ಬಾಂಗ್ಲಾದೇಶ Vs ನ್ಯೂಜಿಲೆಂಡ್ ಟೆಸ್ಟ್ : ಬಾಲ್‌ ಸ್ಟಂಪಿಗೆ ಬಡಿಯದಂತೆ ತಡೆಯಲು ಚೆಂಡನ್ನು ಕೈಯಲ್ಲಿ ಹಿಡಿದು ಔಟಾದ ಬಾಂಗ್ಲಾದೇಶದ ಬ್ಯಾಟರ್ | ವೀಕ್ಷಿಸಿ

ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಬುಧವಾರ ಅಪರೂಪದ ವಿದ್ಯಮಾನಕ್ಕೆ ಔಟಾದರು.
ವಿಕೆಟ್ ಕೀಪರ್ ಬ್ಯಾಟರ್ ಸ್ಟಂಪ್ ಸುತ್ತಲೂ ಬಾಲ್‌ ಇರುವಾಗ ಅದನ್ನು ಕೈಯಲ್ಲಿ ತಡೆದಿದ್ದಕ್ಕಾಗಿ ಔಟಾಗಿದ್ದಾರೆ. ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಅವರ ಓವರ್‌ನಲ್ಲಿ ಚೆಂಡನ್ನು ಹ್ಯಾಂಡಲ್ ಮಾಡಿದ್ದಕ್ಕಾಗಿ ಔಟಾದರು. ಈ ಪ್ರಕ್ರಿಯೆಯಲ್ಲಿ, ರಹೀಮ್ ಬಾಂಗ್ಲಾದೇಶದಿಂದ ಈ ತರಹದ ವಿದ್ಯಮಾನದಲ್ಲಿ ಔಟ್‌ ಆದ ಮೊದಲ ಆಟಗಾರರಾದರು. ಅವರು ಮೊಹಿಂದರ್ ಅಮರನಾಥ್, ಮೊಹ್ಸಿನ್ ಖಾನ್, ಮೈಕೆಲ್ ವಾನ್ ಮುಂತಾದ ಆಟಗಾರರನ್ನು ಒಳಗೊಂಡ ಅಪರೂಪದ ಕ್ರಿಕೆಟಿಗರ ಪಟ್ಟಿಗೆ ಸೇರಿಕೊಂಡರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಕ್ರಿಕೆಟಿಗರು ಬಾಲ್ ಹ್ಯಾಂಡಲ್ ಮಾಡುವಾಗ ಔಟ್ ಆಗಿಲ್ಲ. ಆದರೆ ರಹೀಮ್ ಅವರು ಎಸೆತದ ನಂತರ ಈನ್ನೂ ಬಾಲ್‌ ಡೆಡ್‌ ಆಗುವ ಮೊದಲೇ ಕೈಗಳನ್ನು ಬಳಸಿ ಅದನ್ನು ಸ್ಟಂಪಿಗೆ ಹೋಗದಂತೆ ತಡೆದಿದ್ದರಿಂದ ಔಟಾದ 11 ನೇ ಆಟಗಾರರಾದರು.
ಅಪರೂಪದ ಕಾರಣಕ್ಕಾಗಿ ಪೆವಿಲಿಯನ್‌ಗೆ ಮರಳುವ ಮೊದಲು ರಹೀಮ್ 83 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ರಹೀಮ್ ತನ್ನ ಕೈಗಳನ್ನು ಬಳಸಿ ಅದನ್ನು ಬೇರೆಡೆಗೆ ತಿರುಗಿಸುವ ಮೊದಲು ಚೆಂಡು ಸ್ಟಂಪ್‌ಗೆ ತಗುಲಿರಲಿಲ್ಲ ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಫೀಲ್ಟ್‌ ಅಂಪೈರ್‌ಗಳು ನಿರ್ಧಾರವನ್ನು ಮೂರನೇ ಅಂಪೈರ್‌ಗೆ ಉಲ್ಲೇಖಿಸಿದರು, ಅವರು ಔಟ್‌ ನೀಡಿದರು. ‘ಹ್ಯಾಂಡ್ಲಿಂಗ್ ದಿ ಬಾಲ್’ ನಡೆದಾಗ ಔಟಾಗುವ ಕುರಿತು ನಿಯಮ ಪುಸ್ತಕವು ಹೀಗೆ ಹೇಳುತ್ತದೆ..
ಹ್ಯಾಂಡಲ್ ಬಾಲ್:(ಎ) ಬ್ಯಾಟ್ಸ್ ಮನ್ ಔಟಾಗದಿದ್ದರೂ ಅವನು ಚೆಂಡನ್ನು ಉದ್ದೇಶಪೂರ್ವಕವಾಗಿ ಕೈಯಿಂದ ಸ್ಪರ್ಶಿಸಿದರೆ ಅಥವಾ ಫೀಲ್ಡರ್ ಒಪ್ಪಿಗೆಯಿಲ್ಲದೆ ಬ್ಯಾಟ್ ಹಿಡಿದುಕೊಳ್ಳದ ಕೈಗಳಿಂದ ಚೆಂಡನ್ನು ಹ್ಯಾಂಡಲ್ ಮಾಡುತ್ತಾನೆ. (b) ಬಾಲ್ ಆಡುತ್ತಿರುವಾಗ ಮತ್ತು ಫೀಲ್ಡರ್‌ನ ಒಪ್ಪಿಗೆಯಿಲ್ಲದೆ, ಬ್ಯಾಟ್ಸ್‌ಮನ್ ಯಾವುದೇ ಫೀಲ್ಡರ್‌ಗೆ ಚೆಂಡನ್ನು ಹಿಂತಿರುಗಿಸಲು ಬ್ಯಾಟ್ ಅನ್ನು ಹಿಡಿಯದೆ ತನ್ನ ಕೈ ಅಥವಾ ಕೈಗಳನ್ನು ಬಳಸಿದರೆ ಈ ನಿಯಮದಡಿ ಬ್ಯಾಟ್ಸ್‌ಮನ್ ಔಟ್ ಆಗುತ್ತಾನೆ.
ಚೆಂಡನ್ನು ಹ್ಯಾಂಡಲ್ ಮಾಡಿದಾಗ : ಮೇಲಿನ (ಎ) ಹೊರತಾಗಿಯೂ, ಬ್ಯಾಟ್ಸ್‌ಮನ್ ಚೆಂಡು ಬಡಿದು ಸಂಭವಿಸಬಹುದಾದ ಗಾಯದಿಂದ ತಪ್ಪಿಸಿಕೊಳ್ಳು ಚೆಂಡನ್ನು ಕೈಯಲ್ಲಿ ಹಿಡಿದರೆ ಈ ನಿಯಮದಡಿ ಔಟಾಗುವುದಿಲ್ಲ.
ಇದರಲ್ಲಿ ಬೌಲರ್‌ಗೆ ಔಟಾದ ಶ್ರೇಯಸ್ಸು ಸಿಗುವುದಿಲ್ಲ ಎಂಬುದನ್ನು ಸಹ ಗಮನಿಸಬೇಕು

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement