ಆಸ್ಟ್ರೇಲಿಯಾದ ಸೆನೆಟ್ ಗೆ ಭಾರತೀಯ ಮೂಲದ ದೇವ ಶರ್ಮಾ ಆಯ್ಕೆ

ಮೆಲ್ಬರ್ನ್‌ : 2019ರಲ್ಲಿ ಆಸ್ಟ್ರೇಲಿಯಾದ ಸಂಸತ್ತಿಗೆ ಆಯ್ಕೆಯಾಗಿದ್ದ ಮೊದಲ ಭಾರತೀಯ ಮೂಲದ ಸಂಸದ ದೇವ ಶರ್ಮಾ ಅವರು ನ್ಯೂ ಸೌತ್ ವೇಲ್ಸ್ ಲಿಬರಲ್ ಸೆನೆಟ್ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ರಾಜಕೀಯಕ್ಕೆ ಮರಳಲಿದ್ದಾರೆ.
47 ವರ್ಷದ ದೇವ ಶರ್ಮಾ ಅವರು ಸೆನೆಟ್‌ನಿಂದ ನಿವೃತ್ತರಾದ ಮಾಜಿ ವಿದೇಶಾಂಗ ಸಚಿವ ಮಾರಿಸ್ ಪೇನ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
2022 ರ ಚುನಾವಣೆಯಲ್ಲಿ ಸೋಲಿನ ತನಕ ಸಿಡ್ನಿ ಸೀಟ್ ಆಫ್ ವೆಂಟ್‌ವರ್ತ್ ಕ್ಷೇತ್ರ ಪ್ರತಿನಿಧಿಸಿದ್ದ ಶರ್ಮಾ, ಮಾಜಿ ನ್ಯೂ ಸೌತ್ ವೇಲ್ಸ್ (NSW) ಸಚಿವ ಆಂಡ್ರ್ಯೂ ಕಾನ್‌ಸ್ಟನ್ಸ್ ಅವರನ್ನು ಸೋಲಿಸಿದರು.ನ್ಯೂ ಸೌತ್ ವೇಲ್ಸ್ ಲಿಬರಲ್ ಪಕ್ಷದ ಸದಸ್ಯರು ನಡೆಸಿದ ಮತದಲ್ಲಿ ಶರ್ಮಾ ಅವರು ಭಾನುವಾರದ ಅಂತಿಮ ಮತದಾನದಲ್ಲಿ ಕಾನ್ಸ್ಟನ್ಸ್ ಅವರನ್ನು 251-206 ಮತಗಳಿಂದ ಸೋಲಿಸಿದರು ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.

ಶರ್ಮಾ ಅವರು, 2013 ರಿಂದ 2017 ರವರೆಗೆ ಇಸ್ರೇಲ್‌ಗೆ ಆಸ್ಟ್ರೇಲಿಯಾದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಎನ್‌ಎಸ್‌ಡಬ್ಲ್ಯೂ ಸೆನೆಟ್ ಸ್ಥಾನವನ್ನು ಪಡೆದುಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿರುವ ವಿಪಕ್ಷ ನಾಯಕ ಡಟ್ಟನ್, ಶರ್ಮಾ ಅವರ ಸೆನೆಟ್‌ನ ಪ್ರವೇಶವು ನಿರ್ಣಾಯಕ ಸಮಯದಲ್ಲಿ ಬಂದಿದೆ ಎಂದು ಹೇಳಿದರು.
ಶರ್ಮಾ ಪೇನ್‌ಗೆ “ಸರಿಹೊಂದಿದ ಬದಲಿ” ಎಂದು ಪ್ರತಿಪಾದಿಸಿದ ಉಪ ವಿರೋಧ ಪಕ್ಷದ ನಾಯಕ ಸುಸಾನ್ ಲೇ, “ದೇವ ಶರ್ಮಾ ಆಸ್ಟ್ರೇಲಿಯಾದ ಸೆನೆಟ್‌ಗೆ ವಿಶಿಷ್ಟ ದೃಷ್ಟಿಕೋನವನ್ನು ತರುತ್ತಾರೆ” ಎಂದು ಹೇಳಿದರು. 2019 ರಲ್ಲಿ, ಫೆಡರಲ್ ಚುನಾವಣೆಯಲ್ಲಿ ಸಿಡ್ನಿ ಉಪನಗರದಲ್ಲಿ ಗೆದ್ದ ನಂತರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮೊದಲ ಭಾರತೀಯ ಮೂಲದ ಸಂಸದರಾಗುವ ಮೂಲಕ ಶರ್ಮಾ ಇತಿಹಾಸವನ್ನು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement