ನಾಳೆ ಕೂಜಳ್ಳಿಯಲ್ಲಿ ಪಂ.ಷಡಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಸಂಗೀತೋತ್ಸವ

ಕುಮಟಾ : ಪಂಡಿತ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತೋತ್ಸವ ಡಿಸೆಂಬರ್‌ 24ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ನಡೆಯಲಿದೆ.
ಡಿಸೆಂಬರ್‌ 24ರಂದು ಭಾನುವಾರ ಬೆಳಿಗ್ಗೆ 9:30 ರಿಂದ ಸಂಗೀತೋತ್ಸವ ಆರಂಭವಾಗಲಿದ್ದು, ದಿನವಿಡೀ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಈ ವರ್ಷದ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರವನ್ನು ಖ್ಯಾತ ಹಾರ್ಮೋನಿಯಂ ವಾದಕ ಮುಂಬೈನ ಪಂ. ವಿಶ್ವನಾಥ ಕಾನ್ಹರೆ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಅಂದು ಬೆಳಿಗ್ಗೆ ಸ್ವರ ಸಂಗಮ ಕೂಜಳ್ಳಿಯ ಅಧ್ಯಕ್ಷ ಎಸ್. ಜಿ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗವಾಯಿ ಅಕಾಡೆಮಿಯ ಖಜಾಂಚಿ ಎಸ್.ಎನ್ ಭಟ್ಟ, ಪ್ರೊ. ಆನಂದ ನಾಯ್ಕ ಚಂದಾವರ ಪಾಲ್ಗೊಳ್ಳಲಿದ್ದಾರೆ.
ಸ್ವರ ನಮನ ಕಾರ್ಯಕ್ರಮದಲ್ಲಿ ಪಂ.ವಿಶ್ವನಾಥ ಕಾನ್ಹರೆ, ಮುಂಬೈ (ಹಾರ್ಮೋನಿಯಂ ಸೋಲೋ) ಪಂ.ರಘುಪತಿ ಹೆಗಡೆ,ಶೀಗೆಹಳ್ಳಿ (ಗಾಯನ) ವಿದುಷಿ ಶಾರದಾ ಭಟ್, ಮೈಸೂರು (ಗಾಯನ), ವಿದುಷಿ ಶಿವಾನಿ ಕಲ್ಯಾಣಪುರ, ವಿಶಾಖಪಟ್ಟಣ (ಗಾಯನ) ವಿದುಷಿ ನಿವೇದಿತಾ ಹಟ್ಟಿಯಂಗಡಿ, ಮುಂಬೈ (ಗಾಯನ), ತೇಜಾ ಭಟ್ಟ ಕವಲಕ್ಕಿ & ಕು.ಸ್ವಾತಂತ್ರ್ಯ ಎ ಎನ್. ಚಂದಾವರ (ಗಾಯನ ಜುಗಲ್‌ಬಂಧಿ), ಬಾಲ ಪ್ರತಿಭೆಗಳಾದ ರಿಷಾ ನಾಯಕ, ಅದಿತಿ ಶಾನಭಾಗ ಹಾಗೂ ಮಾಧವ ಭಟ್ಟ (ಗಾಯನ ತಿಗಲ್ಬಂದಿ) ಕಾರ್ಯಕ್ರಮ ನೀಡಲಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

ತಬಲಾದಲ್ಲಿ ಪ್ರೊ. ಎನ್. ಜಿ ಅನಂತಮೂರ್ತಿ ಗುಣವಂತೆ, ಶಂತನು ಶುಕ್ಲ ಮುಂಬೈ, ವಿದ್ವಾನ್ ಸಂತೋಷ ಚಂದಾವರ, ಅಕ್ಷಯ ಭಟ್ಟ ಅಂಸಳ್ಳಿ, ಭರತ್ ಹೆಗಡೆ ಕವಲಕ್ಕಿ, ದೀಪಕ ಭಟ್ಟ, ಕೂಜಳ್ಳಿ ಸಾಥ್‌ ನೀಡಲಿದ್ದಾರೆ. ಸಂವಾದಿನಿಯಲ್ಲಿ ಗೌರೀಶ ಯಾಜಿ, ಅಜಯ ಹೆಗಡೆ ವರ್ಗಾಸರ, ಸಿಂಚನಾ ಭಟ್ಟ ಸಾಥ್‌-ಸಂಗತ್‌ ನೀಡಲಿದ್ದಾರೆ.
ಇದೇ ದಿನ ಸಂಜೆ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಷಡಕ್ಷರಿ ಗವಾಯಿ ಅಕಾಡೆಮಿಯ ಅಧ್ಯಕ್ಷ ವಸಂತ ರಾವ್ ವಹಿಸಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪಿ. ಎಂ ನಾಯ್ಕ ಮಿರ್ಜಾನ್, ವಿಜ್ಞಾನಿ ಡಾ. ಶ್ರೀಕಾಂತ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಪಾಲ್ಗೊಳ್ಳಲಿದ್ದಾರೆ. ಇದರ ನಂತರದಲ್ಲಿ ಪಂ.ವಿಶ್ವನಾಥ ಕಾನ್ಹರೆ ಅವರ ಹಾರ್ಮೋನಿಯಂ ಸೋಲೋ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಕಲಾಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.

ಪಂಡಿತ ವಿಶ್ವನಾಥ ಕಾನ್ಹರೆ ಬಗ್ಗೆ….
ಈ ವರ್ಷದ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಪಂಡಿತ ವಿಶ್ವನಾಥ ಕಾನ್ಹರೆ ಅವರು ದೇಶದ ಖ್ಯಾತ ಹಾರ್ಮೋನಿಯಂ ವಾದಕರು. ಅವರು ನೂರಾರು ಹಾರಮೋನಿಯಂ ಸೋಲೊ ಕಾರ್ಯಕ್ರಮ ನೀಡಿದ್ದಾರೆ. ನೂರಾರು ಕಾರ್ಯಕ್ರಮಗಳಲ್ಲಿ ಸಾಥ್‌ ಸಂಗತ ಮಾಡಿದ್ದಾರೆ. ಭಾರತದಷ್ಟೇ ಅಲ್ಲ, ರಷ್ಯಾ, ಅಮೆರಿಕ, ಬ್ರೆಜಿಲ್, ಜರ್ಮನಿ ಹಾಗೂ ಹಲವು ದೇಶದಲ್ಲಿ ಕಲಾವಿದರಿಗೆ ಸಾತ್ ನೀಡಿದ್ದಾರೆ. ಸಂವಾದಿನಿಯಲ್ಲಿ ಭಾರತದ ಶ್ರೇಷ್ಠ ಗಾಯಕರಗಳಾದ ಭೀಮಸೇನ ಜೋಶಿ, ಕುಮಾರ ಗಂಧರ್ವ, ಪಂಡಿತ್ ಜಸ್ರಾಜ್, ಪಂಡಿತ್ ಜಿತೇಂದ್ರ ಅಭಿಷೇಕಿ ಸೇರಿದಂತೆ ನೂರಾರು ಮಹಾನ್‌ ಸಂಗೀತಗಾರರಿಗೆ ಸಾತ್ ನೀಡಿ ಮೆಚ್ಚುಗೆ ಪಡೆದವರಾಗಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ : ಗೃಹ ಸಚಿವ ಡಾ..ಪರಮೇಶ್ವರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement