ಪ್ರಧಾನಿ ಮೋದಿ ವಿರುದ್ಧ ʼಅಪಶಕುನʼ ಟೀಕೆ : ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ‘ಪನೌತಿ’ (ಅಪಶಕುನ) ಮತ್ತು ʼಜೇಬುಗಳ್ಳʼ ಟೀಕೆಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್ ನೀಡಿದೆ.
ವಯನಾಡ್ ಸಂಸದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಚುನಾವಣಾ ಸಂಸ್ಥೆಗೆ ದೂರು ನೀಡಿದ ಒಂದು ದಿನದ ನಂತರ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.
ಚುನಾವಣಾ ಆಯೋಗವು ಶನಿವಾರ ಸಂಜೆ 6 ಗಂಟೆಯೊಳಗೆ ಉತ್ತರವನ್ನು ನೀಡುವಂತೆ ರಾಹುಲ್ ಗಾಂಧಿಗೆ ಸೂಚಿಸಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿದೆ.
ಈ ವಾರದ ಆರಂಭದಲ್ಲಿ ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ, ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರನ್ನು ‘ಪನೌತಿ’ ಎಂದು ಕರೆಯುವ ಮೂಲಕ ಗೇಲಿ ಮಾಡಿದರು ಮತ್ತು ಅವರ ಸ್ಟೇಡಿಯಂ ಪ್ರವೇಶವು ಕಳೆದ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ 2023 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲುವಂತೆ ಮಾಡಿತು ಎಂದು ವ್ಯಂಗ್ಯವಾಡಿದ್ದರು.

ಚುನಾವಣಾ ಆಯೋಗದ ನೋಟಿಸ್‌ನಲ್ಲಿ, “ಪ್ರಧಾನಿಯೊಬ್ಬರನ್ನು ‘ ಪಿಕ್‌ ಪಾಕೆಟರ್‌ʼ ಗೆ ಹೋಲಿಸುವುದು ಮತ್ತು ‘ಕೆಟ್ಟ ಶಕುನ’ ಪದವನ್ನು ಬಳಸುವುದು ರಾಷ್ಟ್ರೀಯ ರಾಜಕೀಯ ಪಕ್ಷದ ಅತ್ಯಂತ ಹಿರಿಯ ನಾಯಕನಿಗೆ ತಕ್ಕುದಲ್ಲ ಎಂದು ಆರೋಪಿಸಲಾಗಿದೆ.
ಚುನಾವಣಾ ಸಂಸ್ಥೆಯು ಹಿಂದಿನ ಸಾಮಾನ್ಯ ಸಲಹೆಯನ್ನು ಉಲ್ಲೇಖಿಸಿದೆ, ಇದರಲ್ಲಿ “ಪ್ರಚಾರದ ಅವಧಿಯಲ್ಲಿ ರಾಜಕೀಯ ಭಾಷಣದ ಮಟ್ಟ ಕುಸಿತವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಮಾದರಿ ನೀತಿ ಸಂಹಿತೆ ಮಿತಿಯಲ್ಲಿ ಮತ್ತು ಸಾರ್ವಜನಿಕ ಭಾಷಣದಲ್ಲಿ ನಿರೀಕ್ಷಿತ ಸಭ್ಯತೆಯಂತೆ ಕಾರ್ಯನಿರ್ವಹಿಸಲು ಎಲ್ಲರಿಗೂ ಅದು ಸಲಹೆ ನೀಡಿದೆ. ನೋಟಿಸ್‌ನಲ್ಲಿ ಮಾದರಿ ನೀತಿ ಸಂಹಿತೆ ಮತ್ತು ವಾಕ್ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

ಮಂಗಳವಾರ, ರಾಜಸ್ಥಾನದ ಜಾಲೋರ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ, “ಅಚೇ ಭಲೇ ಹಮಾರೆ ಲಡ್ಕೆ ವಹಾ ಪೆ ವಿಶ್ವಕಪ್ ಜೀತ್ ಜಾತೆ, ಪರ್ ಪನೌತಿ ಹರ್ವಾ ದಿಯಾ (ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಗೆಲ್ಲುತ್ತಿದ್ದರು, ಆದರೆ ‘ಕೆಟ್ಟ ಶಕುನ’ ಅವರನ್ನು ಸೋಲುವಂತೆ ಮಾಡಿತು).”
ರಾಹುಲ್ ಗಾಂಧಿಯವರ ಹೇಳಿಕೆಗಳು “ನಾಚಿಕೆಗೇಡಿನ ಮತ್ತು ಅವಮಾನಕರ” ಎಂದು ಹೇಳಿದ ಬಿಜೆಪಿ ಮತ್ತು ಕ್ಷಮೆಯಾಚನೆಗೆ ಒತ್ತಾಯಿಸಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement