ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ಗಣಪತಿ ಭಟ್‌ ಹಾಸಣಗಿಗೆ ಪ್ರತಿಷ್ಠಿತ ‌ʼತಾನಸೇನ್‌ ಸಮ್ಮಾನ್ʼ ಪುರಸ್ಕಾರ

ಹುಬ್ಬಳ್ಳಿ: ಮಧ್ಯಪ್ರದೇಶ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ʼತಾನಸೇನ್‌ʼ ಸಮ್ಮಾನ ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್‌ ಹಾಸಣಗಿ ಆಯ್ಕೆಯಾಗಿದ್ದಾರೆ. ಇದೇ ಡಿಸೆಂಬರ್ 24ರಂದು ಗ್ವಾಲಿಯರ್‌ನಲ್ಲಿ ನಡೆಯಲಿರುವ ತಾನ್‌ಸೇನ್‌ ಸಂಗೀತ ಸಮಾರೋಹ ಕಾರ್ಯಕ್ರಮದಲ್ಲಿ ಅವರು ಪುರಸ್ಕಾರ ಸ್ವೀಕರಿಸಲಿದ್ದಾರೆ.
ಪ್ರಶಸ್ತಿ ನನಗೆ ಸಂತೋಷ ತಂದಿದೆ….
ಪಂಡಿತ ಗಣಪತಿ ಭಟ್‌ ಹಾಸಣಗಿ ಅವರು ತಮಗೆ ಪ್ರಶಸ್ತಿಗೆ ಆಯ್ಕೆ ಆಗಿರುವುದನ್ನು  ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘ನನಗೆ 70 ವರ್ಷ ದಾಟಿದೆ. ‌ಇಷ್ಟು ವರ್ಷ ಸಂಗೀತ ಕ್ಷೇತ್ರದಲ್ಲಿ ನನ್ನ ಸೇವೆ ಗುರುತಿಸಿ ಗೌರವಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ಪಂಡಿತ ಗಣಪತಿ ಭಟ್‌ ಹಾಸಣಗಿ ತಿಳಿಸಿದರು.
ನಾನು 1999 ಹಾಗೂ 2007ರಲ್ಲಿ ತಾನಸೇನ ಸಂಗೀತ ಸಮಾರೋಹದಲ್ಲಿ ಹಾಡಿದ್ದನ್ನು ನೆನಪಿಸಿಕೊಂಡ ಅವರು, ಆಯ್ಕೆ ಮಂಡಳಿ ಸದಸ್ಯರು ಸಂಗೀತ ಕ್ಷೇತ್ರದಲ್ಲಿ ನನ್ನ ಕಲಾಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಸಮೀಪದ ಹಾಸಣಗಿ ಗ್ರಾಮದವರಾದ ಗಣಪತಿ ಭಟ್ಟರು ಕಿರಾಣಾ- ಗ್ವಾಲಿಯರ್‌ ಪರಂಪರೆಗೆ ಸೇರಿದ ಧಾರವಾಡದ ಪಂಡಿತ ಬಸವರಾಜ ರಾಜಗುರು ಅವರ ಶಿಷ್ಯರಾಗಿದ್ದಾರೆ. ಭಟ್ ಅವರು 1966 ರಿಂದ 1991 ರವರೆಗೆ ರಾಜಗುರು ಅವರ ಬಳಿ ತರಬೇತಿ ಪಡೆದರು. ನಂತರ, ಅವರು ಗ್ವಾಲಿಯರ್ ಘರಾನಾದ ಪಂಡಿತ ಸಿ.ಆರ್. ವ್ಯಾಸ ಅವರಲ್ಲಿಯೂ ಅಧ್ಯಯನ ಮಾಡಿದರು. ಅವರು ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ ಪ್ರಾಂಶುಪಾಲರಾಗಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993), ವತ್ಸಲಾಭಾಯಿ ಭೀಮಸೇನ್‌ ಜೋಶಿ ಪ್ರಶಸ್ತಿ (2006), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007), 2015 ರಲ್ಲಿ ಪುಟ್ಟರಾಜ ಗವಾಯಿ ಪ್ರಶಸ್ತಿ, 2016 ರಲ್ಲಿ ಸವಾಯಿ ಗಂಧರ್ವ ಪುರಸ್ಕಾರ
2017 ರಲ್ಲಿ ನಿಜಗುಣ ಪುರಂದರ ಪ್ರಶಸ್ತಿ ಹಾಗೂ 2020 ರಲ್ಲಿ ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement