ವೀಡಿಯೊ…| ಉಪರಾಷ್ಟ್ರಪತಿಯವರ ʼಅನುಕರಣೆʼ ಮಾಡಿ ಅಣಕಿಸಿದ ಟಿಎಂಸಿ ಸಂಸದ: ವೀಡಿಯೊ ಚಿತ್ರೀಕರಿಸಿದ ರಾಹುಲ್ ಗಾಂಧಿ

ನವದೆಹಲಿ : ರಾಜ್ಯಸಭೆ ಹಾಗೂ ಲೋಕಸಭೆಯಿಂದ ಅಮಾನತುಗೊಂಡ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವ ವೇಳೆ, ಟಿಎಂಸಿ ಸಂಸದರಾದ ಕಲ್ಯಾಣ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಚೇರ್ಮನ್‌ ಜಗದೀಪ ಧನಕರ್ ಅವರನ್ನು ಅಣಕಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕ ಅದರ ಚಿತ್ರೀಕರಿಸಿದ್ದಾರೆ. ಈ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಧನಕರ್‌ ಅವರು ಇದು ‘ನಾಚಿಕೆಗೇಡಿತನ’ ಎಂದು ಹೇಳಿದ್ದಾರೆ.
“ಒಬ್ಬ ಸಂಸದ ಅಣಕಿಸುತ್ತಿರುವುದು ಹಾಗೂ ಮತ್ತೊಬ್ಬ ಸಂಸದ ಆ ಘಟನೆಯ ವಿಡಿಯೋ ಚಿತ್ರೀಕರಿಸುತ್ತಿರುವುದು ನಾಚಿಕೆಗೇಡು, ಅಪಹಾಸ್ಯಕರ ಮತ್ತು ಒಪ್ಪುವಂತಹದ್ದಲ್ಲ” ಎಂದು ರಾಜ್ಯಸಭೆಯಲ್ಲಿ ಧನಕರ್ ಆಕ್ರೋಶ ವ್ಯಕ್ತಪಡಿಸಿದರು.”ಸಂಸದರು ಅಪಹಾಸ್ಯ ಮಾಡುತ್ತಿರುವುದು ನಾಚಿಕೆಗೇಡಿನ, ಹಾಸ್ಯಾಸ್ಪದ, ಸ್ವೀಕಾರಾರ್ಹವಲ್ಲ ಮತ್ತು ಎರಡನೇ ಸಂಸದರು ಆ ಘಟನೆಯನ್ನು ವಿಡಿಯೋ ಮಾಡುತ್ತಿದ್ದಾರೆ” ಎಂದು ಧನಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ಅನುಚಿತ ವರ್ತನೆ ಪ್ರದರ್ಶಿಸಿದ ಆರೋಪದಲ್ಲಿ ಉಭಯ ಸದನಗಳಿಂದ ಈವರೆಗೂ 141 ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ. ಇದನ್ನು ವಿರೋಧಿಸಿ ಹಾಗೂ ಸಂಸತ್ತಿಲ್ಲಿ ಕಳೆದ ವಾರ ನಡೆದ ಭದ್ರತಾ ವೈಫಲ್ಯ ಪ್ರಕರಣದ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ನೂತನ ಸಂಸತ್ತಿನ ‘ಮಕರ ದ್ವಾರ’ದ ಮೆಟ್ಟಿಲುಗಳ ಮೇಲೆ ಕುಳಿತು ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರ ಮಾತು ಹಾಗೂ ಹಾವಭಾವಗಳನ್ನು ಅನುಕರಿಸಿ ನಟನೆ ಮಾಡುವ ಮೂಲಕ ಅವರನ್ನು ಅಣಕಿಸಿದ್ದಾರೆ. ಅದನ್ನು ಕಂಡು ಉಳಿದ ಸಂಸದರು ಜೋರಾಗಿ ನಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಅವರ ಎದುರು ನಿಂತಿದ್ದ ರಾಹುಲ್ ಗಾಂಧಿ, ಅದನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿರುವುದು ಸಹ ಕಂಡುಬಂದಿದೆ.

ಕಾನೂನು ಸಚಿವ ಅರ್ಜುನ ರಾಮ ಮೇಘವಾಲ್ ಘಟನೆಯನ್ನು ಖಂಡಿಸಿದ್ದು, ಕಲ್ಯಾಣ ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಸದನ ಮತ್ತು ಚೇರ್ಮನ್‌ ಅಧಿಕಾರ ಕಡೆಗಣಿಸಿರುವ ಸದಸ್ಯರನ್ನು (ಸಂಸದರನ್ನು) ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.
ವೀಡಿಯೊ ಹಂಚಿಕೊಂಡಿರುವ ಬಿಜೆಪಿ, ಉಪರಾಷ್ಟ್ರಪತಿ ಅವರನ್ನು ಅಣಕಿಸಿದ್ದಕ್ಕಾಗಿ ಹರಿಹಾಯ್ದಿದೆ. ವಿಪಕ್ಷ ಸಂಸದರನ್ನು ಏಕೆ ಅಮಾನತು ಮಾಡಲಾಗಿದೆ ಎಂದು ದೇಶ ಅಚ್ಚರಿ ಪಡುತ್ತಿದ್ದರೆ, ಈಗ ಕಾರಣ ಗೊತ್ತಾಗಿದೆ. ಗೌರವಾನ್ವಿತ ಉಪ ರಾಷ್ಟ್ರಪತಿ ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಣಕಿಸಿದರೆ, ರಾಹುಲ್ ಗಾಂಧಿ ಅವರನ್ನು ಜೋರಾಗಿ ಹುರಿದುಂಬಿಸಿದ್ದಾರೆ. ಅವರು ಸದನದಲ್ಲಿ ಹೇಗಿದ್ದರು ಎಂಬುದನ್ನು ಊಹಿಸಬಹುದು” ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement