ನೇಪಾಳದಲ್ಲಿ ಭಾರೀ ಭೂಕಂಪ : 128 ಮಂದಿ ಸಾವು, ದೆಹಲಿಯಲ್ಲೂ ಕಂಪನದ ಅನುಭವ

ಕಠ್ಮಂಡು: ಶುಕ್ರವಾರ ತಡರಾತ್ರಿ ಸಂಭವಿಸಿದ 6.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ನೇಪಾಳದಲ್ಲಿ ಅನೇಕರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಸಂಖ್ಯೆ 128 ಕ್ಕೆ ತಲುಪಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ನೇಪಾಳದ ಸರ್ಕಾರಿ ದೂರದರ್ಶನದ ಪ್ರಕಾರ ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ 140 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ಜಾಜರ್‌ಕೋಟ್‌ನ ಲ್ಯಾಮಿಡಾಂಡಾ ಪ್ರದೇಶದಲ್ಲಿತ್ತು.
ಗಾಯಾಳುಗಳ ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ದೇಶದ ಎಲ್ಲಾ ಮೂರು ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಅವರ ಕಚೇರಿ ತಿಳಿಸಿದೆ. ಏತನ್ಮಧ್ಯೆ, ಪ್ರಧಾನಿ ಕಮಲ್‌ ದಹಲ್ ಪ್ರಚಂಡ ಅವರು ಶನಿವಾರ ದೇಶದ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಡೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಗಾಯಗಳು ಮತ್ತು ಆಸ್ತಿ ಹಾನಿಯ ವರದಿಗಳು ಬರುತ್ತಿವೆ ಎಂದು ದೇಶದ ಗೃಹ ಸಚಿವಾಲಯ ತಿಳಿಸಿದೆ. ಗಾಯಾಳುಗಳು ಕಠ್ಮಂಡುವಿನಿಂದ ಪಶ್ಚಿಮಕ್ಕೆ 500 ಕಿಲೋಮೀಟರ್ ದೂರದಲ್ಲಿರುವ ಜಜರ್ಕೋಟ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಮಚ್ಛಾದಿತ ಪ್ರದೇಶವಾಗಿರುವ ನೇಪಾಳದ ಪಶ್ಚಿಮ ಗಡಿ ಭಾಗದಲ್ಲಿ ನೆಲಮಟ್ಟದಿಂದ ಭೂಮಿಯ ಒಳಗೆ ಸುಮಾರು 18 ಕಿ.ಮೀ. ದೂರದಲ್ಲಿ ಕಂಪನ ಕೇಂದ್ರ ಸ್ಥಾನವಿತ್ತು. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ಈ ಕಂಪನಗಳು ಹೊಂದಿದ್ದವು ಎಂದು ಅಮೆರಿಕದ ಜಿಯೋಲಜಿಕಲ್ ಸರ್ವೆ ಇಲಾಖೆ ತಿಳಿಸಿದೆ.

ಅಕ್ಟೋಬರ್ 3 ರಂದು ನೇಪಾಳದಲ್ಲಿ ಸಂಭವಿಸಿದೆ ಪ್ರಬಲವಾದ – 6.2 ತೀವ್ರತೆಯ ಭೂಕಂಪಗಳ ಸರಣಿಯು ನೇಪಾಳವನ್ನು ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪನಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಲಕ್ನೋ, ಬಸ್ತಿ, ಬಾರಾಬಂಕಿ, ಫಿರೋಜಾಬಾದ್, ಅಮೇಥಿ, ಗೊಂಡಾ, ಪ್ರತಾಪಗಢ, ಭದೋಹಿ, ಬಹ್ರೈಚ್, ಗೋರಖ್‌ಪುರ ಮತ್ತು ಡಿಯೋರಿಯಾ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ.
ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ಸಂಭವಿಸಿದ ಜೀವಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ಹಿಂದೆ, ನವೆಂಬರ್ 2022 ರಲ್ಲಿ, ನೇಪಾಳದ ದೋಟಿ ಜಿಲ್ಲೆಯಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಆರು ಜನರು ಮೃತಪಟ್ಟಿದ್ದರು. 2015 ರಲ್ಲಿ 7.8 ತೀವ್ರತೆಯ ಭೂಕಂಪವು 12,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement