ಕೆ ಆರ್‌ ಎಸ್ ಜಲಾಶಯದ ಹಿನ್ನೀರಿನಲ್ಲಿ ಮೂವರು ನೀರು ಪಾಲು

ಮಂಡ್ಯ: ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ವೇಣುಗೋಪಾಲ ಸ್ವಾಮಿ ದೇವಾಲಯ ಬಳಿ ನಡೆದಿದೆ.
ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ 20 ಜನರ ತಂಡ ಪ್ರವಾಸಕ್ಕೆ ಆಗಮಿಸತ್ತು, ಈ ವೇಳೆ ಈಜಲು ಹೋಗಿದ್ದ ಹರೀಶ (32), ನಂಜುಂಡ ಹಾಗೂ ಜ್ಯೋತಿ (18) ಎಂಬವರು ಮೃತಪಟ್ಟಿದ್ದಾರೆ ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದೆ. ಜ್ಯೋತಿ ಹಾಗೂ ನಂಜುಂಡ ಅವರ ಶವವನ್ನು ಪೊಲೀಸರು ಹೊರತೆಗೆದಿದ್ದು, ಹರೀಶ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.
ಎನ್‌ಜಿಒ ಕಡೆಯಿಂದ ಮೈಸೂರಿನಿಂದ 20ಕ್ಕೂ ಹೆಚ್ಚು ಜನರು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕೆಲವರು ಹಿನ್ನೀರಿನಲ್ಲಿ ನೀರಿಗೆ ಇಳಿದಿದ್ದಾರೆ. ಕೆಲವರು ಈಜುತ್ತಿದ್ದರು. ಆಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ, ಆಗ ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ ಎಂದು ಎನ್ನಲಾಗಿದೆ. ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement