ತನ್ನ ಸಹೋದರನಿಗೆ ಉಚಿತವಾಗಿ ಕಿಡ್ನಿ ನೀಡಿದ ನಂತರ ಮಹಿಳೆಗೆ ವಾಟ್ಸಾಪ್ ಕರೆ ಮೂಲಕ ‘ತ್ರಿವಳಿ ತಲಾಖ್’ ನೀಡಿದ ಪತಿ…!

ತನ್ನ ಸಹೋದರನ ಜೀವವನ್ನು ಉಳಿಸಲು ತನ್ನ ಕಿಡ್ನಿಯನ್ನು ದಾನ ಮಾಡಿದ ತರನ್ನುಮ್ ಎಂದು ಗುರುತಿಸಲಾದ 42 ವರ್ಷದ ಮಹಿಳೆಗೆ ಆಕೆಯ ಪತಿ ವಾಟ್ಸಾಪ್ ಕರೆ ಮೂಲಕ ಮೂರು ಬಾರಿ ‘ತಲಾಖ್’ ಎಂದು ಉಚ್ಚರಿಸುವ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲಾಖ್‌ ನೀಡಿದ ಪತಿಯನ್ನು ಮೊಹಮ್ಮದ್ ರಸೀದ್ ಎಂದು ಗುರುತಿಸಲಾಗಿದ್ದು, ಕಿಡ್ನಿ ದಾನ ಮಾಡಿದ್ದಕ್ಕಾಗಿ ಆಕೆಯ ಸಹೋದರನಿಗೆ 40 ಲಕ್ಷ ರೂ.ಗಳ ಬೇಡಿಕೆಯಿಟ್ಟಿದ್ದಾನೆ, ಆಕೆ ನಿರಾಕರಿಸಿದ್ದು ವಿಚ್ಛೇದನಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಉತ್ತರ ಪ್ರದೇಶದ ಧನೆಪುರ ಪೊಲೀಸ್ ಠಾಣೆಯಲ್ಲಿ ರಸೀದ್ ವಿರುದ್ಧ ಪ್ರಕರಣ ದಾಖಲಾಗಿದೆ.
ವರದಿ ಪ್ರಕಾರ, ತರನ್ನುಮ್ ಮತ್ತು ರಸೀದ್ 25 ವರ್ಷಗಳ ಹಿಂದೆ ವಿವಾಹವಾದರು, ಆದರೆ ತರನ್ನುಮ್ ಐದು ವರ್ಷಗಳಲ್ಲಿ ಗರ್ಭಿಣಿಯಾಗಲು ಸಾಧ್ಯವಾಗದ ಕಾರಣ ರಸೀದ್ ಎರಡನೇ ಮದುವೆಯಾದರು. ಇದರ ಬೆನ್ನಲ್ಲೇ ರಸೀದ್ ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದರು.

ತರನ್ನುಮ್ ಅವರ ದೂರಿನ ಪ್ರಕಾರ, ಮುಂಬೈನಲ್ಲಿ ನೆಲೆಸಿರುವ ಮತ್ತು ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಆಕೆಯ ಸಹೋದರ ಮೊಹಮ್ಮದ್ ಶಾಕಿರ್ ತೀವ್ರ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದರು. ಮುಂಬೈನ ಜಸ್ಲೋಕ್ ಆಸ್ಪತ್ರೆಯ ವೈದ್ಯರು ಅವರ ಜೀವ ಉಳಿಸಲು ಮೂತ್ರಪಿಂಡ ಕಸಿ ಮಾಡಲು ಶಿಫಾರಸು ಮಾಡಿದ್ದರು. ತರನ್ನುಮ್ ತನ್ನ ಪತಿಯೊಂದಿಗೆ ಮಾತನಾಡಿದ ನಂತರ ತನ್ನ ಒಂದು ಮೂತ್ರಪಿಂಡವನ್ನು ತನ್ನ ಅನಾರೋಗ್ಯದ ಸಹೋದರನಿಗೆ ದಾನ ಮಾಡಿದ್ದಾರೆ.
ನಂತರ ದೂರವಾಣಿಯಲ್ಲಿ ತರನ್ನುಮ್‌ ಅವರೊಂದಿಗೆ ಮಾತನಾಡಿದ ರಸೀದ್, ಕಿಡ್ನಿ ದಾನಕ್ಕೆ ಪರಿಹಾರವಾಗಿ ಸಹೋದರನಿಂದ 40 ಲಕ್ಷ ರೂಪಾಯಿಗೆ ಬೇಡಿಕೆಯಿಡುವಂತೆ ಒತ್ತಾಯಿಸಿದಾಗ ಪರಿಸ್ಥಿತಿ ಹದಗೆಟ್ಟಿತು. ತರನ್ನುಮ್ ಅದನ್ನು ನಿರಾಕರಿಸಿದರು. ನಂತರ ಆಕೆಯ ಪತಿ ವಾಟ್ಸಾಪ್ ಕರೆಯಲ್ಲಿ ಮೂರು ಬಾರಿ ‘ತಲಾಖ್’ ಎಂದು ಹೇಳಿ ಮದುವೆ ಕೊನೆಗೊಳಿಸಿದ್ದಾನೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

ತರನ್ನುಮ್ ತನ್ನ ಅತ್ತೆಯವರಿಗೆ ಅದೇ ವಿಷಯ ತಿಳಿಸಿದಾಗ ಆಕೆಗೆ ಮನೆಯಿಂದ ಹೊರಹೋಗುವಂತೆ ಸೂಚಿಸಲಾಯಿತು ಎಂದು ವರದಿಯಾಗಿದೆ. ಅಂದಿನಿಂದ, ತರನ್ನುಮ್‌ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಾರೆ.
ವರದಿ ಪ್ರಕಾರ, ಪೊಲೀಸ್‌ ಅಧಿಕಾರಿ, ರಸೀದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ (ಗಂಡ ಅಥವಾ ಸಂಬಂಧಿಕರಿಂದ ಮಹಿಳೆಗೆ ಕ್ರೌರ್ಯ) ಮತ್ತು ಮುಸ್ಲಿಂ ಮಹಿಳೆಯರ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ದೇಶಕ್ಕೆ ಮರಳಿದ ನಂತರ ರಸೀದ್‌ನನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement