ಲೋಕಸಭೆ ಚುನಾವಣೆಗೆ ಸ್ಪರ್ಧೆ: ಕಂಗನಾ ರಣಾವತ್ ಹೇಳಿದ್ದೇನು..?

ದ್ವಾರಕಾ: ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದಾರೆ. ಶ್ರೀಕೃಷ್ಣ ಕೃಪೆ ತೋರಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕದೀಶ ದೇಗುಲಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ (ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ನಾನು ಹೋರಾಡುತ್ತೇನೆ)” ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೊಗಳಿದ ಕಂಗನಾ ರಣಾವತ್‌, ಸುಮಾರು 600 ವರ್ಷಗಳ ಹೋರಾಟದ ಬಳಿಕ ಹಾಗೂ ಬಿಜೆಪಿ ಸರ್ಕಾರದಿಂದಾಗಿ ನಾವು ಇಂತಹ ದಿನವನ್ನು ನೋಡುತ್ತಿದ್ದೇವೆ. ನಾವು ಬಹಳ ಸಂಬ್ರಮದಿಂದ ಶ್ರೀರಾಮನ ದೇವಸ್ಥಾನವನ್ನು ಅಯೋಧ್ಯೆಯಲ್ಲಿ ನಿರ್ಮಿಸುತ್ತಿದ್ದೇವೆ. ಹಿಂದೂ ಧರ್ಮದ ಧ್ವಜವನ್ನು ಜಗತ್ತಿನಾದ್ಯಂತ ಹಾರಿಸಬೇಕು ಎಂದು ಹೇಳಿದರು..
ಸಮುದ್ರದಲ್ಲಿ ಮುಳುಗಿರುವ ದ್ವಾರಕಾ ನಗರಕ್ಕೆ ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುವಂತೆ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ದ್ವಾರಕಾ ನಗರ ದೈವಿಕ ಹಿನ್ನೆಲೆ ಇರುವ ನಗರ. ಇಲ್ಲಿ ಎಲ್ಲವೂ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರವನ್ನು ಮೇಲಿನಿಂದ ನೋಡಬಹುದು. ನೀರಿನೊಳಗೆ ಹೋಗಿ ಅವಶೇಷಗಳನ್ನು ನೋಡಬಹುದಾದಂತಹ ಸೌಲಭ್ಯವನ್ನು ಸರ್ಕಾರ ಕಲ್ಪಿಸಬೇಕು ಎಂದು ನಾನು ಬಯಸುತ್ತೇನೆ. ನನಗೆ ಕೃಷ್ಣ ನಗರವು ಸ್ವರ್ಗದಂತೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಐಎಎಫ್‌ನ ಚೆನ್ನೈ ಏರ್‌ಶೋ : ಕನಿಷ್ಠ 5 ಪ್ರೇಕ್ಷಕರು ಸಾವು, ಡಿಹೈಡ್ರೇಶನ್‌ನಿಂದ ಸುಮಾರು 100 ಮಂದಿ ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement