ಕಾಣೆಯಾಗಿರುವ ಭಾರತೀಯಳ ಬಗ್ಗೆ ಮಾಹಿತಿ ನೀಡಿದವರಿಗೆ $10,000 ಬಹುಮಾನ ಘೋಷಿಸಿದ ಅಮೆರಿಕದ ಎಫ್‌ಬಿಐ

ನ್ಯೂಯಾರ್ಕ್: ನಾಲ್ಕು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಕಾಣೆಯಾದ ಭಾರತದ 29 ವರ್ಷದ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ನೀಡಿದವರಿಗೆ ಎಫ್‌ಬಿಐ 10,000 USD ವರೆಗೆ ಬಹುಮಾನ ಘೋಷಿಸಿದೆ.
ಏಪ್ರಿಲ್ 29, 2019 ರ ಸಂಜೆ ಮಯೂಷಿ ಭಗತ್ ಅವರು “ಬಣ್ಣದ ಪೈಜಾಮ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್” ಧರಿಸಿ ಜರ್ಸಿ ಸಿಟಿಯಲ್ಲಿರುವ ತನ್ನ ಅಪಾರ್ಟ್ಮೆಂಟ್‌ನಿಂದ ಹೊರಹೋಗುತ್ತಿರುವಾಗ ಕೊನೆಯ ಬಾರಿಗೆ ಕಂಡಿದ್ದರು. ಮೇ 1, 2019 ರಂದು ಆಕೆಯ ಮನೆಯವರು ಆಕೆ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಎಫ್‌ಬಿಐ (FBI) ನೆವಾರ್ಕ್ ಫೀಲ್ಡ್ ಕಚೇರಿ ಮತ್ತು ಜರ್ಸಿ ಸಿಟಿ ಪೋಲೀಸ್ ಇಲಾಖೆಯು ಮಯೂಷಿ  ಭಗತ್‌ ಅವರ ನಾಪತ್ತೆ ಪ್ರಕರಣ ಭೇದಿಸಲು ಸಾರ್ವಜನಿಕರ ಸಹಾಯವನ್ನು ಕೋರುತ್ತಿದೆ. ಆಕೆಯ ಮಾಹಿತಿಗಾಗಿ ಎಫ್‌ಬಿಐ (FBI) USD 10,000 ವರೆಗೆ ಬಹುಮಾನ ಘೋಷಿಸಿದೆ.

ಕಳೆದ ವರ್ಷ ಜುಲೈನಲ್ಲಿ, ಎಫ್‌ಬಿಐ  ಮಯೂಷಿ ಭಗತ್ ಅವರನ್ನು “ಕಾಣೆಯಾದ ವ್ಯಕ್ತಿಗಳ” ಪಟ್ಟಿಗೆ ಸೇರಿಸಿತು ಮತ್ತು ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೆ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿತು.
ಜುಲೈ 1994 ರಲ್ಲಿ ಭಾರತದಲ್ಲಿ ಜನಿಸಿದ ಮಯೂಷಿ ಭಗತ್ ವಿದ್ಯಾರ್ಥಿ ವೀಸಾದ ಮೇಲೆ ಅಮೆರಿಕದಲ್ಲಿದ್ದರು. ಅವರು ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿದ್ದರು.
ಇಲ್ಲಿ ಎಫ್‌ಬಿಐ ಹೇಳಿಕೆಯ ಪ್ರಕಾರ, ಅವರು ಇಂಗ್ಲಿಷ್, ಹಿಂದಿ ಮತ್ತು ಉರ್ದು ಮಾತನಾಡುತ್ತಾರೆ ಮತ್ತು ಆಕೆಗೆ ನ್ಯೂಜೆರ್ಸಿಯ ಸೌತ್ ಪ್ಲೇನ್‌ಫೀಲ್ಡ್‌ನಲ್ಲಿ ಸ್ನೇಹಿತರಿದ್ದಾರೆ.
FBI ತನ್ನ ವೆಬ್‌ಸೈಟ್‌ನ “ಮೋಸ್ಟ್ ವಾಂಟೆಡ್” ಪುಟದಲ್ಲಿ “ಅಪಹರಣಗಳು/ಕಾಣೆಯಾದ ವ್ಯಕ್ತಿಗಳ” ಪಟ್ಟಿಯಡಿಯಲ್ಲಿ ಮಯೂಷ್‌ ಭಗತ್ ಅವರ ‘ಮಿಸ್ಸಿಂಗ್ ಪರ್ಸನ್’ ಪೋಸ್ಟರ್ ಅನ್ನು ಹಾಕಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement