ಉಡುಪಿಯ ಹೊಟೇಲ್‌ ಉಪಾಹಾರದ ಮೆನು ಹೇಳುವ ಶೈಲಿಗೆ ಆನಂದ್ ಮಹೀಂದ್ರಾ ಕ್ಲೀನ್‌ ಬೌಲ್ಡ್‌ : ಎಐ ಮೀರಿಸುವ ಹೊಟೇಲ್‌ ಮಾಣಿ ಎಂದ ಉದ್ಯಮಿ | ವೀಕ್ಷಿಸಿ

ಕರ್ನಾಟಕದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿರುವ ಉಡುಪಿ, ಕಡಲತೀರಗಳಿಗೆ ಮಾತ್ರವಲ್ಲ, ಸಾಂಪ್ರದಾಯಿಕ ತಿಂಡಿ-ತಿನಿಸುಗಳಿಗೂ ಹೆಸರುವಾಸಿ. ಪ್ರವಾಸಿಗರು ಮತ್ತು ಆಹಾರಪ್ರಿಯರು ಇಲ್ಲಿಗೆ ಅದರ ವಿಶಿಷ್ಟವಾದ ಸಮುದ್ರಾಹಾರದ ರುಚಿಯನ್ನು ಅರಸಿ ಬರುತ್ತಾರೆ.
ಉಡುಪಿಯ ಶ್ರೀ ವಿಠ್ಠಲ ಟೀ ಕಾಫಿ ಹೌಸ್ ನ ಸಿಬ್ಬಂದಿ ಹೊಟೇಲಿನ ಮೆನುವನ್ನು ನಿರ್ಗಳವಾಗಿ ಹೇಳುವ ಶೈಲಿಗೆ ಹೆಸರಾಂತ ಉದ್ಯಮಿ ಆನಂದ ಮಹೀಂದ್ರಾ ಮನ ಸೋತಿದ್ದಾರೆ ಹಾಗೂ ಈ ಬಗ್ಗೆ ಸಾಮಾಜಿಕ ಮಾಧ್ಯಮ X ನಲ್ಲಿ ಅವರು ಆತ ಮೆನು ಹೇಳುವ ಪೋಸ್ಟ್ ಶೇರ್ ಮಾಡಿದ್ದಾರೆ.

ವಿಸಿಟ್ ಉಡುಪಿ ಎನ್ನುವ ಪೇಜ್ ನಲ್ಲಿ ಶ್ರೀ ವಿಠ್ಠಲ ಟೀ ಕಾಫಿ ಹೌಸ್‌ನ ಸಿಬ್ಬಂದಿ ನಿರರ್ಗಳವಾಗಿ ಹೊಟೇಲಿನ ತಿಂಡಿ-ತಿನಿಸುಗಳ ಮೆನು ಹೇಳುತ್ತಿರುವ ವೀಡಿಯೊ ಹಂಚಿಕೊಂದಿರುವ ಆನಂದ ಮಹೀಂದ್ರಾ ಅವರು, ‘ಚಾಟ್ ಜಿಪಿಟಿಯಿಂದ ಜೆನೆರೇಟ್ ಮಾಡಲಾದ ಉಪಾಹಾರದ ಮೆನು ಕೂಡ ಉಡುಪಿಯ ಶ್ರೀ ವಿಠ್ಠ ಟೀ ಕಾಫಿ ಹೌಸ್‌ನ ಈ ವ್ಯಕ್ತಿಯ ಸಾಮರ್ಥ್ಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದು ನನ್ನ ನಿರಂತರವಾಗಿ ವಿಸ್ತರಿಸುತ್ತಿರುವ ಪ್ರಯಾಣ ಬಕೆಟ್‌ ಪಟ್ಟಿಯಲ್ಲಿ ಮುಂದಿನದು. ಇನ್‌ಕ್ರಡಿಬಲ್‌ ಉಡುಪಿ (Incredible Udupi)’ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ನಂತರ ಒಬ್ಬ ಬಳಕೆದಾರರು, “ಭಾರತದ ಪ್ರತಿಯೊಂದು ಸ್ಥಳವು “ಉಡುಪಿ ಹೋಟೆಲ್” ಅನ್ನು ಹೊಂದಿದೆ / ಹೊಂದಿದೆ .. ಮತ್ತು ಆ ಬ್ರ್ಯಾಂಡ್ ನೈರ್ಮಲ್ಯ, ರುಚಿ ಮತ್ತು ಗುಣಮಟ್ಟಕ್ಕಾಗಿ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಇದು “ಡಾರ್ಜೆಲ್ಲಿಂಗ್ ಟೀ”ಯಂತೆ. ಆ ಹೆಸರೇ ಸಾಕು. ಯಾವುದೇ ಪ್ರಮುಖ ನಟ ಈ ಹೆಸರುಗಳನ್ನು ಬ್ರಾಂಡ್ ಮಾಡಿಲ್ಲ ಆದರೆ ಇವುಗಳು ಜೀವಿತಾವಧಿಯಲ್ಲಿ ಬದುಕಿದ ಸಮಯ-ಪರೀಕ್ಷಿತ ಬ್ರಾಂಡ್‌ಗಳಾಗಿವೆ ಎಂದು ಬರೆದಿದ್ದಾರೆ.
ಮಹೀಂದ್ರಾ ಅವರ ಈ ಪೋಸ್ಟ್ ನೋಡಿ ಕರಾವಳಿಗರು ಸಂತಸ ವ್ಯಕ್ತಪಡಿಸಿದ್ದು, ‘ಆನಂದ್​​ ಸರ್​​ ಅವರನ್ನು ಕರ್ನಾಟಕ ಬ್ರಾಂಡ್ ಅಂಬಾಸಿಡರ್​​ ಮಾಡಿ, ಅದ್ಭುತ ಶೋಧನೆ, ಬಹಳ ಚೆನ್ನಾಗಿದೆ, ದಕ್ಷಿಣ ಭಾರತದ ಉಪಾಹಾರ ಮೆನುಗೆ ಯಾವುದೂ ಹೊಂದಿಕೆಯಾಗುವುದಿಲ್ಲ !’ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement