ಮನಕಲಕುವ ಘಟನೆ….: ತಾಯಿಯ ಶವದ ಜೊತೆ 1 ವರ್ಷದಿಂದ ವಾಸಿಸುತ್ತಿದ್ದ ಅಕ್ಕ-ತಂಗಿ…!

ವಾರಾಣಸಿ : ವಾರಾಣಸಿಯ ಲಂಕಾ ಪೊಲೀಸ್ ಠಾಣೆ ವ್ಯಾಪ್ತಿಯ ಮದರ್ವಾನ್‌ನಲ್ಲಿ ಬುಧವಾರ ಸಂಜೆ ಇಬ್ಬರು ಮಹಿಳೆಯರು ಮನೆಯೊಳಗೆ ತಮ್ಮ ತಾಯಿಯ ಶವದೊಂದಿಗೆ ವಾಸಿಸುತ್ತಿರುವುದು ಕಂಡುಬಂದಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಉಷಾ ತ್ರಿಪಾಠಿ (52) ಎಂದು ಗುರುತಿಸಲಾದ ಮಹಿಳೆ 2022, ಡಿಸೆಂಬರ್ 8 ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ ಆದರೆ, ಆಕೆಯ ಇಬ್ಬರು ಪುತ್ರಿಯರಾದ ಪಲ್ಲವಿ ಮತ್ತು ವೈಷ್ಣವಿ ಅವರ ಸಾವಿನ ಬಗ್ಗೆ ಯಾರಿಗೂ ತಿಳಿಸಿಲ್ಲ, ಅಂತ್ಯಕ್ರಿಯೆಯನ್ನೂ ಮಾಡಿಲ್ಲ. ಅವರು ದೇಹವನ್ನು ಗಾದಿ ಅಡಿಯಲ್ಲಿ ಮರೆಮಾಡಿದ್ದರು ಎಂದು ವರದಿಯಾಗಿದೆ.
ಕೆಲ ದಿನಗಳಿಂದ ಅಕ್ಕತಂಗಿಯರನ್ನು ಅಕ್ಕಪಕ್ಕದ ಮನೆಯವರು ಕಾಣದಿದ್ದಾಗ ಅವರ ಮನೆ ಬಾಗಿಲು ಮುಚ್ಚಿದ್ದರಿಂದ ಅವರು ಹುಡುಗಿಯ ಸಂಬಂಧಿಕರಿಗೆ ಮಾಹಿತಿ ನೀಡಿದರು. ಆಗ ಮಿರ್ಜಾಪುರದ ಜಮಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಿ ಬಹುವರ ನಿವಾಸಿಗಳಾದ ಮೃತಳ ತಂಗಿ ಮತ್ತು ಆಕೆಯ ಪತಿ ಧರ್ಮೇಂದ್ರ ಚತುರ್ವೇದಿ ಅವರು ಬುಧವಾರ ಮಧ್ಯಾಹ್ನ ಉಷಾ ತ್ರಿಪಾಠಿ ಅವರ ಮನೆಗೆ ಭೇಟಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಧರ್ಮೇಂದ್ರ ಚತುರ್ವೇದಿ ಅವರು ಬಾಗಿಲು ಬಡಿದರು, ಆದರೆ ಇಬ್ಬರು ಹುಡುಗಿಯರು ಬಾಗಿಲು ತೆರೆಯಲು ನಿರಾಕರಿಸಿದರು. ಹಲವಾರು ಪ್ರಯತ್ನಗಳ ನಂತರವೂ ಬಾಗಿಲು ತೆರೆಯದೇ ಇದ್ದಾಗ, ಅವರು ತುರ್ತು ಸಹಾಯವಾಣಿ (ಡಯಲ್ 112) ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡ ಆಗಮಿಸಿ ಬಾಗಿಲು ತೆರೆಯಲು ಹುಡುಗಿಯರನ್ನು ಕೇಳಿದರೂ ಅವರು ಪ್ರತಿರೋಧವನ್ನು ಮುಂದುವರೆಸಿದರು.

ನಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕಾಂತ ಮಿಶ್ರಾ ಅವರು ಹೆಚ್ಚುವರಿ ಪಡೆಗಳೊಂದಿಗೆ ಘಟನಾ ಸ್ಥಳಕ್ಕೆ ತಲುಪಿದರು. ಅವರು ಬಾಗಿಲು ಒಡೆದು, ದೃಶ್ಯವನ್ನು ವೀಡಿಯೊಗ್ರಫಿಯೊಂದಿಗೆ ದಾಖಲಿಸಿದರು ಮತ್ತು ಆಗ ಉಷಾ ತ್ರಿಪಾಠಿಯ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ.
ಇಬ್ಬರೂ ಪುತ್ರಿಯರ ವಿಚಾರಣೆಯ ಸಮಯದಲ್ಲಿ, ತಮ್ಮ ತಾಯಿ 2022 ಡಿಸೆಂಬರ್ 8 ರಂದು ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ. ಹಣಕಾಸಿನ ಅಡಚಣೆಯಿಂದಾಗಿ, ಅಂತ್ಯಕ್ರಿಯೆಯನ್ನು ಭರಿಸಲು ತಮಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಹಿರಿಯ ಮಗಳು ಪಲ್ಲವಿ 27 ವರ್ಷ ಮತ್ತು ಸ್ನಾತಕೋತ್ತರ ಪದವಿ (ಎಂ.ಕಾಂ) ಮಾಡಿದ್ದರೆ, ಕಿರಿಯ ಮಗಳು ವೈಷ್ಣವಿ 18 ವರ್ಷ ವಯಸ್ಸಿನವಳು ಮತ್ತು ಎರಡು ವರ್ಷಗಳ ಹಿಂದೆ ಹೈಸ್ಕೂಲ್ ಪಾಸಾಗಿದ್ದಾಳೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಮಹಿಳೆಯರು ತಮ್ಮ ತಾಯಿಯ ಮರಣದ ನಂತರ, ಮುಂದಿನ ಕೆಲವು ವಾರಗಳವರೆಗೆ ಮನೆಯಲ್ಲಿದ್ದ ಪಡಿತರದಿಂದ ಜೀವನ ನಡೆಸಿದ್ದರು. ಅನೇಕ ಸಂಬಂಧಿಕರು ಅವರಿಗೆ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸಿದ್ದಾರೆ, ಅದರಿಂದ ಅವರು ಅಂಗಡಿಗಳಿಂದ ಧಾನ್ಯಗಳನ್ನು ಖರೀದಿಸಲು ಬಳಸುತ್ತಿದ್ದರು. ಆದಾಗ್ಯೂ, ಅವರು ಯಾರೇ ಆದರೂ ತಮ್ಮನ್ನು ಭೇಟಿಯಾಗುವುದಕ್ಕೆ ಅಥವಾ ತಮ್ಮ ಮನೆಗೆ ಯಾರಾದರೂ ಬರುವುದಕ್ಕೆ ಒಪ್ಪಿಗೆ ನೀಡುತ್ತಿರಲಿಲ್ಲ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

ಕಳೆದ ಕೆಲವು ತಿಂಗಳುಗಳಲ್ಲಿ, ಅಕ್ಕ, ಪಲ್ಲವಿ ಅವರು ವ್ಯವಹಾರವನ್ನು ಪ್ರಾರಂಭಿಸಲು ಇಚ್ಛಿಸಿ ಬ್ಯಾಂಕಿನಿಂದ ಸಾಲವನ್ನು ಪಡೆಯಲು ನೆರೆಹೊರೆಯವರಿಂದ ಅನೇಕ ಬಾರಿ ಸಹಾಯವನ್ನು ಕೋರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇಬ್ಬರು ಸಹೋದರಿಯರು ಬಹುತೇಕ ಮನೆಯೊಳಗೆ ಉಳಿದಿದ್ದರು.
ಅವರ ತಾಯಿಯ ಮರಣದ ನಂತರ, ದೇಹವು ಕೊಳೆಯಲು ಪ್ರಾರಂಭಿಸಿದಾಗ, ಮೃತದೇಹದ ಕೊಳೆತ ವಾಸನೆ ಹರಡದಂತೆ ತಡೆಯಲು ಅವರು ನಿರಂತರವಾಗಿ ಅಗರಬತ್ತಿಗಳನ್ನು ಉರಿಸುತ್ತಿದ್ದರು. ಅವರು ಅದನ್ನು ಗಾದಿಯಿಂದ ಮುಚ್ಚಿದ್ದರು ಮತ್ತು ದೇಹದಿಂದ ಹೊರಹೊಮ್ಮುವ ಅಹಿತಕರ ವಾಸನೆ ಸಾಹಿಸಲು ಸಾಧ್ಯವಾಗದೇ ಇದ್ದಾಗ ಮನೆ ಮಹಡಿ ಹೋಗಿ ಇರುತ್ತಿದ್ದಾಗಿ ಅವರು ತಿಳಿಸಿದ್ದಾರೆ. ಛಾವಣಿಯ ಮೇಲೆ ಊಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಜಗಳದಿಂದಾಗಿ ಮಹಿಳೆಯ ಪತಿ ಕೆಲ ವರ್ಷಗಳ ಪ್ರತ್ಯೇಕವಾಗಿದ್ದ. ಹೆಂಡತಿ ಸತ್ತ ಬಳಿಕವೂ ವಾಪಸ್ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ, ಮಹಿಳೆಯ ಮಕ್ಕಳಾದ ಪಲ್ಲವಿ ತ್ರಿಪಾಠಿ (27) ಮತ್ತು ವೈಶ್ವಿಕಿ ತ್ರಿಪಾಠಿ (18) ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಬ್ಬರೂ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಚಿಕ್ಕಪ್ಪ ಧರ್ಮೇಂದ್ರ ಚತುರ್ವೇದಿ ಅವರಿಗೆ ಮನೋವೈದ್ಯರಿಂದ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ  ತಿಳಿಸಿದ್ದಾರೆ.
ಧರ್ಮೇಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ ಉಷಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಧರ್ಮೇಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ ಉಷಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅಸ್ಥಿಪಂಜರವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ಅಪರಾಧ ಕೃತ್ಯ ನಡೆದಿರುವ ಸಾಧ್ಯತೆಗಳನ್ನು ಲಂಕಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಕಾಂತ್ ಮಿಶ್ರಾ ತಳ್ಳಿಹಾಕಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಮದುವೆಯಾದ 10 ವರ್ಷಗಳ ನಂತರ ಪತಿ ದೇವೇಶ್ವರ ತ್ರಿಪಾಠಿ ಅವರೊಂದಿಗಿನ ಜಗಳದ ನಂತರ ಉಷಾ ತ್ರಿಪಾಠಿ ತಮ್ಮ ತಂದೆ ನಿರ್ಮಿಸಿದ ಮನೆಯಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಉಷಾ ಅವರು ಕಾಸ್ಮೆಟಿಕ್ ಅಂಗಡಿ ನಡೆಸುತ್ತಿದ್ದರು, ಅದೇ ಅವರ ಆದಾಯದ ಮೂಲವಾಗಿತ್ತು. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಂಗಡಿಯನ್ನು ಮುಚ್ಚಲಾಗಿತ್ತು.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement