ಬಿಷ್ಣೋಯ್ ಗ್ಯಾಂಗ್ ಸೇರಿ ಹಲವು ಗ್ಯಾಂಗ್‌ಗಳ ವಿರುದ್ಧ ವಿಶ್ವದಾದ್ಯಂತ ಭಾರಿ ಕಾರ್ಯಾಚರಣೆ: 24 ಜನರ ಬಂಧನ

ನವದೆಹಲಿ: ಭಾರತ ಮೂಲದ ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಜಾಲಗಳ ವಿರುದ್ಧ ಅಮೆರಿಕ, ಕೆನಡಾ ಹಾಗೂ ಯುರೋಪಿನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸೇರಿದಂತೆ ಹಲವು ಅಪರಾಧ ಸಂಘಟನೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕೊಲೆ, ಮಾದಕ ವಸ್ತು ಸಾಗಣೆ, ಸುಲಿಗೆ, ಅಪಹರಣ ಹಾಗೂ ಗಡಿಪಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ … Continued

ಅಧ್ಯಕ್ಷ ಟ್ರಂಪ್ ಒಳಗಿದ್ದಾಗಲೇ ವೈಟ್ ಹೌಸ್ ಬಳಿ ಗುಂಡಿನ ದಾಳಿ: ಭದ್ರತಾ ಸಿಬ್ಬಂದಿ ಗುಂಡಿಗೆ ದಾಳಿಕೋರ ಸಾವು

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತಾ ವಲಯದ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ಚಕಮಕಿ ನಡೆದಿದೆ. ವೈಟ್ ಹೌಸ್ ಭದ್ರತಾ ತಪಾಸಣಾ ಕೇಂದ್ರದ (ಸೆಕ್ಯೂರಿಟಿ ಚೆಕ್‌ಪಾಯಿಂಟ್) ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಯೊಬ್ಬ, ಅಧಿಕಾರಿಗಳು ನಡೆಸಿದ ಪ್ರತಿದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಅಮೆರಿಕ ಸೀಕ್ರೆಟ್ ಸರ್ವಿಸ್ ತಿಳಿಸಿದೆ.  ಕಳೆದ ಒಂದು ತಿಂಗಳ ಅವಧಿಯಲ್ಲಿ … Continued

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸೇರಿ 8 ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದ ಅಮೆರಿಕದ ಎಫ್‌ ಬಿಐ

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ (United States) ಗ್ಯಾಂಗ್‌ಗೆ ಸಂಬಂಧಿತ ಅಪಹರಣ (Kidnapping) ಮತ್ತು ಚಿತ್ರಹಿಂಸೆ ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ (Indian-Origin ) ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂಧಿತರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಬೇಕಾಗಿರುವ ಪಂಜಾಬ್‌ನ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಕೂಡ ಸೇರಿದ್ದಾನೆ. ಬಟಾಲಾ ನಿಷೇಧಿತ ಭಯೋತ್ಪಾದಕ ಸಂಘಟನೆ … Continued

ಅಮೆರಿಕಕ್ಕೆ ʼಜೈವಿಕ ರೋಗಕಾರಕʼ ಕಳ್ಳಸಾಗಣೆ ಮಾಡಿದ ಆರೋಪ ; ಚೀನಾದ ಇಬ್ಬರ ಸಂಶೋಧಕರ ಬಂಧನ

ಅಮೆರಿಕಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಸಂಶೋಧಕರೊಬ್ಬರನ್ನು ಬಂಧಿಸಲಾಗಿದೆ. ಅಪಾಯಕಾರಿ ಜೈವಿಕ ರೋಗಕಾರಕ ಕಳ್ಳಸಾಗಣೆ ಮಾಡಿದ ಕೃತ್ಯವನ್ನು ಅಮೆರಿಕ ಅಧಿಕಾರಿಗಳು ಗಂಭೀರ ಕೃಷಿ ಭಯೋತ್ಪಾದನಾ ಬೆದರಿಕೆ ಎಂದು ಕರೆದಿದ್ದಾರೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ ಬಂಧನವನ್ನು ದೃಢಪಡಿಸಿದ್ದಾರೆ. ಯುನ್‌ಕಿಂಗ್ ಜಿಯಾನ್ ಎಂಬ … Continued

ವೀಡಿಯೊ…| ಅಮೆರಿಕದ ಎಫ್‌ಬಿಐ ನಿರ್ದೇಶಕರಾಗಿ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್

ಭಾರತೀಯ ಮೂಲದ ಕಾಶ್ ಪಟೇಲ್ ಅವರು ಶುಕ್ರವಾರ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಬೈಬಲ್ ಬದಲಿಗೆ, ಪಟೇಲ್ ಅವರು ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರಿಂದ ಪವಿತ್ರ ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. “ಗೀತೆಯ … Continued

ವೀಡಿಯೊ…| ಬಾಲಿವುಡ್ ಸಿನೆಮಾ ಶೈಲಿಯಲ್ಲಿ ನೂತನ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅಭಿನಂದಿಸಿದ ಅಮೆರಿಕ ಶ್ವೇತಭವನದ ಉಪಮುಖ್ಯಸ್ಥ…!

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಷ್ಠಾವಂತ ಬೆಂಬಲಿಗ ಹಾಗೂ ಭಾರತೀಯ ಮೂಲದ ಕಶ್ಯಪ (ಕಾಶ್) ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರಾಗಿದ್ದಾರೆ. ರಿಪಬ್ಲಿಕನ್ ನಿಯಂತ್ರಿತ ಅಮೆರಿಕದ ಸೆನೆಟ್ ಗುರುವಾರ 51-49 ಮತಗಳಿಂದ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಅನುಮೋದಿಸಿತು. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ … Continued

ಅಮೆರಿಕದ ಎಫ್‌ ಬಿಐ (FBI) ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್‌ ಪಟೇಲ್‌ ನೇಮಕ

ವಾಷಿಂಗ್ಟನ್‌: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯುರೋ ಆಫ್‌ ಇನ್‌ವೆಸ್ಟಿಗೇಷನ್‌ (FBI) ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್‌ ಪಟೇಲ್‌ ಅವರು ನೇಮಕಗೊಂಡಿದ್ದಾರೆ. ಪಟೇಲ್‌ ಮೊದಲಿನಿಂದಲೂ ಟ್ರಂಪ್‌ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಸೆನೆಟ್‌ನಲ್ಲಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಶ್‌ ಪಟೇಲ್‌ ಅವರ ನಾಮನಿರ್ದೇಶನದ ಪರವಾಗಿ 51 ಮತಗಳು ಬಂದರೆ, ವಿರೋಧವಾಗಿ 49 ಮತಗಳು ಚಲಾವಣೆಯಾಗಿವೆ. ಎಫ್‌ಬಿಐನ 9 … Continued

ಕಾಣೆಯಾಗಿರುವ ಭಾರತೀಯಳ ಬಗ್ಗೆ ಮಾಹಿತಿ ನೀಡಿದವರಿಗೆ $10,000 ಬಹುಮಾನ ಘೋಷಿಸಿದ ಅಮೆರಿಕದ ಎಫ್‌ಬಿಐ

ನ್ಯೂಯಾರ್ಕ್: ನಾಲ್ಕು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಕಾಣೆಯಾದ ಭಾರತದ 29 ವರ್ಷದ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ನೀಡಿದವರಿಗೆ ಎಫ್‌ಬಿಐ 10,000 USD ವರೆಗೆ ಬಹುಮಾನ ಘೋಷಿಸಿದೆ. ಏಪ್ರಿಲ್ 29, 2019 ರ ಸಂಜೆ ಮಯೂಷಿ ಭಗತ್ ಅವರು “ಬಣ್ಣದ ಪೈಜಾಮ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್” ಧರಿಸಿ ಜರ್ಸಿ ಸಿಟಿಯಲ್ಲಿರುವ ತನ್ನ ಅಪಾರ್ಟ್ಮೆಂಟ್‌ನಿಂದ ಹೊರಹೋಗುತ್ತಿರುವಾಗ ಕೊನೆಯ … Continued