ರಾಜಸ್ಥಾನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ತಂದೆ-ತಾಯಿಯ ಪಾದ ತೊಳೆದ ಭಜನಲಾಲ ಶರ್ಮಾ | ವೀಕ್ಷಿಸಿ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಭಜನಲಾಲ ಶರ್ಮಾ ಅವರು ಶುಕ್ರವಾರ ತಮ್ಮ ಮನೆಯಲ್ಲಿ ತಂದೆ ಸ್ವರೂಪ್ ಶರ್ಮಾ ಅವರ ಆಶೀರ್ವಾದ ಪಡೆದರು.
ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ ಅವರು ತಮ್ಮ ತಂದೆ-ತಾಯಿಯ ಪಾದಗಳನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಶರ್ಮಾ ಶುಕ್ರವಾರ (ಡಿಸೆಂಬರ್‌ ೧೫) ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಭಜನಲಾಲ ಶರ್ಮಾ ಮತ್ತು ಉಪ ಮುಖ್ಯಮಂತ್ರಿಗಳಾದ ಪ್ರೇಮಚಂದ ಬೈರ್ವಾ ಮತ್ತು ದಿಯಾ ಕುಮಾರಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಭಜನಲಾಲ ಅವರ ತಂದೆ ಸ್ವರೂಪ್ ಶರ್ಮಾ ಅವರು “ನನಗೆ ಸಂತೋಷವಾಗಿದೆ, ‘ಭಗವಾನ್ ಕಿ ಲೀಲಾ ಹೈ’ (ಇದು ದೇವರ ಆಟ). ಆತ ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದ್ದಾರೆ. ಭಜನಲಾಲ ಶರ್ಮಾ ಅವರ ತಾಯಿ ಗೋಮತಿ ದೇವಿ, “ಸಾರ್ವಜನಿಕರು ಆತನಿಗೆ ಪ್ರೀತಿಯನ್ನೇ ಸುರಿಸಿದರು. ನಾನು ಪ್ರಧಾನಿ ಮೋದಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ರಾಜ್ಯದ ಅಭಿವೃದ್ಧಿ ಆಗಬೇಕು. ಆತ ಮಾಡುತ್ತಾನೆ ಎಂದು ಹೇಳಿದ್ದಾರೆ.
ದಿಯಾ ಕುಮಾರಿ ಮತ್ತು ಪ್ರೇಮಚಂದ ಬೈರ್ವಾ ಅವರು ರಾಜಸ್ಥಾನದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ....| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ...!

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಭಜನಲಾಲ ಶರ್ಮಾ ಅವರು ಪ್ರಧಾನಿ ಮೋದಿಯವರ ಭರವಸೆಯನ್ನು ರಾಜ್ಯದ ಜನತೆಗೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ.
ಹಿಂದಿನ ದಿನ, ಭಜನಲಾಲ ಅವರು ಗೋವಿಂದ ದೇವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ದೇವರ ಆಶೀರ್ವಾದವನ್ನು ಕೋರಿದರು.
ಭಜನಲಾಲ ಶರ್ಮಾ ಅವರು ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಬಿಜೆಪಿಯು ರಾಜ್ಯದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಮಾಡಲು ನಿರ್ಧರಿಸಿದೆ ಮತ್ತು ಆ ಸ್ಥಾನಗಳಿಗೆ ದಿಯಾ ಕುಮಾರಿ ಮತ್ತು ಪ್ರೇಮಚಂದ ಬೈರ್ವಾ ಅವರನ್ನು ಆಯ್ಕೆ ಮಾಡಿದೆ. ಬಿಜೆಪಿ 115 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ ಮತ್ತು ಕಾಂಗ್ರೆಸ್‌ ಪಕ್ಷವು 69 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಾಜಸ್ಥಾನದಲ್ಲಿ ನವೆಂಬರ್ 25 ರಂದು 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಪ್ರಮುಖ ಸುದ್ದಿ :-   ಟಿ20 ವಿಶ್ವಕಪ್ ಕ್ರಿಕೆಟ್‌ 2024 : 15 ಆಟಗಾರರ ಭಾರತದ ತಂಡ ಪ್ರಕಟ ; ಕೆಎಲ್ ರಾಹುಲ್ ಗೆ ಕೊಕ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement