ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ : ಶಾಲೆಗಳಿಗೆ ರಜೆ ಘೋಷಣೆ

ನವದೆಹಲಿ: ದೆಹಲಿಯಲ್ಲಿ ಕಳೆದೊಂದು ವಾರದಿಂದ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿರುವುದರಿಂದ ನವೆಂಬರ್ 10ರ ವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ.
5ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ನವೆಂಬರ್‌ 10ರ ವರೆಗೆ ಬಂದ್ ಮಾಡುವಂತೆ ಆದೇಶವನ್ನು ವಿಸ್ತರಿಸಲಾಗಿದೆ. 6ರಿಂದ 12 ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡುವ ಅಗತ್ಯವಿಲ್ಲ, ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ ಎಂದು ತಿಳಿಸಲಾಗಿದೆ. ಇದರ ಜೊತೆಗೆ ಆನ್‌ಲೈನ್ ತರಗತಿ ನಡೆಸಲು ಅನುಮತಿ ನೀಡಲಾಗಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದ ನಂತರ ವಾರದ ಹಿಂದೆ 5ನೇ ತರಗತಿ ವರೆಗಿನ ಶಾಲೆಗಳನ್ನು ನವೆಂಬರ್‌ 5ರ ವರೆಗೆ ಬಂದ್ ಮಾಡಿ ಸರ್ಕಾರ ಆದೇಶಿಸಿತ್ತು.. ಆದರೆ ಈಗ ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಳವಾದ ನಂತರ ಅದನ್ನು ವಿಸ್ತರಿಸಿಲಾಗಿದೆ. ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ (ಎಕ್ಯೂಐ) 450 ಅಂಕ ಮೀರಿದೆ. ಹೀಗಾಗಿ ಡೀಸೆಲ್ ಬಸ್ ಹಾಗೂ ಭಾರೀ ಗಾತ್ರದ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಅಲ್ಲದೆ, ಜನರು ಮಾಸ್ಕ್ ಧರಿಸಿ ಹೊರಬರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಜಮೀನಿನ ತ್ಯಾಜ್ಯ ಸುಡುತ್ತಿರುವುದು ಭಾರೀ ಪ್ರಮಾಣದ ಮಾಲಿನ್ಯಕ್ಕೆ ಕಾರಣವಾಗಿದೆ. ಇದು ಬಿಜೆಪಿ ಹಾಗೂ ಆಪ್ ನಾಯಕರ ನಡುವಿನ ವಾಗ್ಯುದ್ಧದಕ್ಕೂ ಕಾರಣವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement