ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ…: ಎಣಿಕೆ ನಡೆಯುತ್ತಿದೆ…ಹಣ ಹೆಚ್ಚುತ್ತಲೇ ಇದೆ…!

ನವದೆಹಲಿ: ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆಯು (Income Tax Department) ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿ ಮತ್ತು ಕಂಪನಿಗೆ ಸಂಪರ್ಕ ಇರುವ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣ ವಶಕ್ಕೆ ಪಡೆದಿದೆ. ಆದಾಯ ತೆರಿಗೆ ದಾಳಿಯಲ್ಲಿ ಭಾರತದ ಅತಿದೊಡ್ಡ ನಗದು ವಸೂಲಿಯಾಗುವ ಸಾಧ್ಯತೆಯಿದ್ದು, ನಿನ್ನೆಯಿಂದ ಮೂರು ರಾಜ್ಯಗಳಲ್ಲಿ ನಡೆಸಿದ ದಾಳಿಗಳಲ್ಲಿ ಈವರೆಗೆ ಕನಿಷ್ಠ ₹ 290 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಹೆಚ್ಚಿನ ಹಣವನ್ನು ಎಣಿಕೆ ಮಾಡಬೇಕಾಗಿರುವುದರಿಂದ ಮತ್ತು ಹೆಚ್ಚಿನ ಸ್ಥಳಗಳಲ್ಲಿ ನಗದು ಬಚ್ಚಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ದೊರೆತಿರುವುದರಿಂದ ಮೊತ್ತ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್ , ಪಶ್ಚಿಮ ಬಂಗಾಳ ಹಾಗೂ ಒಡಿಶಾ ಮೂಲದ ಡಿಸ್ಟಿಲರಿ ಕಚೇರಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಮೂರು ಸ್ಥಳಗಳಲ್ಲಿ ಏಳು ಕೊಠಡಿಗಳು ಮತ್ತು ಒಂಬತ್ತು ಲಾಕರ್‌ಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ನಗದನ್ನು ಬೀರು ಮತ್ತಿತರ ಪೀಠೋಪಕರಣಗಳ ಒಳಗೆ ತುಂಬಿರುವುದು ಪತ್ತೆಯಾಗಿದೆ. ಹೆಚ್ಚಿನ ನಗದು ಮತ್ತು ಚಿನ್ನಾಭರಣಗಳು ಸಿಗುವ ಇತರ ಸ್ಥಳಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಅವರು ಹೇಳಿದರು.
ಶನಿವಾರ ಬೌದ್ ಡಿಸ್ಟಿಲರಿ ಮತ್ತು ಅದಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ; ಬಲ್ದೇವ್ ಸಾಹು ಇನ್ಫ್ರಾ, ಬೌದ್ ಡಿಸ್ಟಿಲರಿಯ ಸಮೂಹ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ತೆರಿಗೆ ಇಲಾಖೆಯು ಕರೆನ್ಸಿ ನೋಟುಗಳನ್ನು ಎಣಿಸಲು ಸುಮಾರು 40 ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ತರಲಾಗಿದೆ. ಮತ್ತು ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಇಲಾಖೆ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಕರೆತಂದಿದೆ, ಇದು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮತ್ತು ಇತರರ ವಿರುದ್ಧ ದಾಳಿಯ ನಂತರ ಡಿಸೆಂಬರ್ 6 ರಂದು ಪ್ರಾರಂಭವಾಯಿತು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

ಐಟಿ ಇಲಾಖೆ ಇನ್ನೇನು ಮಾಡುತ್ತಿದೆ?
ಇವುಗಳ ಜೊತೆಗೆ ವಶಪಡಿಸಿಕೊಂಡ ಹಣವನ್ನು ರಾಜ್ಯದ ಸರ್ಕಾರಿ ಬ್ಯಾಂಕ್‌ಗಳಿಗೆ ಸಾಗಿಸಲು ಹೆಚ್ಚಿನ ವಾಹನಗಳನ್ನು ಇಲಾಖೆಯಿಂದ ಕೋರಲಾಗಿದೆ.
ಜಾರ್ಖಂಡ್‌ನ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಧೀರಜಪ್ರಸಾದ ಸಾಹು ಅವರಿಗೆ ಸಂಬಂಧಿಸಿದ ಆವರಣ ಸಹ ಶೋಧದ ಭಾಗವಾಗಿ ಒಳಗೊಂಡಿದೆ” ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳು ಈಗ ವಿವಿಧ ಕಂಪನಿಯ ಅಧಿಕಾರಿಗಳು ಮತ್ತು ಭಾಗಿಯಾಗಿರುವ ಇತರ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಲೆಕ್ಕಕ್ಕೆ ಸಿಗದ ಒಟ್ಟು ನಗದು ವಶ ಸುಮಾರು 290 ಕೋಟಿ ರೂ.ಗಳು ಎಂದು ಹೇಳಲಾಗಿದ್ದು, ಇಲ್ಲಿಯವರೆಗೆ 250 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಒಡಿಶಾದ ಸರ್ಕಾರಿ ಬ್ಯಾಂಕ್ ಶಾಖೆಗಳಲ್ಲಿ ನಿರಂತರವಾಗಿ ಹಣವನ್ನು ಠೇವಣಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

“ಇದು ಒಂದೇ ಸಮೂಹ ಮತ್ತು ಅದರ ಸಂಬಂಧಿತ ಘಟಕಗಳ ವಿರುದ್ಧದ ಕ್ರಮದ ಭಾಗವಾಗಿ ದೇಶದಲ್ಲಿ ಏಜೆನ್ಸಿಯಿಂದ ಮಾಡಿದ ಅತಿ ಹೆಚ್ಚು ನಗದು ವಶಪಡಿಸಿಕೊಳ್ಳುವಿಕೆಯಾಗಿದೆ” ಎಂದು ಮೂಲಗಳು ಹೇಳುತ್ತವೆ.
ಒಡಿಶಾದಲ್ಲಿ ಮದ್ಯದ ಡಿಸ್ಟಿಲರಿ ಗುಂಪಿನ ಮೇಲೆ ಐಟಿ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಶುಕ್ರವಾರದವರೆಗೆ ಸುಮಾರು 225 ಕೋಟಿ ರೂ.ಗಳನ್ನು ವಶಪಡಿಸಿಕೊಂಡ ನಂತರ ಶನಿವಾರ ಬೋಲಂಗಿರ್ ಜಿಲ್ಲೆಯ ಸುದಾಪಾರಾ ಪ್ರದೇಶದಲ್ಲಿ ದೇಶ ನಿರ್ಮಿತ ಮದ್ಯ ತಯಾರಕರ ನಿವಾಸದಿಂದ 20 ಬ್ಯಾಗ್‌ಲೋಡ್ ನಗದನ್ನು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement