ಬೆಳಗಾವಿ ಬಳಿ ಭೀಕರ ಅಪಘಾತ : ಇಬ್ಬರು ಸಜೀವ ದಹನ

ಬೆಳಗಾವಿ: ದೇವಗಿರಿ ಹಾಗೂ ಬಂಬರಗಾ ಗ್ರಾಮಗಳ ಮಧ್ಯೆ ಇರುವ ಸರ್ಕಲ್ ನಲ್ಲಿ ಟಿಪ್ಪರ್- ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ವರ್ಷದ ಬಾಲಕಿ, 26 ವರ್ಷದ ಯುವಕ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.
ಬುಧವಾರ ರಾತ್ರಿ 10 : 30 ಗಂಟೆ ಸುಮಾರಿಗೆ ಕಂಗ್ರಾಳಿ ಕೆ.ಎಚ್. ಗ್ರಾಮದ ಕಡೆಯಿಂದ ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಸ್ವಗ್ರಾಮ ಬಂಬರಗಾ ಗ್ರಾಮಕ್ಕೆ ಹೋಗತ್ತಿದ್ದ ಸಮಯದಲ್ಲಿ ಕೇದನೂರ ಗ್ರಾಮದ ಕಡೆಯಿಂದ ಭೂತರಾಮನಹಟ್ಟಿ ಗ್ರಾಮದ ಕಡೆಗೆ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಡಿಕ್ಕೆ ಹೊಡೆದ ಕ್ಷಣಾರ್ಧದಲ್ಲಿ ಕಾರು ಮತ್ತು ಟಿಪ್ಪರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ (24), ಮಚ್ಚೆ ಗ್ರಾಮದ ಬಾಲಕಿ ಸಮೀಕ್ಷಾ ಡಿಯೇಕರ(12) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ಮಹೇಶ ಬೆಳಗಾಂವಕರ ಹಾಗೂ ಸ್ನೇಹಾ ಬೆಳಗುಂದಕರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಕಾಕತಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ಟಿಪ್ಪರ್ ಡ್ರೈವರ್ ಶರಣಾಗಿದ್ದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ಪೆನ್ ಡ್ರೈವ್ ಪ್ರಕರಣ : ಡಿಕೆ ಶಿವಕುಮಾರ ವಿರುದ್ಧ ಪೋಸ್ಟರ್‌ ಸಮರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement