ಕುಮಟಾ: ಮಹಿಳೆ ಸಮುದ್ರಕ್ಕೆ ಹಾರಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ; ಮಹಿಳೆ ಪತ್ತೆ ಹಚ್ಚಿದ ಪೊಲೀಸರು, ಸಾವಿನ ನಾಟಕವಾಡಿದ್ದು ಬಯಲಾಯ್ತು…!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕುಮಟಾದ ಹೆಡ್‌ಬಂದರಿನಲ್ಲಿ ಸಮುದ್ರಕ್ಕೆ ಹಾರಿದ್ದಳು ಎಂಬ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ತನ್ನ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ್ದ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾಳೆ ಎಂದು ವರದಿಯಾಗಿದೆ. ನಿವೇದಿತಾ ನಾಗರಾಜ ಭಂಡಾರಿ  ಸಮುದ್ರಕ್ಕೆ ಹಾರಿಲ್ಲ, ಆಕೆ ಮಾಡಿದ್ದು ನಾಟಕ ಎಂಬುದು ಈಗ ಬಯಲಾಗಿದೆ.
ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನು ಪಿಕ್‌ ಅಪ್‌ ಬಸ್ ನಿಲ್ದಾಣದಲ್ಲಿ ಬಿಟ್ಟು, ಕುಮಟಾದ ಹೆಡ್‌ಬಂದರ್ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ತಾನು ಸಮುದ್ರಕ್ಕೆ ಹಾರಿದಂತೆ ಬಿಂಬಿಸಿಕೊಂಡಿದ್ದಳು. ಆಕೆ ವೇಲ್‌ ಸಮುದ್ರದಲ್ಲಿ ತೇಲುತ್ತಿತ್ತು. ಹೀಗಾಗಿ ಅವಳು ಸಮುದ್ರಕ್ಕೆ ಹಾರಿದ್ದಾಳೆ ಎಂದು ಭಾವಿಸಲಾಗಿತ್ತು.

ಸಮುದ್ರದಲ್ಲಿ ಆಕೆಯ ವೇಲ್ ಬಿದ್ದು ತೇಲುತ್ತಿದ್ದುದ್ದನ್ನು ಕಂಡು ಲೈಫ್ ಗಾರ್ಡಗಳು, ಪೊಲೀಸರು ಸಮುದ್ರದಲ್ಲಿ ದಿನಗಟ್ಟಲೆ ಅವಳಿಗಾಗಿ ಜಾಲಾಡಿದ್ದಾರೆ. ಆದರೆ ಸಿಕ್ಕಿರಲಿಲ್ಲ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡ ಪಿಎಸ್‌ಐ ನವೀನ್ ನೇತೃತ್ವದ ತಂಡ ಸಮುದ್ರ ಜಾಲಾಡಿದ ನಂತರ ಸಮುದ್ರಕ್ಕೆ ಹಾರಿದ ಬಗ್ಗೆ ಯಾವುದೇ ಕುರುಹು ಸಿಗದಿದ್ದಾಗ ಬೇರೆ ರೀತಿಯಲ್ಲೂ ತನಿಖೆ ಕೈಗೊಂಡಿದ್ದರು.
ಆಕೆಗೆ ಬೇರೆ ಯಾರ ಜೊತೆ ಆದ್ರೂ ಸಂಪರ್ಕ ಇದೇಯಾ ಅಂತ ಪೊಲೀಸರು ಜಾಲಾಡಿದ್ದಾರೆ. ಆಗ ಆಟೋ ಒಂದನ್ನು ಕುಮಟಾ ಹೆಡ್ ಬಂದರ್‌ ಬಳಿ ತಂದು ನಿಲ್ಲಿಸಿಕೊಂಡಿದ್ದು ಗೊತ್ತಾಗಿದೆ.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಭೇದಿಸಿದ್ದು, ತನಿಖೆ ನಡೆಸಿದಾಗ ನಿವೇದಿತಾ ಭಂಡಾರಿ ಮನೆಯವರ ದಿಕ್ಕು ತಪ್ಪಿಸಲು ಆತ್ಮಹತ್ಯೆ ನಾಟಕವಾಡಿ ಆಟೋ ಹತ್ತಿ ಹೊನ್ನಾವರಕ್ಕೆ ಪರಾರಿಯಾಗಿ ಅಲ್ಲಿನ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಇದೀಗ ಆಕೆಯನ್ನು ಪೊಲೀಸರು ಕರೆತಂದಿದ್ದಾರೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪಿ.ಎಸ್.ಐ ನವೀನ್ ನೇತೃತ್ವದ ತಂಡ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯವರಿಗೆ ಪಾಠ ಕಲಿಸುವ ಉದ್ದೇಶದಿಂದ ಅವರು ಈ ರೀತಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement