ಸಂಬಳ ಕೇಳಿದ್ದಕ್ಕೆ ದಲಿತ ಯುವಕನ ಬಾಯಿಗೆ ಚಪ್ಪಲಿ ತುರುಕಿದ ಮಹಿಳೆ…..!

ಮೊರ್ಬಿ (ಗುಜರಾತ್) : ತನ್ನ ಕಂಪನಿಯಲ್ಲಿ ಹದಿನೈದು ದಿನಗಳ ಕಾಲ ಕೆಲಸ ಮಾಡುತ್ತಿದ್ದ 21 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉದ್ಯಮಿ ಮತ್ತು ಇತರ ಆರು ಮಂದಿಯ ವಿರುದ್ಧ ಗುಜರಾತ್‌ನ ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಬಳ ನೀಡಲು ಒತ್ತಾಯಿಸಿದ್ದಕ್ಕಾಗಿ ಆತನ ಬಾಯಲ್ಲಿ ಚಪ್ಪಲಿ ತುರುಕಿದ ಮಹಿಳೆ ನಂತರ ಕ್ಷಮೆಯಾಚಿಸಲು ಒತ್ತಾಯಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಘಟನೆ ಬುಧವಾರ ನಡೆದಿದೆ ಎಂದು ಅವರು ಹೇಳಿದ್ದಾರೆ.
ಯುವಕ ನಿಲೇಶ್ ದಲ್ಸಾನಿಯಾ ಎಂಬವರು ದೂರು ನೀಡಿದ್ದು, ಅದರ ಆಧಾರದ ಮೇಲೆ ಮೊರ್ಬಿ ನಗರದ ‘ಎ’ ವಿಭಾಗದ ಪೊಲೀಸರು ಗುರುವಾರ ಮಹಿಳೆ ವಿಭೂತಿ ಪಟೇಲ್ ಅಕಾ ರಾಣಿಬಾ ಮತ್ತು ಆಕೆಯ ಸಹೋದರ ಓಂ ಪಟೇಲ್ ಮತ್ತು ಮ್ಯಾನೇಜರ್ ಪರೀಕ್ಷಿತ್ ಸೇರಿದಂತೆ ಇತರರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಠಾಣೆಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಸಿ/ಎಸ್‌ಟಿ ಸೆಲ್) ಪ್ರತಿಪಾಲ್‌ ಸಿನ್ಹ್ ಝಾಲಾ ತಿಳಿಸಿದ್ದಾರೆ.

ವಿಭೂತಿ ಪಟೇಲ್ ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕಳಾಗಿದ್ದಾಲೆ, ಇದು ರಾವಾಪರ್ ಕ್ರಾಸ್‌ರೋಡ್‌ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕಚೇರಿಯನ್ನು ಹೊಂದಿದೆ. ಅಕ್ಟೋಬರ್ ಆರಂಭದಲ್ಲಿ, ಟೈಲ್ಸ್ ಮಾರ್ಕೆಟಿಂಗ್‌ ಕೆಲಸಕ್ಕೆ ದಲ್ಸಾನಿಯಾ ಅವರನ್ನು ₹ 12,000 ಮಾಸಿಕ ಸಂಬಳದಲ್ಲಿ ನೇಮಿಸಿಕೊಳ್ಳಲಾಗಿತ್ತು ಎಂದು ಎಫ್‌ಐಆರ್ ಹೇಳಿದೆ.
ಆದಾಗ್ಯೂ, ಅಕ್ಟೋಬರ್ 18 ರಂದು, ಅವಳು ಇದ್ದಕ್ಕಿದ್ದಂತೆ ಆತನನ್ನು ಕೆಲಸದಿಂದ ವಜಾಗೊಳಿಸಿದಳು. ದಲ್ಸಾನಿಯಾ ಕಂಪನಿಯಲ್ಲಿ ಕೆಲಸ ಮಾಡಿದ್ದ 16 ದಿನಗಳ ಸಂಬಳವನ್ನು ಕೇಳಿದಾಗ, ಪಟೇಲ್ ಸ್ಪಷ್ಟ ಉತ್ತರವನ್ನು ನೀಡಲಿಲ್ಲ ಮತ್ತು ನಂತರ ಆತನ ಕರೆಗಳಿಗೆ ಉತ್ತರವನ್ನು ನಿಲ್ಲಿಸಿದ್ದಳು ಎಂದು ಅದು ಹೇಳಿದೆ.
ದಲ್ಸಾನಿಯಾ, ಆತನ ಸಹೋದರ ಮೆಹುಲ್ ಮತ್ತು ನೆರೆಹೊರೆಯವರಾದ ಭಾವೇಶ್ ಅವರು ಬುಧವಾರ ಸಂಜೆ ವಿಭೂತಿ ಪಟೇಲ್ ಕಚೇರಿಗೆ ಹೋದಾಗ, ಉದ್ಯಮಿಯ ಸಹೋದರ ಓಂ ಪಟೇಲ್ ತನ್ನ ಸಹಚರರೊಂದಿಗೆ ಸ್ಥಳಕ್ಕೆ ತಲುಪಿ ಮೂವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಝಾಲಾ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

ವಿಭೂತಿ ಪಟೇಲ್ ಕಪಾಳಮೋಕ್ಷ ಮಾಡಿ ವಾಣಿಜ್ಯ ಸಂಕೀರ್ಣದ ಟೆರೇಸ್‌ಗೆ ಎಳೆದೊಯದ್ದರು, ನಂತರ ಪರೀಕ್ಷಿತ್ ಪಟೇಲ್, ಓಂ ಪಟೇಲ್ ಮತ್ತು ಇತರ ಆರರಿಂದ ಏಳು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಆರೋಪಿಗಳು ಆತನನ್ನು ಬೆಲ್ಟ್‌ಗಳಿಂದ ಹೊಡೆದರು ಮತ್ತು ಒದ್ದರು ಮತ್ತು ಗುದ್ದಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಭೂತಿ ಪಟೇಲ್ ತನ್ನ ಪಾದರಕ್ಷೆಗಳನ್ನು ಬಾಯಿಯಲ್ಲಿ ತೂರಲು ಪ್ರಯತ್ನಿಸಿದಳು ಮತ್ತು ಸಂಬಳಕ್ಕಾಗಿ ಒತ್ತಾಯಿಸಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಬಲವಂತ ಮಾಡಿದಳು. ರಾವಪರ್ ಕ್ರಾಸ್‌ರೋಡ್ ಪ್ರದೇಶದಲ್ಲಿ ಮತ್ತೆ ಕಂಡರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ. ವಿಭೂತಿ ಕಚೇರಿಗೆ ಹಣ ವಸೂಲಿ ಮಾಡಲು ಬಂದಿದ್ದೇನೆ ಎಂಬ ರೀತಿಯಲ್ಲಿ ವೀಡಿಯೋ ಚಿತ್ರೀಕರಿಸಿ ಬಲವಂತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವೀಡಿಯೋವೊಂದರಲ್ಲಿ ಆರೋಪಿಗಳು ದಲಿತ ಪುರುಷನಿಗೆ ತನ್ನ ಸಂಬಳಕ್ಕಾಗಿ ಮಹಿಳಾ ಉದ್ಯೋಗದಾತರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿರುವುದನ್ನು ಕಾಣಬಹುದು. ಮನೆಗೆ ಹಿಂದಿರುಗಿದ ನಂತರ, ದಲಿತ ವ್ಯಕ್ತಿಯನ್ನು ಮೋರ್ಬಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಎಲ್ಲಾ ಆರೋಪಿಗಳ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ, ಗಲಭೆ ಮತ್ತು ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಝಾಲಾ ಹೇಳಿದರು. ಪ್ರಕರಣದ ತನಿಖೆ ನಡೆಯುತ್ತಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟರ್ಕಿಶ್ ಡ್ರೋನ್‌ ಸೇರಿದಂತೆ ಪಾಕಿಸ್ತಾನದ 400 ಡ್ರೋನ್ ಗಳನ್ನು ಉಡೀಸ್ ಮಾಡಿದ ಭಾರತದ ಸೇನೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement