿಆರ್‌ಎಸ್ ಅಭ್ಯರ್ಥಿಯಾಗಿ ಕಣಕ್ಕಳಿಸಲಾಗಿತ್ತು. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು 2014 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವನ್ನು ಬಿಟ್ಟುಕೊಟ್ಟ ನಂತರ ಅವರು ಸಂಸದರಾಗಿದ್ದಾರೆ.

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement