ಅಥಣಿ : ವಿದ್ಯುತ್ ಸ್ಪರ್ಶಿಸಿ ತಂದೆ-ಮಗ ಸಾವು

ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ಚಿಕ್ಕಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಪಂಪ್ ಸೆಟ್ ಬಂದ್ ಮಾಡಲು ತೆರಳಿದ್ದ ತಂದೆ-ಮಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32 )ಮತ್ತು ಅವರ ಪುತ್ರ ಪ್ರೀತಂ ಮಲ್ಲಿಕಾರ್ಜುನ ಪೂಜಾರಿ (6) ಎಂದು ಗುರುತಿಸಲಾಗಿದೆ. ಪ್ರೀತಂ ಅಥಣಿಯ ಶಾರದಾ ಮಾತಾ ವಿದ್ಯಾಲಯದ ಒಂದನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಅವರು ಜಮೀನಿನಲ್ಲಿ ಪಂಪ್ ಸೆಟ್ ಬಂದ್ ಮಾಡಲು ತೆರಳಿದಾಗ ರಸ್ತೆ ಮಧ್ಯೆ ಕೇಬಲ್ ಕಟ್ಟಾಗಿ ಬಿದ್ದಿತ್ತು. ಸ್ಥಳದಲ್ಲಿ ತೇವಾಂಶ ಇದ್ದ ಕಾರಣ ಅವರಿಗೆ ವಿದ್ಯುತ್ ಸ್ಪರ್ಶಗೊಂಡಿದೆ ಎಂದು ಹೇಳಲಾಗಿದೆ. ಮೊದಲು ತಂದೆ ವಿದ್ಯುತ್‌ ಸ್ಪರ್ಷ ಮಾಡಿದ್ದಾರೆ. ಮಗ ರಕ್ಷಣೆಗೆ ಬಂದಾಗ ಆತನಿಗೂ ವಿದ್ಯುತ್ ಪ್ರವಹಿಸಿದ್ದು, ಇದರಿಂದ ಸ್ಥಳದಲ್ಲಿ ತಂದೆ-ಮಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಥಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement