ವಿಶ್ವಕಪ್: ಐಸಿಸಿ ಟೂರ್ನಮೆಂಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕ, ತಂಡದಲ್ಲಿ ಭಾರತದ ತಂಡದ 6 ಆಟಗಾರರಿಗೆ, ಆಸ್ಟ್ರೇಲಿಯಾದಿಂದ ಇಬ್ಬರಿಗೆ ಸ್ಥಾನ

ನವದೆಹಲಿ: ಅಂತಿಮ ಹಣಾಹಣಿಯಲ್ಲಿ ಆರು ಬಾರಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತವು ಸೋತಿದ್ದರೂ, ಐಸಿಸಿ (ICC) ಹೆಸರಿಸಿದ ವಿಶ್ವಕಪ್ 2023 ರ ಟೂರ್ನಮೆಂಟ್ ತಂಡವು ಭಾರತೀಯ ಆಟಗಾರರ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ.
ರೋಹಿತ್ ಶರ್ಮಾ ಅವರು 2023 ರ ವಿಶ್ವಕಪ್ ಟೂರ್ನಮೆಂಟ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ICC) ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಸೇರಿದಂತೆ 6 ಭಾರತೀಯ ಆಟಗಾರರು ಸೋಮವಾರ ಘೋಷಿಸಲಾದ ತಂಡದ ಭಾಗವಾಗಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ವಿಶ್ವಕಪ್‌ ಟ್ರೋಫಿ ಎತ್ತಿದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆಡಮ್ ಝಂಪಾ ಅವರು ವಿಶ್ವಕಪ್ ವಿಜೇತ ಆಸ್ಟ್ರೇಲಿಯನ್ ತಂಡದಿಂದ ಐಸಿಸಿ XI ಗೆ ಆಯ್ಕೆಯಾದ ಇಬ್ಬರು ಆಟಗಾರರು. ದಕ್ಷಿಣ ಆಫ್ರಿಕಾದ ಯುವ ವೇಗದ ಬೌಲರ್ ಗೆರ್ಲ್ಯಾಂಡ್ ಕೊಯೆಟ್ಜಿ ಅವರನ್ನು ಐಸಿಸಿ ತಂಡದ 12ನೇ ವ್ಯಕ್ತಿ ಎಂದು ಹೆಸರಿಸಲಾಗಿದೆ. ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ 10 ತಂಡಗಳ ಪೈಕಿ 5 ತಂಡಗಳ ಆಟಗಾರರನ್ನು ಐಸಿಸಿ ವಿಶ್ವಕಪ್ ಟೂರ್ನಮೆಂಟ್‌ನ ತಂಡದಲ್ಲಿ ಆಯ್ಕೆ ಮಾಡಲಾಗಿದ್ದು, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶದಿಂದ ಯಾರೂ ಸ್ಥಾನ ಪಡೆದಿಲ್ಲ.
ನಾಯಕ ರೋಹಿತ್, ವಿರಾಟ್ ಕೊಹ್ಲಿ 11 ಪಂದ್ಯಗಳಲ್ಲಿ 765 ರನ್ ಗಳಿಸಿ ಮುಂಚೂಣಿಯಲ್ಲಿದ್ದಾರೆ, ಮೊಹಮ್ಮದ್ ಶಮಿ, ಪಂದ್ಯಾವಳಿಯಲ್ಲಿ 24 ಪ್ರಮುಖ ವಿಕೆಟ್ ಪಡೆದಿದ್ದಾರೆ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಹಾಗೂ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.
4 ಶತಕಗಳನ್ನು ಬಾರಿಸಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರನ್ನು ವಿಕೆಟ್ ಕೀಪರ್ ಮತ್ತು ರೋಹಿತ್ ಜೊತೆಗೆ ಆರಂಭಿಕರಾಗಿ ಹೆಸರಿಸಲಾಯಿತು ಮತ್ತು ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ತಂಡಕ್ಕೆ ನಂ. 4 ಆಗಿ ಆಯ್ಕೆಯಾದರು.

ಪ್ರಮುಖ ಸುದ್ದಿ :-   ʼಒಂದು ರಾಷ್ಟ್ರ ಒಂದು ಚುನಾವಣೆʼ ; ರಾಮನಾಥ ಕೋವಿಂದ ಸಮಿತಿ ವರದಿಗೆ ಮೋದಿ ಸಂಪುಟ ಅನುಮೋದನೆ

ಐಸಿಸಿ ತಂಡಕ್ಕೆ ಆಯ್ಕೆಯಾದ ಆಟಗಾರರು
ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್‌)- ದಕ್ಷಿಣ ಆಫ್ರಿಕಾ – 59.40 ಸರಾಸರಿಯಲ್ಲಿ 594 ರನ್
ರೋಹಿತ್ ಶರ್ಮಾ (ನಾಯಕ)-ಭಾರತ – 54.27 ಸರಾಸರಿಯಲ್ಲಿ 597 ರನ್
ವಿರಾಟ್ ಕೊಹ್ಲಿ -ಭಾರತ – 95.62 ಸರಾಸರಿಯಲ್ಲಿ 765 ರನ್
ಡೇರಿಲ್ ಮಿಚೆಲ್ (ನ್ಯೂಜಿಲೆಂಡ್) – 69 ಸರಾಸರಿಯಲ್ಲಿ 552 ರನ್
ಕೆ.ಎಲ್. ರಾಹುಲ್-ಭಾರತ- 75.33 ಸರಾಸರಿಯಲ್ಲಿ 452 ರನ್
ಗ್ಲೆನ್ ಮ್ಯಾಕ್ಸ್‌ವೆಲ್ -ಆಸ್ಟ್ರೇಲಿಯಾ- – 66.66 ಸರಾಸರಿಯಲ್ಲಿ 400 ರನ್ ಮತ್ತು 55 ಸರಾಸರಿಯಲ್ಲಿ ಆರು ವಿಕೆಟ್
ರವೀಂದ್ರ ಜಡೇಜಾ -ಭಾರತ – 40 ಸರಾಸರಿಯಲ್ಲಿ 120 ರನ್ ಮತ್ತು 24.87 ಸರಾಸರಿಯಲ್ಲಿ 16 ವಿಕೆಟ್
ಜಸ್ಪ್ರೀತ್ ಬುಮ್ರಾ -ಭಾರತ– 18.65 ಸರಾಸರಿಯಲ್ಲಿ 20 ವಿಕೆಟ್
ದಿಲ್ಶನ್ ಮಧುಶಂಕ -ಶ್ರೀಲಂಕಾ– 25 ಸರಾಸರಿಯಲ್ಲಿ 21 ವಿಕೆಟ್
ಆಡಮ್ ಝಂಪಾ -ಆಸ್ಟ್ರೇಲಿಯಾ- – 22.39 ಸರಾಸರಿಯಲ್ಲಿ 23 ವಿಕೆಟ್
ಮೊಹಮ್ಮದ್ ಶಮಿ-ಭಾರತ – 10.70 ಸರಾಸರಿಯಲ್ಲಿ 24 ವಿಕೆಟ್
12 ನೇ ಆಟಗಾರ: ಜೆರಾಲ್ಡ್ ಕೋಟ್ಜಿ-ದಕ್ಷಿಣ ಆಫ್ರಿಕಾ – 19.80 ಸರಾಸರಿಯಲ್ಲಿ 20 ವಿಕೆಟ್
ಗಮನಾರ್ಹವೆಂದರೆ, ರೋಹಿತ್ ಶರ್ಮಾ ಸತತ ಎರಡನೇ ಬಾರಿಗೆ ಏಕದಿನ ವಿಶ್ವಕಪ್‌ ಟೂರ್ನಮೆಂಟ್‌ನ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಆ ಅಮೋಘ 201 ರನ್ ಬಾರಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಭಾರತದ ಜಡೇಜಾ ಇಬ್ಬರು ಆಲ್‌ರೌಂಡರ್‌ಗಳು.

ಪ್ರಮುಖ ಸುದ್ದಿ :-   ಹಿಂದಿನ ಜಗನ್ ಸರ್ಕಾರ ಆಡಳಿತದಲ್ಲಿ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ; ಚಂದ್ರಬಾಬು ನಾಯ್ಡು ಗಂಭೀರ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement