93ನೇ ವಯಸ್ಸಿನಲ್ಲಿ ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಮಾಡಿದ ಈ ಅಜ್ಜಿ….!

ಹೈದರಾಬಾದ್ : ಉಸ್ಮಾನಿಯಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 93 ವರ್ಷದ ಅಜ್ಜಿ ಪಿಎಚ್‌ಡಿ ಪದವಿಯನ್ನು ಪಡೆದು ಎಲ್ಲರನ್ನೂ ಬೆರಗಾಗಿಸಿದ್ದಾರೆ
ತೆಲಂಗಾಣದ ರಾಜಧಾನಿ ಹೈದರಾಬಾದ್ ಮೂಲದ ರೇವತಿ ತಂಗವೇಲು ಇಳಿಯ ವಯಸ್ಸಿನಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, ಬಳಿಕ ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಮಾಡಲು ಮುಂದಾದರು. ತಮ್ಮ ಇಚ್ಛೆಯಂತೆ 93ನೇ ವರ್ಷಕ್ಕ ಪಿಎಚ್‌ಡಿ ಪದವಿ ಪಡೆದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾರೆ.ರೇವತಿ ತಂಗವೇಲು ಅವರು ಇಂಗ್ಲಿಷ್ ವ್ಯಾಕರಣ, ವರ್ಣಮಾಲೆ ಮತ್ತು ಪದ ಸಂಯೋಜನೆಯಂತಹ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ರೇವತಿ ತಂಗವೇಲು ಅವರ ಬಗ್ಗೆ….
ತೆಲಂಗಾಣ ರಾಜಧಾನಿ ಹೈದರಾಬಾದ್ ಮೂಲದ ರೇವತಿ ತಂಗವೇಲು ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿ 1990ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರವೂ ಅವರಿಗೆ ಇನ್ನೂ ಅಧ್ಯಯನ ಮಾಡಬೇಕೆಂಬ ಬಯಕೆ ಇತ್ತು. ಅವರು ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಮಾಡಲು ಬಯಸಿದ್ದರು. ಅದಕ್ಕಾಗಿ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನೂ ಪಡೆದರು. ಇಂಗ್ಲಿಷ್ ವ್ಯಾಕರಣ, ವರ್ಣಮಾಲೆ ಮತ್ತು ಪದ ಸಂಯೋಜನೆಯಂತಹ ವಿಷಯಗಳ ಬಗ್ಗೆ ಸಂಶೋಧನೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ರೇವತಿ ತಂಗವೇಲು ಅವರಿಗೆ ಉಸ್ಮಾನಿಯಾ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.
ಓದು, ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ರೇವತಿ ತಂಗವೇಲು ಅವರ ಸ್ಪೂರ್ತಿದಾಯಕ ಓದಿನ ಪಯಣವೇ ಸಾಕ್ಷಿ. ಪ್ರಸ್ತುತ, ಅವರು ಕೀಸ್ ಎಜುಕೇಷನಲ್ ಸೊಸೈಟಿ, ಸಿಕಂದರಾಬಾದ್‌ನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement