ವೀಡಿಯೊ..| ರಾಜೀವ ಗಾಂಧಿ ಬದಲಿಗೆ ರಾಹುಲ್‌ ಗಾಂಧಿಯಂತಹ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಎಡವಟ್ಟು

ಈ ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ಕಾಂಗ್ರೆಸ್‌ ನಾಯಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರಾಜೀವ್ ಗಾಂಧಿ ಅವರನ್ನು ಉಲ್ಲೇಖಿಸುವ ಭರದಲ್ಲಿ ರಾಹುಲ್ ಗಾಂಧಿ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜೀವ್ ಗಾಂಧಿ ಅವರನ್ನು ಉಲ್ಲೇಖಿಸುವಾಗ ಅಚಾತುರ್ಯದಿಂದ ರಾಹುಲ್ ಗಾಂಧಿ ಎಂದು ಹೆಸರಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ಲೇವಡಿ ಮಾಡಿದೆ.
ರಾಜಸ್ಥಾನದ ಅನುಪಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ತಪ್ಪಾಗಿ ಹೇಳುವ ಮೂಲಕ ಯಡವಟ್ಟು ಮಾಡಿದ್ದಾರೆ.

ವೇದಿಕೆಯಲ್ಲಿದ್ದವರಿಂದ ಆದ ಅಚಾತುರ್ಯದ ಬಗ್ಗೆ ಎಚ್ಚರಿಸಿದ ನಂತರ, ಖರ್ಗೆ ಅವರು ರಾಜೀವ್ ಗಾಂಧಿಯನ್ನು ಉಲ್ಲೇಖಿಸಲು ಉದ್ದೇಶಿಸಿರುವುದಾಗಿ ಹೇಳಿದರು. ಹಾಗೂ ಅಚಾತುರ್ಯಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.
“ನಾನು ಕ್ಷಮೆಯಾಚಿಸುತ್ತೇನೆ. ನಾನು ತಪ್ಪಾಗಿ ರಾಹುಲ್ ಗಾಂಧಿ ಎಂದು ಹೇಳಿಬಿಟ್ಟೆ …ರಾಷ್ಟ್ರದ ಏಕತೆಗಾಗಿ ರಾಜೀವ ಗಾಂಧಿ ಪ್ರಾಣ ಕೊಟ್ಟಿದ್ದಾರೆ. ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಆದಾಗ್ಯೂ, ಬಿಜೆಪಿಯು ಕಾಂಗ್ರೆಸ್ ಅಧ್ಯಕ್ಷರ ಅಚಾತುರ್ಯದ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಖರ್ಗೆಯವರ ಕ್ಲಿಪ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದೆ.  ಖರ್ಗೆ ಅವರ ಈ ಹೇಳಿಕೆ ಬಿಜೆಪಿ ನಾಯಕರು ಲೇವಡಿ  ಮಾಡಿದ್ದಾರೆ.  ರಾಜಸ್ಥಾನದ 200 ಸದಸ್ಯರ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಿಗದಿಯಾಗಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.  ಇದಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಯಲ್ಲಿ ಪ್ರಚಾರದಲ್ಲಿ ಧುಮಿಕಿದ್ದಾರೆ.

ಪ್ರಮುಖ ಸುದ್ದಿ :-   ಉನ್ನತ ನಾಯಕರು ಸಭೆಯಿಂದ ಹೊರಗುಳಿಯಲು ನಿರ್ಧರಿಸಿದ ನಂತರ ನಾಳೆ ನಡೆಯಬೇಕಿದ್ದ ಇಂಡಿಯಾ ಮೈತ್ರಿಕೂಟದ ಸಭೆ ಮುಂದಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement