ರಾಷ್ಟ್ರದ ಗಮನ ಸೆಳೆದ 2018 ರಲ್ಲಿ ನಡೆದ ಟಿಂಡರ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ 28 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ಜೈಪುರ ನ್ಯಾಯಾಲಯವು ಮೂವರಿಗೆ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೆಷನ್ಸ್ ನ್ಯಾಯಾಧೀಶ ಅಜಿತಕುಮಾರ ಹಿಂಗರ್ ಅವರು ತಮ್ಮ ತೀರ್ಪಿನಲ್ಲಿ, ಪ್ರಾಸಿಕ್ಯೂಷನ್ ಸಾಕ್ಷ್ಯವು ಕೊಲೆಗೆ ಮೂವರು ಕಾರಣವೆಂದು ನಿರ್ಣಾಯಕವಾಗಿ ಸಾಬೀತುಪಡಿಸಿದೆ ಎಂದು ಹೇಳಿದರು. 28 ವರ್ಷದ ದುಶ್ಯಂತ್ ಶರ್ಮಾ ಅವರು 27 ವರ್ಷದ ಪ್ರಿಯಾ ಸೇಠ್ ಅವರನ್ನು ಟಿಂಡರ್‌ನಲ್ಲಿ ಪರಿಚಯವಾದ ನಂತರ ನಡೆದ ಕೊಲೆ ಪ್ರಕರಣ ಇದಾಗಿದ್ದು, ಐದು ವರ್ಷಗಳ ನಂತರ ತೀರ್ಪು ಪ್ರಕಟವಾಗಿದ್ದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ…
28ರ ಹರೆಯದ ದುಶ್ಯಂತ ಶರ್ಮಾ ಅವರು ಟಿಂಡರ್ ಆ್ಯಪ್‌ನಲ್ಲಿ ಪ್ರಿಯಾ ಸೇಠ್ ಅವರೊಂದಿಗೆ ಮದುವೆ ಪ್ರಸ್ತಾಪ ಮಾಡಿದಾಗ ಸ್ವರ್ಗಕ್ಕೆ ಹತ್ತಿದ್ದಲ್ಲಿದ್ದರು. ಮತ್ತು ಇಬ್ಬರೂ ಒಂದೇ ರೀತಿಯ ಆಸಕ್ತಿಯನ್ನು ಹೊಂದಿದ್ದರು. 3 ತಿಂಗಳ ಕಾಲ ಆ್ಯಪ್‌ನಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡ ನಂತರ, ಇಬ್ಬರೂ ಮುಖತಃ ಭೇಟಿಯಾಗಲು ನಿರ್ಧರಿಸಿದರು. ದುಶ್ಯಂತ ಶರ್ಮಾನನ್ನು 27 ವರ್ಷ ವಯಸ್ಸಿನ ಪ್ರಿಯಾ ಸೇಠ್ ತನ್ನ ಬಾಡಿಗೆ ಮನೆಗೆ ಆಹ್ವಾನಿಸಿದಳು. ಈ ಪ್ರಸ್ತಾಪವನ್ನು ದುಶ್ಯಂತ್ ತಕ್ಷಣವೇ ಒಪ್ಪಿಕೊಂಡ.
ಆದರೆ ಫೆಬ್ರವರಿ 2018 ರಲ್ಲಿ ಪ್ರಾರಂಭವಾದ ಸಂಬಂಧವು ಎರಡು ಸುಳ್ಳಿನ ಮೇಲೆ ಬೆಳೆದಿತ್ತು. ಮತ್ತು ವಿವಾಹಿತನಾಗಿದ್ದ ದುಶ್ಯಂತ ದೆಹಲಿಯ ಶ್ರೀಮಂತ ಉದ್ಯಮಿ ಎಂದು ಟಿಂಡರ್ ಆ್ಯಪ್‌ನಲ್ಲಿ ವಿವಾನ್ ಕೊಹ್ಲಿ ಎಂಬ ನಕಲಿ ಹೆಸರಿನೊಂದಿಗೆ ಬಿಂಬಿಸಿಕೊಂಡಿದ್ದ. ಮತ್ತೊಂದೆಡೆ ಪ್ರಿಯಾ, ದುಶ್ಯಂತ್‌ನನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಮಾತ್ರ ಪರಿಚಯ ಮಾಡಿಕೊಂಡು ಹತ್ತಿರವಾದಂತೆ ನಟಿಸಿದ್ದಳು.
ದುಶ್ಯಂತ ಮನೆಗೆ ಕಾಲಿಟ್ಟ ತಕ್ಷಣವೇ ಇಬ್ಬರು ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಎಂಬವರ ಸಹಾಯದಿಂದ ಪ್ರಿಯಾ ಆತನನ್ನು ಅಪಹರಿಸಿದ್ದಾಳೆ.
ಬಿಡುಗಡೆಗಾಗಿ ₹ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ದುಷ್ಯಂತ ಮನೆಗೆ ಕರೆ ಮಾಡಿದಾಗ ‘ದೆಹಲಿ ಉದ್ಯಮಿ’ ಎಂದು ಹೇಳಿಕೊಂಡಿದ್ದ ದುಶ್ಯಂತ ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ ಎಂದು ಅಪಹರಣಕಾರರು ಅರಿತುಕೊಂಡರು. ದುಶ್ಯಂತ ಕುಟುಂಬವು ₹ 10 ಲಕ್ಷ ನೀಡಲು ವಿಫಲವಾದ ನಂತರ, ಆರೋಪಿಗಳು ಅನೇಕ ಬಾರಿ ಚೂರಿಯಿಂದ ಇರಿದು ಮತ್ತು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
“ನಮಗೆ ನನ್ನ ಮಗನ ಫೋನ್‌ನಿಂದ ಕರೆ ಬಂದಿತು, ಮತ್ತು ‘ಪಾಪಾ, ಅವರು ನನ್ನನ್ನು ಕೊಲ್ಲುತ್ತಾರೆ, ದಯವಿಟ್ಟು ಅವರಿಗೆ ₹ 10 ಲಕ್ಷ ನೀಡಿ ಮತ್ತು ನನ್ನನ್ನು ಉಳಿಸಿ” ಎಂದು ದುಶ್ಯಂತ ಕರೆ ಮಾಡಿದ್ದ ಎಂದು ತಂದೆ ರಾಮೇಶ್ವರಪ್ರಸಾದ ಶರ್ಮಾ ಅವರು ಸಾಮಾಜಿಕ ಕಾರ್ಯಕರ್ತ ದೀಪಿಕಾ ನಾರಾಯಣ ಭಾರದ್ವಾಜ ಅವರೊಂದಿಗೆ ಸಂದರ್ಶನವೊಂದರಲ್ಲಿ ಹೇಳಿದರು.
“ಆಗ ಪ್ರಿಯಾ ಆತನಿಂದ ಫೋನ್ ಕಸಿದುಕೊಂಡು ನನ್ನನ್ನು ನಿಂದಿಸಲು ಪ್ರಾರಂಭಿಸಿದಳು. ದುಷ್ಯಂತ್ ಖಾತೆಗೆ ₹ 10 ಲಕ್ಷ ಹಾಕುವಂತೆ ಕೇಳಿದಳು. ನನ್ನ ಬಳಿ ಅಷ್ಟು ಹಣವಿಲ್ಲ, ಆದರೆ ಸಂಜೆ 4 ಗಂಟೆಯೊಳಗೆ ₹ 3 ಲಕ್ಷ ವ್ಯವಸ್ಥೆ ಮಾಡಬಹುದೆಂದು ನಾನು ಅವಳಿಗೆ ಹೇಳಿದೆ” ಎಂದು ಅವರು ಹೇಳಿದರು.
ದುಶ್ಯಂತ ಡೆಬಿಟ್ ಕಾರ್ಡ್ ವಶಪಡಿಸಿಕೊಂಡ ಸೇಠ್ ಅದರ ಪಿನ್ ತನಗೆ ಕಳುಹಿಸುವಂತೆ ಒತ್ತಾಯಿಸಿದ್ದಳು. ತಂದೆ ₹ 3 ಲಕ್ಷ ಠೇವಣಿ ಇಟ್ಟ ನಂತರ ₹ 20,000 ಡ್ರಾ ಮಾಡಲು ಕಾರ್ಡ್ ಬಳಸಿದ್ದರು. ತಮ್ಮ ಅಪರಾಧ ಬೆಳಕಿಗೆ ಬರಬಹುದೆಂಬ ಭಯದಿಂದ ಮೂವರು ಆರೋಪಿಗಳು ದುಷ್ಯಂತನನ್ನು ಕೊಂದಿದ್ದಾರೆ ಎಂದು ಅವರು ಹೇಳಿದರು.
ಆತನ ದೇಹವು ಮೇ 4, 2018 ರಂದು ಜೈಪುರದ ಹೊರಗಿನ ಹಳ್ಳಿಯಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿಕೊಂಡಿತ್ತು.
ಅಪರಾಧಿ ಎಂದು ಸಾಬೀತಾದ ನಂತರ ಪ್ರಿಯಾ ಸೇಠ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಪರಾಧದ ಹಿಂದಿನ ಉದ್ದೇಶದ ಬಗ್ಗೆ ಹೇಳಿದ ಅವಳು, “ಅವನು ನನಗೆ ತನ್ನ ನಿಜವಾದ ಹೆಸರನ್ನೂ ಹೇಳಲಿಲ್ಲ, ಆತ ತಾನು ತುಂಬಾ ಶ್ರೀಮಂತ ಎಂದು ಹೇಳಿದ್ದಾನೆ, ನಾನು ದೀಕ್ಷಾಂತ ಜೊತೆ ಲಿವ್-ಇನ್ ಸಂಬಂಧ ಹೊಂದಿದ್ದೇನೆ ಮತ್ತು ಅವನಿಗೆ ₹ 21 ಲಕ್ಷ ಸಾಲವಿದೆ. ಆತ ಆ ಹಣವನ್ನು ಯಾರಿಂದಾದರೂ ಸಂಪಾದಿಸಲು ದಾರಿ ಹುಡುಕುತ್ತಿದ್ದೆವು. ಆದ್ದರಿಂದ ನಾವು ಯಾರನ್ನಾದರೂ ಅಪಹರಿಸಲು, ಸುಲಿಗೆ ಮಾಡಲು ಮತ್ತು ವ್ಯಕ್ತಿಯನ್ನು ಕೊಲ್ಲಲು ಒಟ್ಟಾಗಿ ಈ ಯೋಜನೆಯನ್ನು ಮಾಡಿದೆವು ಎಂದು ಹೇಳಿದ್ದಾಳೆ.
ದುಶ್ಯಂತ ಅವರ ತಂದೆ ಹಣ ವರ್ಗಾವಣೆ ಮಾಡಿದರೂ ಅವರನ್ನು ಏಕೆ ಕೊಂದಿದ್ದೀರಿ ಎಂದು ಕೇಳಿದಾಗ, “ಹಣ ಬರುವ ಮೊದಲೇ ನಾವು ಅವನನ್ನು ಕೊಂದಿದ್ದೇವೆ. ಮೊದಲು ನಾವು ಅವನನ್ನು ಕತ್ತು ಹಿಸುಕಲು ಪ್ರಯತ್ನಿಸಿದೆವು, ನಂತರ ತಲೆದಿಂಬಿನಿಂದ ಮುಖಮುಚ್ಚಿ ಕೊಚ್ಚಿ ಹಾಕಿದೆವು, ಆದರೆ ಅವನು ಪ್ರಾಣಾಪಾಯದಿಂದ ಪಾರಾಗಿದ್ದ. ನಂತರ ದೀಕ್ಷಾಂತ ಚಾಕು ತರಲು ಹೇಳಿದ. ನಂತರ ಅದನ್ನು ಬಳಸಿ ಆತನ ಕತ್ತು ಸೀಳಿ ಕೊಲ್ಲಲಾಯಿತು ಎಂದು ಹೇಳಿದ್ದಾಳೆ.
ದುಶ್ಯಂತ ಶರ್ಮಾ ಹತ್ಯೆಯ ಮೂವರು ಆರೋಪಿಗಳಿಗೆ ಜೈಪುರ ನ್ಯಾಯಾಲಯ ಶುಕ್ರವಾರ (ನವೆಂಬರ್ ೨೪) ಜೀವಾವಧಿ ಶಿಕ್ಷೆ ವಿಧಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ